ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ian Hurricane- ಕ್ಯೂಬಾ ಹಾಳುಗೆಡವಿ ಅಮೆರಿಕಕ್ಕೆ ಕಾಲಿಡುತ್ತಿರುವ ಇಯಾನ್ ಚಂಡಮಾರುತ

|
Google Oneindia Kannada News

ವಾಷಿಂಗ್ಟನ್, ಸೆ. 28: ಕ್ಯೂಬಾ ದೇಶದಲ್ಲಿ ಭಾರೀ ನರ್ತನ ನಾಡಿದ್ದ ಇಯಾನ್ ಚಂಡಮಾರುತ ಇದೀಗ ಅಮೆರಿಕ ನಾಡಿನತ್ತ ವೇಗವಾಗಿ ಬೀಸಿಕೊಂಡು ಹೋಗುತ್ತಿದೆ. ಕ್ಯೂಬಾದಲ್ಲಿ ಕೆಟಗರಿ 3 ಮಟ್ಟದದಲ್ಲಿದ್ದ ಈ ಚಂಡಮಾರುತದ ತೀವ್ರತೆ ಕ್ಷಣಕ್ಷಣವೂ ಹೆಚ್ಚಾಗುತ್ತದೆ. ಅಮೆರಿಕದ ಫ್ಲೋರಿಡಾಗೆ ಬರುವ ಮುನ್ನ ಈ ಚಂಡಮಾರುತ ಕೆಟಗರಿ 4ರ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ನಿರೀಕ್ಷೆಗಿಂತಲೂ ಹೆಚ್ಚು ತೀವ್ರತೆಯಿಂದ ಬರುತ್ತಿರುವ ಚಂಡಮಾರುತವನ್ನು ಎದುರಿಸಲು ಫ್ಲೋರಿಡಾ ಆಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಸ್ಥಳಗಳಿಂದ ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿಸಲಾಗುತ್ತಿದೆ.

ನ್ಯೂಯಾರ್ಕ್: ಐಡಾ ಚಂಡಮಾರುತ ಸೃಷ್ಟಿಸಿದ ಪ್ರವಾಹಕ್ಕೆ 44 ಮಂದಿ ಸಾವುನ್ಯೂಯಾರ್ಕ್: ಐಡಾ ಚಂಡಮಾರುತ ಸೃಷ್ಟಿಸಿದ ಪ್ರವಾಹಕ್ಕೆ 44 ಮಂದಿ ಸಾವು

ಬುಧವಾರ ಸಂಜೆ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಇದೆ. ಅಷ್ಟರೊಳಗೆ 25 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲು ಫ್ಲೋರಿಡಾ ಆಡಳಿತ ವ್ಯವಸ್ಥೆ ಮಾಡಿದೆ. ಫ್ಲೋರಿಡಾದ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಪರಿಣಾಮಗಳು ಬೀರಲು ಪ್ರಾರಂಭಿಸಿವೆ. ಈ ಹಾದಿಯಲ್ಲಿ ಹೋಗುವ ವಿಮಾನಗಳು ಅಲುಗಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಇಂಟರ್ನೆಟ್‌ನಲ್ಲಿ ಶೇರ್ ಆಗುತ್ತಿವೆ.

ಇಯಾನ್ ಚಂಡಮಾರುತದ ವೇಗ ದಿನದಿನವೂ ಏರಿಕೆ ಆಗುತ್ತಿದೆ. ಸೋಮವಾರ ಗಂಟೆಗೆ 160 ಕಿಮೀ ವೇಗದಲ್ಲಿದ್ದ ಅದು ಕ್ಯೂಬಾ ಕಡೆ 130 ಕಿಮೀ ವೇಗದಲ್ಲಿ ಧಾವಿಸಿತ್ತು. ಆಗ ಅದರ ತೀವ್ರತೆ ಕೆಟಗರಿ 1 ಎಂದು ವರ್ಗೀಕರಿಸಲಾಗಿತ್ತು. ಕ್ಯೂಬಾದ ಬಹುತೇಕ ಭಾಗದಲ್ಲಿ ಪವರ್ ಕಟ್ ಆಗುವಂತೆ ಮಾಡಿ ಕತ್ತಲಲ್ಲಿ ಮುಳುಗಿಸಿದ್ದ ಚಂಡಮಾರುತ ನಂತರ ಗಮನಾರ್ಹ ರೀತಿಯಲ್ಲಿ ವೇಗ ವೃದ್ಧಿಸಿಕೊಂಡಿದೆ.

ಅಸಾನಿ ಚಂಡಮಾರುತದ ಎಫೆಕ್ಟ್: ಉತ್ತರದಲ್ಲಿ ಬಿಸಿಗಾಳಿ, ದಕ್ಷಿಣ, ವಾಯವ್ಯದಲ್ಲಿ ಮಳೆಯೋ ಮಳೆಅಸಾನಿ ಚಂಡಮಾರುತದ ಎಫೆಕ್ಟ್: ಉತ್ತರದಲ್ಲಿ ಬಿಸಿಗಾಳಿ, ದಕ್ಷಿಣ, ವಾಯವ್ಯದಲ್ಲಿ ಮಳೆಯೋ ಮಳೆ

ತೀವ್ರತೆ ಹೆಚ್ಚಿರುವ ಚಂಡಮಾರುತ

ತೀವ್ರತೆ ಹೆಚ್ಚಿರುವ ಚಂಡಮಾರುತ

ಇದೀಗ ಅದು ಕೆಟಗರಿ-3 ಆಗಿ ತೀವ್ರತೆ ಹೆಚ್ಚಿಸಿಕೊಂಡಿದ್ದು ಬುಧವಾರ ಕೆಟಗರಿ-4 ಆಗಿ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟು ಭೀಕರ ಚಂಡಮಾರುತದಿಂದ ಗಟ್ಟಿಯಾದ ಕಟ್ಟಡಗಳೂ ನೆಲಕ್ಕುರುಳುವ ಅಪಾಯ ಇರುತ್ತದೆ.

"ಕೆಟಗರಿ-3ರ ಚಂಡಮಾರುತದಿಂದ ಭಾರೀ ಹಾನಿ ಆಗುತ್ತದೆ. ಹಲವು ಮರಗಳು ಬುಡಸಮೇತ ಉರುಳಿಬೀಳುವ ಸಾಧ್ಯತೆ ಇದೆ. ಚಂಡಮಾರುತದಿಂದ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ನೆಲಕಚ್ಚುತ್ತದೆ. ಚಂಡಮಾರುತ ಹೋಗಿ ಹಲವು ದಿನಗಳವರೆಗೂ ವಿದ್ಯುತ್ ಮತ್ತು ನೀರಿನ ಸರಬರಾಜು ಸಾಧ್ಯವಾಗುವುದಿಲ್ಲ... ಕೆಟಗರಿ-4 ರ ಚಂಡಮಾರುತ ಬಂದರೆ ತಿಂಗಳುಗಟ್ಟಲೆ ವಿದ್ಯುತ್ ಸಂಪರ್ಕ ಸಾಧ್ಯವಾಗುವುದಿಲ್ಲ. ಚಂಡಮಾರುತ ಅಪ್ಪಳಿಸಿ ಹೋದ ಪ್ರದೇಶಗಳೂ ಕೂಡ ಸಹಜ ಸ್ಥಿತಿಗೆ ಬರಲು ಹಲವು ತಿಂಗಳುಗಳೇ ಆಗಬಹುದು," ಎಂದು ತಜ್ಞರು ಹೇಳುತ್ತಾರೆ.

ಕ್ಯೂಬಾಗೆ ಹಾನಿ

ಕ್ಯೂಬಾಗೆ ಹಾನಿ

ಕ್ಯೂಬಾ ದೇಶದಲ್ಲಿ ಮಂಗಳವಾರ ಗಂಟೆಗೆ 205 ಕಿಮೀ ವೇಗದಲ್ಲಿ ಎರಗಿದ ಚಂಡಮಾರುತವು ಅಲ್ಲಿನ ಎಲೆಕ್ಟ್ರಿಕಲ್ ಗ್ರಿಡ್ ಅನ್ನು ಉರುಳಿಸಿದೆ. ಐದು ಗಂಟೆಗಳ ಕಾಲ ಕ್ಯೂಬಾದ ಪಶ್ಚಿಮ ಪ್ರದೇಶಗಳಿಗೆ ಘಾಸಿ ಮಾಡಿದ ಬಳಿಕ ಈ ಚಂಡಮಾರುತ ಮೆಕ್ಸಿಕೋ ಕೊಲ್ಲಿಯ ಸಮುದ್ರದ ಮೇಲೆ ಹಾದು ಹೋಗಿದೆ. ಚಂಡಮಾರುತದಿಂದ ಕ್ಯೂಬಾದಲ್ಲಿ ಹಾನಿಯಾಗಿರುವ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಲು ತಿಂಗಳುಗಳೇ ಬೇಕಾಗಬಹುದು ಎನ್ನಲಾಗಿದೆ.

ಗಂಟೆ ಗಂಟೆಗೂ ವೇಗ ಅಧಿಕ

ಗಂಟೆ ಗಂಟೆಗೂ ವೇಗ ಅಧಿಕ

ಇಲ್ಲಿ ಒಂದು ವಿಷಯ ಬಹಳ ಗಮನ ಸೆಳೆದಿದೆ. ಕೆಟಗರಿ ಒಂದರಲ್ಲಿ ಇದ್ದ ಚಂಡಮಾರುತ ಕ್ಷಣಕ್ಷಣವೂ ವೇಗ ಹೆಚ್ಚಿಸಿಕೊಳ್ಳುತ್ತಿದ್ದು ಫ್ಲೋರಿಡಾಗೆ ಬರುವಷ್ಟರಲ್ಲಿ ಕೆಟಗರಿ 4 ಆಗಿ ಬದಲಾಗಬಹುದು. ಅದರಲ್ಲೂ ಚಂಡಮಾರುತವು ಕ್ಯೂಬಾ ದಾಟಿ ಕೆರಿಬಿಯನ್ ಕಡಲ ಪ್ರದೇಶದ ಮೇಲೆ ಹಾದು ಹೋಗುವಾಗ ಹೆಚ್ಚು ಭಯಾನಕ ಚಂಡಮಾರುತವಾಗಿ ಬದಲಾಗಿದೆ. 22 ಗಂಟೆ ಅವಧಿಯಲ್ಲಿ ಅದರ ವೇಗ ಶೇ. 67ರಷ್ಟು ಹೆಚ್ಚಾಗಿದೆ.

ಹವಾಮಾನ ಬದಲಾವಣೆ ಎಫೆಕ್ಟ್

ಹವಾಮಾನ ಬದಲಾವಣೆ ಎಫೆಕ್ಟ್

ಕೆರಿಬಿಯನ್ ದ್ವೀಪಗಳಿರುವ ಸಮುದ್ರ ನೀರಿನ ಉಷ್ಣಾಂಶ ಮಾಮೂಲಿಗಿಂತ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. ಇದು ಹವಾಮಾನ ಬದಲಾವಣೆಯ ಪರಿಣಾಮ ಎಂದು ಹೇಳಲಾಗುತ್ತಿದೆ. ಹವಾಮಾನ ಉಷ್ಣಾಂಶ ಹೆಚ್ಚಾದರೆ ಚಂಡಮಾರುತಗಳ ತೀವ್ರತೆ ಹೆಚ್ಚಾಗುತ್ತದೆ. ಇತ್ತೀಚೆಗೆ ಫಿಲಿಪ್ಪೈನ್ಸ್‌ಗೆ ಅಪ್ಪಳಿಸಿದ ನೋರು ಚಂಡಮಾರುತವೂ ಇದೇ ರೀತಿ ತೀವ್ರತೆ ಹೆಚ್ಚಿಸಿಕೊಂಡಿತ್ತು. ಕೆಟಗರಿ 1ರಲ್ಲಿ ಇದ್ದ ನೋರು ಚಂಡಮಾರುತ ರಾತ್ರೋರಾತ್ರಿ ಕೆಟಗರಿ 5 ಆಗಿ ಮಾರ್ಪಟ್ಟಿತ್ತು.

ಈ ರೀತಿ ಚಂಡಮಾರುತದ ತೀವ್ರತೆ ಬಹಳ ಬೇಗ ಹೆಚ್ಚಾಗುವುದು ಅಪರೂಪ. ಚಂಡಮಾರುತ ಇಷ್ಟೇ ತೀವ್ರತೆಯಲ್ಲಿ ಅಪ್ಪಳಿಸುತ್ತದೆ ಎಂದು ಮುಂಚಿತವಾಗಿ ಅಂದಾಜಿವುದೂ ಈಗೀಗ ಕಷ್ಟವಾಗುತ್ತಿದೆ. ಮನುಷ್ಯನಿಂದ ಸೃಷ್ಟಿಯಾದ ಹವಾಮಾನ ಬದಲಾವಣೆ ಸಮಸ್ಯೆ ಈಗ ಮನುಕುಲವನ್ನು ಕಾಡತೊಡಗಿದೆ. ಈಗ ಸೃಷ್ಟಿಯಾಗುವ ಚಂಡಮಾರುತಗಳು ಹೆಚ್ಚು ಬಲಶಾಲಿಯಾಗುತ್ತಿವೆ, ಹೆಚ್ಚು ಮಳೆ ಸೃಷ್ಟಿಸುತ್ತಿವೆ.

(ಒನ್ಇಂಡಿಯಾ ಸುದ್ದಿ)

English summary
Ian Hurricane is likely to arrive at US state of Florida on Wednesday evening turning from category-3 to category-4. Evacuations are taking place in Florida to face the devastation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X