• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರನ ಬಂಧನ

|

ಬೀಜಿಂಗ್, ಆಗಸ್ಟ್ 30: ಚೀನಾ ಪಾರಮ್ಯ ಹೊಂದಿರುವ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಪರ ಹೋರಾಟಗಾರರು ಸುಮಾರು ಮೂರು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆಗೆ ಕಡಿವಾಣ ಹಾಕಲು ಪ್ರಮುಖ ಹೋರಾಟಗಾರ ಜೋಶುವಾ ವೊಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಬೆಳಿಗ್ಗೆ ರೈಲ್ವೆ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ಅವರನ್ನು ಖಾಸಗಿ ಮಿನಿ ವ್ಯಾನ್ ಒಂದಕ್ಕೆ ಬಲವಂತವಾಗಿ ತಳ್ಳಿ ಎಳೆದುಕೊಂಡು ಹೋಗಲಾಯಿತು ಎಂದು ಹಾಂಕಾಂಗ್‌ನ ಡೆಮೊಸಿಸ್ಟೋ ರಾಜಕೀಯ ಪಕ್ಷ ಹೇಳಿಕೆ ನೀಡಿದೆ.

ಹಾಂಕಾಂಗ್‌ನಲ್ಲಿ ಅಲ್ಲೋಲಕಲ್ಲೋಲ: ವಿಮಾನ ಹಾರಾಟ ಬಂದ್

ಅವರನ್ನು ವ್ಯಾನ್ ಚಾಯ್‌ನಲ್ಲಿರುವ ಪೊಲೀಸ್ ಮುಖ್ಯ ಕಚೇರಿಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವೊಂಗ್ ಅವರ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡೊಮೆಸಿಸ್ಟೋ ತಿಳಿಸಿದೆ. ಆದರೆ, ಅವು ಯಾವ ಪ್ರಕರಣಗಳು ಎಂದು ವಿವರಣೆ ಕೊಟ್ಟಿಲ್ಲ.

ಚೀನಾ ನಡೆಸುತ್ತಿರುವ ದಬ್ಬಾಳಿಕೆಯ ನೀತಿಗಳನ್ನು ವಿರೋಧಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಇದಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಈ ಪ್ರತಿಭಟನೆ ನಡೆಯದಂತೆ ತಡೆಯಲು ಒಂದು ದಿನ ಮುನ್ನವೇ ಮುಂಚೂಣಿ ಹೋರಾಟಗಾರ ವೊಂಗ್ ಅವರನ್ನು ಬಂಧಿಸಲಾಗಿದೆ.

ಹಾಂಕಾಂಗ್‌ನಿಂದ ಜಪಾನ್‌ಗೆ ಗುರುವಾರ ರಾತ್ರಿ ವಿಮಾನದಲ್ಲಿ ತೆರಳಲು ಪ್ರಯತ್ನಿಸುತ್ತಿದ್ದ ಮತ್ತೊಬ್ಬ ಪ್ರಸಿದ್ಧ ಸ್ವಾತಂತ್ರ್ಯ ಆಂದೋಲನಕಾರ ಆಂಡಿ ಚಾನ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬನ ಮೇಲೆ ಹಲ್ಲೆ ನಡೆಸಿ ದಂಗೆಗೆ ಯತ್ನಿಸಿದ ಶಂಕೆಯ ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಹಾಂಕಾಂಗ್‌ನಲ್ಲಿ ಪ್ರತಿಭಟನೆ: ಮಂಗಳವಾರವೂ ವಿಮಾನ ಹಾರಾಟ ಸ್ಥಗಿತ

ಜೂನ್ ಆರಂಭದಲ್ಲಿ ಆರಂಭವಾದ ಪ್ರತಿಭಟನೆಯಲ್ಲಿ ಇದುವರೆಗೂ ಸುಮಾರು 900 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದರು. ಹಾಂಕಾಂಗ್‌ನಲ್ಲಿನ ಯಾವುದೇ ಆರೋಪಿ ಅಥವಾ ಶಂಕಿತನ ವಿಚಾರಣೆ ನಡೆಸಿ ಶಿಕ್ಷೆಗೆ ಒಳಪಡಿಸಲು ಚೀನಾಕ್ಕೆ ಗಡಿಪಾರು ಮಾಡಬಹುದು ಎಂಬ ಮಸೂದೆಯನ್ನು ವ್ಯಾಪಕ ವಿರೋಧದ ನಡುವೆಯೂ ಅಂಗೀಕರಿಸಲಾಗಿತ್ತು. ಇದರಿಂದ ಹಾಂಕಾಂಗ್‌ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸಲಿದೆ. ಪ್ರಜೆಗಳ ಸ್ವಾತಂತ್ರ್ಯ ಹರಣ ನಡೆಯಲಿದೆ ಎಂದು ಆರೋಪಿಸಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಬೀದಿಗಿಳಿದು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

English summary
Hong Kong police on Thursday arrested prominent pro-democracy activist Joshua Wong a day before a planned demonstration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X