• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2070 ಇಂಗಾಲ ಮುಕ್ತ ಭಾರತ ಘೋಷಣೆ ಸ್ವಾಗತಿಸಿದ ಐಎಂಎಫ್

|
Google Oneindia Kannada News

ಮಾಲಿನ್ಯ ತಗ್ಗಿಸಲು ಭಾರತ ಮಾಡಿದ್ದ 2070 ಇಂಗಾಲ ಮುಕ್ತ ಭಾರತ ಘೋಷಣೆಯನ್ನು ಅಂತರಾಷ್ಟ್ರೀಯ ನಿಧಿ (ಐಎಂಎಫ್) ಸ್ವಾಗತಿಸಿದೆ.

ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳುವ ಕ್ರಮಗಳು ಜಾಗತಿಕ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಐಎಂಎಫ್ ಅಧಿಕಾರಿ ಗೆರ್ರಿ ರೈಸ್ ಅಭಿಪ್ರಾಯಪಟ್ಟಿದ್ದಾರೆ.

ಪುನರ್ಬಳಕೆ ಇಂಧನ ಉಪಯೋಗ ಮತ್ತು ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು 2070ರ ವೇಳೆಗೆ ಸಂಪೂರ್ಣವಾಗಿ ತಗ್ಗಿಸುವುದಾಗಿ ನರೇಂದ್ರ ಮೋದಿ ಘೋಷಿಸಿದ್ದರು.

ಈಗಾಗಲೇ ಜಾಗತಿಕ ಹವಾಮಾನ ಬದಲಾವನೆ ವಿಷಯವಾಗಿ ಜಗತ್ತಿನ ಹಲವು ರಾಷ್ಟ್ರಗಳು ಕಳವಳ ವ್ಯಕ್ತ ಪಡಿಸಿವೆ. ಮಾಲಿನ್ಯ ನಿಯಂತ್ರಣ ಸಾಧ್ಯವಾಗದೇ ಹೋದಲ್ಲಿ ದೇಶಗಳು ಹವಾಮಾನ ವೈಪರೀತ್ಯದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಿ ಬರುವುದು. ಆ ನಿಟ್ಟಿನಲ್ಲಿ ಜಾಗತಿಕ ತಾಪಮಾನದಲ್ಲಿ 2 ಡಿಗ್ರಿ ತಗ್ಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಭೆಗಳು ನಡೆದಿವೆ.

2070ರ ವೇಳೆಗೆ ಭಾರತವು ಇಂಗಾಲದ ಹೊರಸೂಸುವಿಕೆಯಲ್ಲಿ ಸಂಪೂರ್ಣ ಶೂನ್ಯವಾಗಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ26) ಅವರು ಈ ಹೇಳಿಕೆ ನೀಡಿದ್ದು, ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಮತಿಹೀನ ಬಳಕೆಯನ್ನು ತೊಡೆದುಹಾಕುವ- 'ವಿಶ್ವ ಜೀವನ' ಎಂಬ ಜಾಗತಿಕ ಚಳವಳಿಯನ್ನು 'ಜೀವನ ವಿಧಾನ ಬದಲಾವಣೆ'ಯನ್ನಾಗಿ ಮಾಡಿಕೊಳ್ಳಬೇಕು ಎಂದು ಜಾಗತಿಕ ನಾಯಕರಿಗೆ ಅವರು ಮನವಿ ಮಾಡಿದ್ದಾರೆ.

2020ರ ವೇಳೆಗೆ ಪ್ರತಿ ವರ್ಷ 100 ಬಿಲಿಯನ್ ಅಮೆರಿಕನ್ ಡಾಲರ್ ಹವಾಮಾನ ಹಣಕಾಸು ಸಂಗ್ರಹಿಸುವ ಭರವಸೆಯನ್ನು ಈಡೇರಿಸದ ಅಭಿವೃದ್ಧಿ ಹೊಂದಿದ ದೇಶಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು 1 ಟ್ರಿಲಿಯನ್ ಡಾಲರ್ ಸಂಗ್ರಹಿಸಬೇಕು ಎಂದು ಅವರ ಜವಾಬ್ದಾರಿಗಳನ್ನು ನೆನಪಿಸಿದರು.

ಹವಾಮಾನ ನಿಧಿಯ ಹಳೆಯ ಉದ್ದೇಶಗಳನ್ನು ಇಟ್ಟುಕೊಂಡು ಹೊಸ ಗುರಿಗಳನ್ನು ಸಾಧಿಸಲು ಜಗತ್ತಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಇತರೆ ವಲಯವಾರು ಗುರಿಗಳಿಗೆ ಸ್ಪಷ್ಟ ಕಾಲಾನುಕ್ರಮ ನಿಗದಿಪಡಿಸುವ ಮೂಲಕ 'ಸಂಪೂರ್ಣ ಶೂನ್ಯ' ಸಾಧಿಸಲು ಹವಾಮಾನ ಕ್ರಿಯೆಗಳಿಗೆ ನಾಲ್ಕು ಇತರೆ ಹೆಜ್ಜೆಗಳನ್ನು ದೇಶ ಹೇಗೆ ಅನುಸರಿಸಲಿದೆ ಎಂದು ಮೋದಿ ವಿವರಿಸಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತವನ್ನು 2050ರ ವೇಳೆಗೆ ಇಂಗಾಲದ ವಿಚಾರದಲ್ಲಿ 'ಸಂಪೂರ್ಣ ಶೂನ್ಯ' ಸಾಧನೆಗೆ ತರಬೇಕೆಂದು ಉದ್ದೇಶಿಸಿವೆ.

ಆದರೆ ಭಾರತ ಈ ಗುರಿಯನ್ನು 2070ರಲ್ಲಿ ಸಾಧಿಸುವುದಾಗಿ ಹೇಳಿರುವುದು ಈ ದೇಶಗಳಿಗೆ ಅಚ್ಚರಿ ಮೂಡಿಸಿದೆ. ಜಗತ್ತಿನ ಅತಿ ಮಾಲಿನ್ಯಕಾರಕ ದೇಶ ಎಂದೆನಿಸಿರುವ ಚೀನಾ, 2060ರ ವೇಳೆಗೆ ಈ ಗುರಿ ಸಾಧನೆಯ ಭರವಸೆ ನೀಡಿದೆ. ಅದಕ್ಕಿಂತಲೂ ಹತ್ತು ವರ್ಷ ತಡವಾಗಿ ಈ ಗುರಿ ಸಾಧಿಸುವುದಾಗಿ ಭಾರತ ಹೇಳಿಕೊಂಡಿದೆ.

ತನ್ನ ಇಂಧನ ಅಗತ್ಯಗಳಲ್ಲಿ ಶೇ 50ರಷ್ಟನ್ನು 2030ರ ವೇಳೆಗೆ ನವೀಕರಿಸಬಹುದಾದ ಸಂಪನ್ಮೂಲಗಳಿಂದಲೇ ಪಡೆಯುವುದು, ಮುಂದಿನ ಒಂಬತ್ತು ವರ್ಷಗಳಲ್ಲಿ ಹಸಿರುಮನೆ ಅನಿಲಕ್ಕೆ (ಜಿಎಚ್‌ಜಿ) ಸಮಪ್ರಮಾಣದಲ್ಲಿ ಒಂದು ಬಿಲಿಯನ್ ಟನ್‌ನಷ್ಟು ಇಂಗಾಲವನ್ನು ತಗ್ಗಿಸಲಾಗುವುದು, 2030ರ ವೇಳೆಗೆ 2005ರಲ್ಲಿ ಇದ್ದ ಮಟ್ಟಕ್ಕೆ ಶೇ 45ರಷ್ಟು ಇಂಗಾದಲ ಸಾಂದ್ರತೆಯನ್ನು (ಜಿಡಿಪಿಯ ಪ್ರತಿ ಘಟಕಕ್ಕೆ ಇಂಗಾಲದ ವಿಸರ್ಜನೆ) ಕಡಿಮೆ ಮಾಡುವುದು ಮತ್ತು 2030ರ ವೇಳೆಗೆ ನವೀಕರಿಸಬಹುದಾದ ಇಂಧನಗಳ ಪ್ರಮಾಣವನ್ನು 450 ಗಿಗಾ ವ್ಯಾಟ್‌ನಿಂದ 500 ಗಿಗಾ ವ್ಯಾಟ್‌ಗೆ ಹೆಚ್ಚಿಸುವುದು ಭಾರತದ ಇತರೆ ಗುರಿಗಳಾಗಿವೆ.

English summary
The IMF has welcomed India's announcement at the COP26 summit on new targets to increase reliance on renewables and reduce the carbon intensity of its economy, including to adopt a net zero target by 2070.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X