ಭಾರತಕ್ಕೆ ಬರುತ್ತಿದ್ದ ಇಸ್ರೇಲಿ ಹಡಗು ಅಪಹರಣ: ವಿಡಿಯೋ ವಿಡುಗಡೆ ಮಾಡಿದ ಹೌತಿ ಬಂಡುಕೋರರು!
ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್‌ಗೆ ಸೇರಿದ ಸರಕು ಸಾಗಾಣಿಕೆ ಹಡಗು 'ಗ್ಯಾಲಕ್ಸಿ ಲೀಡರ್' ಅನ್ನು ಎಮೆನ್ ದೇಶದ ಹೌತಿ ಬಂಡುಕೋರರು ಅಪಹರಿಸಿದ್ದರು. ಈಗ ಹಡಗು ಅಪಹರಿಸಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿರುವ ಈ ಹಡಗು ಸದ್ಯ ಯೆಮೆನ್‌ನ ಹೊಡೆಡಾ ಬಂದರು ಪ್ರದೇಶದಲ್ಲಿದೆ ಎಂದು ಹಡಗಿನ ಮಾಲೀಕರು ಹೇಳಿದ್ದಾರೆ. ಈ ದೊಡ್ಡ ಹಡಗನ್ನು ಹೇಗೆ ಅಪಹರಿಸಲಾಯಿತು ಎನ್ನುವ ವಿಡಿಯೋ ಬಿಡುಗಡೆ ಮಾಡಿದ್ದು, ಯಾವ ಸಿನಿಮಾ ದೃಶ್ಯಗಳಿಗೂ ಕಡಿಮೆ ಇಲ್ಲ ಎನ್ನುವಂತಿದೆ.

ಹಡಗಿನೊಂದಿಗೆ ಎಲ್ಲಾ ಸಂವಹನಗಳು ಕಳೆದುಹೋಗಿವೆ ಎಂದು ಪ್ಯೂರ್ ಕಾರ್ ಕ್ಯಾರಿಯರ್ ಗ್ಯಾಲಕ್ಸಿ ಲೀಡರ್‌ನ ಮಾಲೀಕ ಐಲ್ ಆಫ್ ಮ್ಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಂಪನಿಯು, ಶಿಪ್ಪಿಂಗ್ ಕಾಳಜಿಯಂತೆ, ರಾಜಕೀಯ ಅಥವಾ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಹೇಳಿಕೆಯನ್ನು ನೀಡಿಲ್ಲ.
Yemen just released footage of them capturing the Israeli ship yesterday.
— Richard Medhurst (@richimedhurst) November 20, 2023
The West and Israel want to murder Palestinians? Cut the oil, shut the straits and canals, and see how quickly they reconsider.
Despite all the destruction the West wrought, Yemen still fights for 🇵🇸 pic.twitter.com/Cz6uHUHylU
ವಿಡಿಯೋದಲ್ಲಿ ಇರುವುದೇನು?
ಹೆಲಿಕ್ಯಾಪ್ಟರ್ ನಲ್ಲಿ ಬಂದು ಹಡಗಿನ ಮೇಲೆ ಇಳಿಯುವ ಬಂದೂಕುಧಾರಿಗಳು ಮೊದಲು ಘೋಷಣೆ ಕೂಗುತ್ತಾ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಹಡಗಿನ ಸಿಬ್ಬಂದಿಯನ್ನು ವಶಕ್ಕೆ ಪಡೆದು ಹೈಜಾಕ್ ಮಾಡುತ್ತಾರೆ.
ಹಮಾಸ್ - ಇಸ್ರೇಲ್ ನಡುವಿನ ಯುದ್ಧದ ಹಿನ್ನಲೆಯಲ್ಲಿ ಇಸ್ರೇಲ್ ಹಡಗನ್ನು ಗುರಿಯಾಗಿಸಿ ಹೈಜಾಕ್ ಮಾಡಿರುವುದಾಗಿ ಹೌತಿ ಬಂಡುಕೋರರು ಹೇಳಿದ್ದಾರೆ. ಹಡಗಿನಲ್ಲಿ ಇಸ್ರೇಲ್‌ನ ನಾಗರೀಕರು ಇರಲಿಲ್ಲ ಎಂದು ಇಸ್ರೇಲ್ ಖಚಿತಪಡಿಸಿದೆ. ಇದು ಇಸ್ರೇಲ್ ವ್ಯಾಪಾರಿಗೆ ಸೇರಿದ ಹಡಗಾಗಿದ್ದು, ಜಪಾನ್ ದೇಶದ ಕಂಪನಿಯೊಂದು ನಿರ್ವಹಣೆ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಹೈಜಾಕ್ ಆಗಿರುವ ಹಡಗಿನಲ್ಲಿ ಫಿಲಿಪ್ಪೀನ್ಸ್, ಬಲ್ಗೇರಿಯಾ ಮೆಕ್ಸಿಕೊ ಮತ್ತು ಉಕ್ರೇನ್‌ನ 25 ಸಿಬ್ಬಂದಿಗಳಿದ್ದರು ಎಂದು ವರದಿಯಾಗಿದೆ. ಇಸ್ರೇಲ್ ಗಾಜಾ ಮೇಲೆ ದಾಳಿ ನಿಲ್ಲಿಸದೇ ಇದ್ದರೆ ಯುದ್ಧವನ್ನು ತೀವ್ರಗೊಳಿಸುವುದಾಗಿ ಹೌತಿ ಬಂಡುಕೋರರು ಬೆದರಿಕೆ ಹಾಕಿದ್ದಾರೆ.
ತೀವ್ರವಾಗಿ ಖಂಡಿಸಿದ ಅಮೆರಿಕ
ಇನ್ನು ಹಡಗು ಅಪಹರಣ ಮಾಡಿರುವ ಹೌತಿ ಬಂಡುಕೋರರ ಕೃತ್ಯವನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು, ಹಡಗಿನಲ್ಲಿದ್ದ ಸಿಬ್ಬಂದಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
"ಕೆಂಪು ಸಮುದ್ರದಲ್ಲಿ ಮೋಟಾರು ಹಡಗಿನ ಗ್ಯಾಲಕ್ಸಿ ಲೀಡರ್ ಅನ್ನು ಹೌತಿ ವಶಪಡಿಸಿಕೊಂಡಿರುವುದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿಕೆಯಲ್ಲಿ ತಿಳಿಸಿದರು.
"ಹಡಗು ಮತ್ತು ಅದರ ಸಿಬ್ಬಂದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಮತ್ತು ಸೂಕ್ತ ಮುಂದಿನ ಕ್ರಮಗಳ ಬಗ್ಗೆ ನಾವು ನಮ್ಮ ಮಿತ್ರರಾಷ್ಟ್ರಗಳು ಮತ್ತು ಯುಎನ್ ಪಾಲುದಾರರೊಂದಿಗೆ ಸಮಾಲೋಚಿಸುತ್ತೇವೆ." ಎಂದು ಹೇಳಿದೆ.
"ಮಾಲೀಕರು ಮತ್ತು ನಿರ್ವಾಹಕರು ಈ ಹಡಗಿನ ವಶಪಡಿಸಿಕೊಳ್ಳುವಿಕೆಯು ವಿಶ್ವ ನೌಕಾಪಡೆಯ ಅಂಗೀಕಾರದ ಸ್ವಾತಂತ್ರ್ಯದ ಸಂಪೂರ್ಣ ಉಲ್ಲಂಘನೆಯನ್ನು ಪ್ರತಿನಿಧಿಸುತ್ತದೆ ಮತ್ತು ಅಂತರಾಷ್ಟ್ರೀಯ ವ್ಯಾಪಾರಕ್ಕೆ ಗಂಭೀರ ಬೆದರಿಕೆಯನ್ನು ಪ್ರತಿನಿಧಿಸುತ್ತದೆ" ಎಂದು ಗ್ಯಾಲಕ್ಸಿ ಮ್ಯಾರಿಟೈಮ್ ಹೇಳಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications