ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೋರಿಡಾದತ್ತ ಚಂಡಮಾರುತ, 5 ಮಿಲಿಯನ್ ಜನ ಸ್ಥಳಾಂತರಕ್ಕೆ ಸೂಚನೆ

|
Google Oneindia Kannada News

ಫ್ಲೋರಿಡಾ, ಸೆಪ್ಟೆಂಬರ್, 09 : ಅಮೆರಿಕದ ಕರಾವಳಿ ರಾಜ್ಯಗಳು ಇರ್ಮಾ ಚಂಡಮಾರುತಕ್ಕೆ ತತ್ತರಿಸಿವೆ. ಸದ್ಯ ಚಂಡಮಾರುತ ಅಮೆರಿಕಾದ ಫ್ಲೋರಿಡಾ ರಾಜ್ಯದತ್ತ ಹೊರಳಿದೆ.

ಕೆರಿಬಿಯನ್ ದ್ವೀಪಗಳಲ್ಲಿ 14 ಜನರ ಬಲಿ ಪಡೆದ ಶತಮಾನದ ಭೀಕರ ಚಂಡಮಾರುತಕೆರಿಬಿಯನ್ ದ್ವೀಪಗಳಲ್ಲಿ 14 ಜನರ ಬಲಿ ಪಡೆದ ಶತಮಾನದ ಭೀಕರ ಚಂಡಮಾರುತ

ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಅಮೆರಿಕಾ ಸರ್ಕಾರವು ಫ್ಲೋರಿಡಾದ 5 ಮಿಲಿಯನ್ ಜನರನ್ನು ಸ್ಥಳಾಂತರ ಮಾಡಲು ಸೂಚಿಸಿದೆ. ಕ್ಯೂಬಾ ಮತ್ತು ಬಹಾಮಸ್ ದ್ವೀಪಗಳ ಮಧ್ಯೆ ಹಾದು ಅಮೆರಿಕಾದ ರಾಜ್ಯ ಫ್ಲೋರಿಡಾದತ್ತ ಇರ್ಮಾ ಚಂಡಮಾರುತ ಧಾವಿಸುತ್ತಿದೆ.

Hurricane Irma: Over 5m people in Florida told to evacuate

ನಾಳೆ ಭಾನುವಾರ ಫ್ಲೋರಿಡಾ ದಾಟುವ ಮುನ್ನ ಅಲ್ಲಿನ ಜನ, ಸರಕಾರದ ಆಸರೆಗೆ ಕಾಯದೆ ತಮ್ಮ ಸಾಮರ್ಥ್ಯದಿಂದ ಮನೆಗಳನ್ನು ತೊರೆದು ಕಡ್ಡಾಯವಾಗಿ ಬೇರೆಡೆ ತೆರಳಲು ಸೂಚಿಸಲಾಗಿದೆ.

ಚಂಡಮಾರುತ ಪರಿಣಾಮ ಹೇಗಿರಲಿದೆ ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ ಎಂದು ತುರ್ತು ನಿರ್ವಹಣಾ ಘಟಕದ ಅಧಿಕಾರಿ ವಿಲಿಯಂ ಬ್ರಾಕ್​​ ಲಾಂಗ್​​ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅತಿ ಹೆಚ್ಚು ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಾಗುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಂತಹ ಕಡೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

English summary
Over five million people were told to evacuate Florida as Hurricane Irma blasted through Cuba towards to United States as it shifted path to target the west of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X