ಪಾಕಿಸ್ತಾನದ ಮಾಜಿ ಪ್ರಧಾನಿ ಖಾನ್‌ಗೆ ಜೈಲಿನಿಂದ ಸಿಕ್ತಾ ಮುಕ್ತಿ?

ಇಸ್ಲಾಮಾಬಾದ್: ಇಮ್ರಾನ್ ಖಾನ್ ಬಹುಶಃ ಕ್ರಿಕೆಟ್ ಆಡುವಾಗ ಬ್ಯಾಟ್ಸ್‌ಮನ್‌ಗಳಿಗೆ ಹೆದರಿದ್ದಕ್ಕಿಂದಲೂ ಹೆಚ್ಚಾಗಿ ಈಗ ಜೈಲಿಗೆ ಹೆದರುತ್ತಿರುವಂತೆ ಕಾಣುತ್ತಿದೆ. ಹೇಗೋ ಮಾಡಿ ಮತ್ತೊಮ್ಮೆ ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಬೇಕು ಅಂತಾ ಪ್ರಯತ್ನಿಸುತ್ತಿದ್ದರು ಇಮ್ರಾನ್ ಖಾನ್. ಇದೀಗ ಅಂದುಕೊಂಡಂತೆ ಇಮ್ರಾನ್‌ಗೆ ರಿಲೀಫ್ ಸಿಕ್ಕಿದೆ. ಹೇಗೆ, ಏನು, ಎತ್ತ? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಮ್ರಾನ್ ಖಾನ್‌ಗೆ ಹಳ್ಳ ತೋಡಿದ್ದವರ ಪೈಕಿ ಪಾಕಿಸ್ತಾನ ಸೇನೆ, ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ ಕೂಡ ಒಗ್ಗೂಡಿತ್ತು ಎನ್ನುವ ಆರೋಪ ಇದೆ. ಆದರೆ ಕೊನೇ ಕ್ಷಣದಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಹಿಡಿತಕ್ಕೆ ತಂದಿತ್ತು. ಖಾನ್ ಬಿಡುಗಡೆ ಆಗುವಲ್ಲಿ ಸುಪ್ರೀಂಕೋರ್ಟ್ ನಿರ್ಧಾರ ಮಹತ್ವದ್ದು. ಹೀಗೆ ಸುಪ್ರೀಂ ಬಲದಿಂದ ರಿಲೀಸ್ ಆಗಿ ಹೊರಬಂದರೂ ಇಮ್ರಾನ್‌ಗೆ ಸಂಕಷ್ಟ ಎದುರಾಗಿದೆ. ಇದೇ ಕಾರಣಕ್ಕೆ ಸಂಕಷ್ಟದಿಂದ ಪಾರಾಗಲು ಇಮ್ರಾನ್ ಖಾನ್ ಪ್ರಯತ್ನಿಸುತ್ತಿದ್ದರು, ಇದೀಗ ಹೋದ ಜೀವ ವಾಪಸ್ ಬಂದಂತಾಗಿದೆ.

Imran Khan bail extended

ಜೈಲಿಗೆ ಹೋಗ್ತಾರಾ ಇಮ್ರಾನ್ ಖಾನ್?

ಹೌದು, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಇಮ್ರಾನ್ ಖಾನ್‌ಗೆ ಜಾಮೀನು ಕೊಟ್ಟಿದೆ. ಅಲ್-ಖಾದಿರ್ ಟ್ರಸ್ಟ್ ಕೇಸ್‌ಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್‌ಗೆ ನೀಡಿದ್ದ ಜಾಮೀನಿನ ಅವಧಿ ವಿಸ್ತರಣೆ ಆಗಿದೆ. ಮೇ 31ರ ತನಕ ನೀಡಲಾಗಿದ್ದ ಜಾಮೀನು ಅವಧಿಯನ್ನ ಈಗ ಜೂನ್ 19ರ ತನಕ ವಿಸ್ತರಣೆ ಮಾಡಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಆದೇಶ ನೀಡಿದೆ. ಇದು ಪಾಕ್ ಮಾಜಿ ಪ್ರಧಾನಿಗೆ ಉಸಿರು ನೀಡಿದೆ. ಹಾಗಾದ್ರೆ ಏನಿದು ಅಲ್-ಖಾದಿರ್ ಟ್ರಸ್ಟ್ ಕೇಸ್‌? ತಿಳಿಯೋಣ ಬನ್ನಿ.

ಕೊನೆಗೂ ಇಮ್ರಾನ್ ಖಾನ್ ಬಚಾವ್?

ಅಲ್-ಖಾದಿರ್ ಟ್ರಸ್ಟ್ ಕೇಸ್‌ ಅಂದ್ರೆ, ಅಲ್-ಖಾದಿರ್ ಟ್ರಸ್ಟ್‌ಗೆ ಭೂಮಿ ನೀಡುವಾಗ ಸಾವಿರಾರು ಕೋಟಿ ರೂಪಾಯಿಯ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇಮ್ರಾನ್ ಖಾನ್ ವಿರುದ್ಧ ಇದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಖಾನ್ ಜೈಲು ಕೂಡ ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಬಿಡುಗಡೆ ಆಗಿದ್ದಾರೆ. ಈಗ ಅಲ್-ಖಾದಿರ್ ಟ್ರಸ್ಟ್ ಕೇಸ್‌ನಲ್ಲಿ ಇಮ್ರಾನ್ ಜಾಮೀನು ವಿಸ್ತರಣೆಯಾಗಿದೆ.

Imran Khan bail extended

ಇಮ್ರಾನ್ ಖಾನ್ ವಿರುದ್ಧ ಉಗ್ರಪಟ್ಟ!

ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆ ವೇಳೆ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತುಗಳನ್ನ ನಾಶ ಮಾಡಿದ ಆರೋಪದ ಹಿನ್ನೆಲೆ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗಲಾಟೆ ಮಾಡಿದವರ ಮೇಲೆ ಉಗ್ರರ ಪಟ್ಟ ಕಟ್ಟಲಾಗಿದೆ. ಹೀಗಾಗಿಯೇ ಇಮ್ರಾನ್ ಖಾನ್ ವಿರುದ್ಧವೂ ಭಯೋತ್ಪಾದನೆ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು. ಆದರೆ ಕೊನೆಗೂ ಅದರಿಂದ ಬಚಾವ್ ಆಗಿದ್ದ ಇಮ್ರಾನ್, ಇದೀಗ ಭ್ರಷ್ಟಾಚಾರ ಆರೋಪದಲ್ಲೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನ ಸೇನೆಯಿಂದಲೇ ಪಿತೂರಿ?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಖಾನ್ ಲಾಕ್ ಆಗಿಲ್ಲ, ಇದೀಗ ಇಮ್ರಾನ್ ಖಾನ್ ಹೊರ ಹೋಗದಂತೆ ಲಾಕ್ ಮಾಡಲಾಗಿದೆ. ಇಷ್ಟೆಲ್ಲಾ ಸಂಕಷ್ಟದ ನಡುವೆಯೂ ಇಮ್ರಾನ್ ಜಾಮೀನು ಗಿಟ್ಟಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+