ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ನಿಲುವಿಗೆ ಸ್ವಪಕ್ಷೀಯರ ಬೆಂಬಲವೇ ಇಲ್ಲ!

By Prithviraj
|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್, 21: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಚರ್ಚೆಯಲ್ಲಿ ಟ್ರಂಪ್ ನೀಡಿರುವ ಹೇಳಿಕೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.

ಈ ಬೆಳವಣಿಗೆ ಚುನಾವಣೆ ಸಮಯದಲ್ಲಿ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಿದ್ದು, ಟ್ರಂಪ್ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮತ್ತಷ್ಟು ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

Hillary Clinton, Donald Trump face off in final Presidential debate

ಒಂದು ವೇಳೆ ತಾವು ಸೋತಲ್ಲಿ ನವೆಂಬರ್ 8ರ ಅಮೆರಿಕ ಅಧ್ಯಕ್ಷೀಯ ಚುನವಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳದಿರುವ ಸಾಧ್ಯತೆ ಇದೆ ಎಂಬ ಸುಳಿವನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. [ಟ್ರಂಪ್ ಲೈಂಗಿಕ ಪುರಾಣವನ್ನು ಬಿಚ್ಚಿಟ್ಟ ಮಹಿಳಾಮಣಿಗಳು!]

Hillary Clinton, Donald Trump face off in final Presidential debate

ತಮ್ಮ ಈ ಹೇಳಿಕೆ ಮೂಲಕ ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲವನ್ನೂ ಅವರು ಪ್ರಶ್ನಿಸಲು ಮುಂದಾಗಿದ್ದಾರೆ. ಟ್ರಂಪ್ ಅವರ ಹೇಳಿಕೆ ಅಮೆರಿಕ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

Hillary Clinton, Donald Trump face off in final Presidential debate

ಟ್ರಂಪ್ ಅವರ ಈ ಹೇಳಿಕೆಯಿಂದ ಸ್ವಪಕ್ಷೀಯದವರೇ ಇರಿಸುಮುರಿಸುಗೊಂಡಿದ್ದ, ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಣ ಕೊನೆಯ ಚರ್ಚೆಯಲ್ಲಿ ಫಾಕ್ಸ್‌ ನ್ಯೂಸ್‌ನ ನಿರೂಪಕ ಕ್ರಿಸ್‌ ವಾಲೇಸ್‌ ಅವರು 'ಸೋತರೆ ಸೋಲು ಒಪ್ಪಿಕೊಳ್ಳುವಿರಾ' ಎಂಬ ಪ್ರಶ್ನೆ ಕೇಳಿದಾಗ  'ನನ್ನ ಉತ್ತರ ಏನು ಎಂಬುದನ್ನು ನಾನು ಆ ಸಂದರ್ಭದಲ್ಲಿ ಹೇಳುತ್ತೇನೆ. ನಾನು ಗುಟ್ಟು ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿಕೆ ನೀಡಿದರು.

Hillary Clinton, Donald Trump face off in final Presidential debate

ಟ್ರಂಪ್ ಅವರ ಹೇಳಿಕೆ ಕುರಿತು ಹಿಲರಿ ಕ್ಲಿಂಟನ್ ಅವರು ಪ್ರತಿಕ್ರಿಯೆ ನೀಡಿದ್ದು, 'ಇದು ಆಘಾತಕಾರಿ ಹೇಳಿಕೆ ಎಂದು ಹೇಳಿದ್ದಾರೆ. 240 ವರ್ಷಗಳಿಂದ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುತ್ತಿದೆ.

ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿರುವುದನ್ನು ನಾವು ನೋಡಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಚರ್ಚೆ ನಡೆಸುವ ಅಭ್ಯರ್ಥಿಯಿಂದ ಕೂಡ ಅದನ್ನೇ ನಿರೀಕ್ಷಿಸಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Hillary Clinton, Donald Trump face off in final Presidential debate

'ಟ್ರಂಪ್ ಸೋತರೆ ಅದಕ್ಕೆ ವ್ಯವಸ್ಥೆ ಸರಿ ಇಲ್ಲ ಎನ್ನುವುದು ಕಾರಣವಲ್ಲ. ಬದಲಿಗೆ ಅಭ್ಯರ್ಥಿಯಾಗಿ ಅವರು ಸೋತಿದ್ದಾರೆ ಎಂದು ಅರ್ಥ' ಎಂದು ಹಿಂದೆ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಸೆನೆಟರ್‌ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ಟ್ರಂಪ್‌ ಅವರ ಅಭ್ಯರ್ಥಿತನವನ್ನು ಲಿಂಡ್ಸೆ ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ.

Hillary Clinton, Donald Trump face off in final Presidential debate

'ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಟ್ರಂಪ್‌ ಅವರ ಹೇಳಿಕೆ ವಿಷಾದನೀಯ. ಅವರು ಅಧ್ಯಕ್ಷರಾಗಬಾರದು ಎಂಬ ತೀರ್ಮಾನವನ್ನು ಇದು ದೃಢಪಡಿಸುತ್ತದೆ' ಎಂದು 'ದ ವೀಕ್ಲಿ ಸ್ಟಾಂಡರ್ಡ್‌' ಪತ್ರಿಕೆಯ ಸಂಪಾದಕ ಬಿಲ್‌ ಕ್ರಿಸ್ಟಲ್‌ ಹೇಳಿದ್ದಾರೆ.

ಅಂತಿಮ ಚರ್ಚೆಯಲ್ಲಿ ವೈಯಕ್ತಿಕ ವಿಚಾರಗಳಿಗಿಂತ ಆಡಳಿತ ನೀತಿ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಆದರೆ ಇಬ್ಬರೂ ಅಭ್ಯರ್ಥಿಗಳು ಈ ಚರ್ಚೆಯಲ್ಲಿಯೂ  ಪರಸ್ಪರರನ್ನು ಹಂಗಿಸುವ ಅವಕಾಶವನ್ನು ಬಿಟ್ಟುಕೊಡಲಿಲ್ಲ.

Hillary Clinton, Donald Trump face off in final Presidential debate

ಹಿಲರಿ ಅವರನ್ನು ಟ್ರಂಪ್‌ 'ಅಸಭ್ಯ ಮಹಿಳೆ' ಎಂದು ಜರಿದರು. ಹಲವು ಮಹಿಳೆಯರು ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವುದರ ಹಿಂದೆ ಹಿಲರಿ ಮತ್ತು ಅಧ್ಯಕ್ಷ ಬರಾಕ್‌ ಒಬಾಮ ಕೈವಾಡವಿದೆ ಎಂದು ಆರೋಪಿಸಿದರು.

ಟ್ರಂಪ್‌ ಅವರು ಹಿಂಸೆಗೆ ಕುಮ್ಮಕ್ಕು ನೀಡಿದ್ದಾರೆ. ಮಹಿಳೆಯರನ್ನು ಅವಮಾನಿಸಿದ್ದಾರೆ. ಅಮೆರಿಕಕ್ಕೆ ದೊಡ್ಡ ಅಪಾಯವಾಗಿ ತೋರುತ್ತಿದ್ದಾರೆ ಎಂದು ಹಿಲರಿ ಅಭಿಪ್ರಾಯಪಟ್ಟರು.

ಯಾವುದೇ ಅಂಶ ತಮ್ಮ ಪರವಾಗಿಲ್ಲ ಎಂದೆನಿಸಿದಾಗ ಅಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವುದು ಟ್ರಂಪ್‌ ಚಾಳಿ ಎಂದು ಹಿಲರಿ ಹೇಳಿದ್ದಾರೆ.

ಹಿಲರಿ ಕ್ಲಿಂಟನ್ ನತ್ತ ಮತದಾರರ ಒಲವು:

ಸಿಎನ್‌ಎನ್‌/ಒಆರ್‌ಸಿ ಸಂಸ್ಥೆಯು ಚರ್ಚೆಯ ನಂತರ ಜನಮತ ಗಣನೆ ಮಾಡಿದೆ. ಅದರಲ್ಲಿ ಶೇ 52ರಷ್ಟು ಜನರು ಹಿಲರಿ ಅವರ ಪರವಾಗಿ ಮತ ಹಾಕಿದ್ದಾರೆ. ಟ್ರಂಪ್‌ಗೆ ಶೇ 39ರಷ್ಟು ಮತಗಳು ಮಾತ್ರ ಸಿಕ್ಕಿವೆ.

Hillary Clinton, Donald Trump face off in final Presidential debate

ಮೆಕ್ಸಿಕೊದ ಕರೆನ್ಸಿ ಪೆಸೊ ಮೌಲ್ಯ ಕಳೆದ ಆರು ವಾರದಲ್ಲಿಯೇ ಅತ್ಯಂತ ಹೆಚ್ಚಿನ ಮಟ್ಟ ತಲುಪಿದೆ. ಹಿಲರಿ ಗೆಲುವು ಖಚಿತ ಎಂಬುದು ಈ ಏರಿಕೆಗೆ ಕಾರಣ. ತಾವು ಗೆದ್ದರೆ ಮೆಕ್ಸಿಕೊದಿಂದ ಅಕ್ರಮ ವಲಸಿಗರು ಅಮೆರಿಕ ಪ್ರವೇಶಿಸುವುದನ್ನು ತಡೆಯಲು ಎರಡು ದೇಶಗಳ ನಡುವೆ ಗೋಡೆ ಕಟ್ಟುವುದಾಗಿ ಟ್ರಂಪ್‌ ಹೇಳಿದ್ದರು.

English summary
Republican presidential candidate Donald Trump today asserted that he will totally accept the outcome of the "historic" presidential election if he wins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X