ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಹೆಚ್ಚಳ: ಚೀನಾದ ಗುವಾಂಗ್‌ಜೌನಲ್ಲಿ ವಿಮಾನಯಾನ ರದ್ದು

|
Google Oneindia Kannada News

ಬೀಜಿಂಗ್‌, ಜೂ.07: ವಿಶ್ವದಲ್ಲೇ ಮೊದಲ ಬಾರಿಗೆ ಕೊರೊನಾ ವೈರಸ್‌ ಕಾಣಿಸಿಕೊಂಡ ಚೀನಾದಲ್ಲಿ ಒಮ್ಮೆ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿತ್ತಾದರೂ ಈಗ ಚೀನಾದ ಗುವಾಂಗ್‌ಜೌ ಪ್ರಾಂತ್ಯದ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಹಿನ್ನೆಲೆ ವಿಮಾನಯಾನ ರದ್ದು ಮಾಡಲಾಗಿದೆ.

ವೈರಸ್ ಹರಡುವುದನ್ನು ತಡೆಯಲು ಸ್ಥಳೀಯ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸೋಮವಾರ ಮಧ್ಯಾಹ್ನದಿಂದ, ಗುವಾಂಗ್‌ಜೌನಿಂದ ಹೊರಡುವ ಪ್ರಯಾಣಿಕರು ಕಳೆದ 48 ಗಂಟೆಗಳಲ್ಲಿ ಕೊರೊನಾ ನೆಗೆಟಿವ್‌ ಪರೀಕ್ಷೆಯ ವರದಿ ಹೊಂದಿರಬೇಕು ಎಂದು ತಿಳಿಸಲಾಗಿದೆ.

 ಚೀನಾದಲ್ಲಿ ಮತ್ತೆ ಕೊರೊನಾ ಆತಂಕ; ಗುವಾಂಗ್‌ಜೌನಲ್ಲಿ ಲಾಕ್‌ಡೌನ್ ಚೀನಾದಲ್ಲಿ ಮತ್ತೆ ಕೊರೊನಾ ಆತಂಕ; ಗುವಾಂಗ್‌ಜೌನಲ್ಲಿ ಲಾಕ್‌ಡೌನ್

ಈ ಬಗ್ಗೆ ಮಾಹಿತಿ ನೀಡಿರುವ ಗುವಾಂಗ್‌ಜೌನ ನಗರ ಆರೋಗ್ಯ ಆಯೋಗದ ಉಪ ನಿರ್ದೇಶಕ ಮತ್ತು ವಕ್ತಾರ ಚೆನ್ ಬಿನ್, "ಎಲ್ಲಾ ಹಂತಗಳಲ್ಲಿನ ಪಕ್ಷ ಮತ್ತು ಸರ್ಕಾರಿ ಸಂಸ್ಥೆಗಳು, ಉದ್ಯಮಗಳು ಮತ್ತು ಸಂಸ್ಥೆಗಳು, ಶಾಲೆಗಳು ಮತ್ತು ಟ್ರಾವೆಲ್ ಏಜೆನ್ಸಿಗಳು ಗುವಾಂಗ್‌ಜೌನ ಪ್ರಾಂತ್ಯದಿಂದ ಯಾವುದೇ ಅನಿವಾರ್ಯವಿಲ್ಲದೆ ಹೊರಗೆ ಹೋಗಬಾರದು. ಕೊರೊನಾ ನಿರ್ವಹಣೆಗೆ ಸರ್ಕಾರ ಕಟ್ಟುನಿಟ್ಟಾಗಿ ಕ್ರಮ ಜಾರಿಗೆ ತರುತ್ತದೆ" ಎಂದು ಹೇಳಿದ್ದಾರೆ.

Hike in Covid-19: Chinas Guangzhou cancels flights

ಕೊರೊನಾ ಮತ್ತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುವಾಂಗ್‌ಜೌನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಅಲ್ಲಿಂದ ತೆರಲುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಚೀನಾದ ದಕ್ಷಿಣ ಭಾಗದ ಗುವಾಂಗ್ ಜೌ ನಗರದಲ್ಲಿ ಏಳು ಕೊರೊನಾ ಪ್ರಕರಣಗಳು ದಾಖಲಾಗಿದೆ. ಹೆಚ್ಚಿನ ಕೊರೊನಾ ಪ್ರಕರಣಗಳು ಶೆನ್‍ಜೆನ್ ಮತ್ತು ಫೋಶಾನ್ ನಗರಗಳಲ್ಲಿ ವರದಿಯಾಗಿದೆ.

ಏತನ್ಮಧ್ಯೆ, ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ 31 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ 91,248 ಪ್ರಕರಣಗಳು ದೃಢವಾಗಿದೆ. 4,636 ಸಾವುಗಳ ವರದಿಯಾಗಿದೆ. ಇನ್ನು ಚೀನಾದಲ್ಲಿ 30 ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳು ವರದಿಯಾಗಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ಭಾನುವಾರ ತಿಳಿಸಿದೆ.

ವಿಶ್ವದಲ್ಲೇ ಮೊದಲ ಬಾರಿಗೆ ಚೀನಾದಲ್ಲಿ ಮಾನವನಲ್ಲಿ H10N3 ಹಕ್ಕಿ ಜ್ವರ ಪತ್ತೆ ವಿಶ್ವದಲ್ಲೇ ಮೊದಲ ಬಾರಿಗೆ ಚೀನಾದಲ್ಲಿ ಮಾನವನಲ್ಲಿ H10N3 ಹಕ್ಕಿ ಜ್ವರ ಪತ್ತೆ

ಇನ್ನು ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಗುವಾಂಗ್‌ಜೌನಲ್ಲಿ ಮತ್ತೆ ಲಾಕ್‌ಡೌನ್ ಹೇರಲಾಗಿದೆ. ಗ್ವಾಂಗ್‌ಡಂಗ್ ಪ್ರಾಂತ್ಯದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಯಾರೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಚೀನಾದ ಇತರೆ ಸ್ಥಳಗಳಿಗೆ ಪ್ರಯಾಣಿಸಲು ಬಯಸುವವರಿಗೆ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಶಾಲೆ, ಮನರಂಜನೆ, ಮಾರುಕಟ್ಟೆಗಳನ್ನು ಮುಚ್ಚಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Hike in Covid-19: China's Guangzhou cancels most inbound and outbound flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X