ಬೆಂಕಿಯಿಂದ ಬಾಣಲೆಗೆ ಬಿದ್ದರು, ಅಫ್ಘಾನ್ ಪ್ರಜೆಗಳ ಕಣ್ಣೀರ ಕಥೆ!
ಅವರೆಲ್ಲಾ ಊರು ಬಿಟ್ಟು, ಸೂರು ಬಿಟ್ಟು ತುತ್ತು ಅನ್ನಕ್ಕಾಗಿ ಪಾಕಿಸ್ತಾನದ ನೆಲಕ್ಕೆ ಬಂದು ನೆಲೆಸಿದ್ದರು. ಆದರೆ, ಉಗ್ರರ ಕೂಪವಾಗಿರುವ ಪಾಕ್ ಸರ್ಕಾರದ ಕಣ್ಣಿಗೆ ಕಂಡಿದ್ದು ಮಾತ್ರ ಈ ಬಡಪಾಯಿ ಜನಗಳು. ಹೀಗೆ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು, ಪಾಕಿಸ್ತಾನದಲ್ಲಿ ಜೀವನ ಸಾಗಿಸುತ್ತಿದ್ದ ಲಕ್ಷಾಂತರ ಅಫ್ಘಾನಿಸ್ತಾನ ಪ್ರಜೆಗಳನ್ನು ಅನಾಮತ್ತಾಗಿ ಹೊರಹಾಕಿದೆ ಪಾಕಿಸ್ತಾನ ಸರ್ಕಾರ. ಬನ್ನಿ ಅವರ ಕಣ್ಣೀರ ಕಥೆ ತಿಳಿಯೋಣ.
ಪಾಕಿಸ್ತಾನ ಹೆಸರು ಕೇಳಿದರೆ ಸಾಕು ಹಲವು ದೇಶಗಳು ಉರಿದು ಬೀಳುತ್ತವೆ. ಇದಕ್ಕೆ ಕಾರಣ ಕೂಡ ಬಲವಾಗಿದೆ, ಏಕೆಂದರೆ ಅಲ್ಲಿನ ರಾಜಕಾರಣಿಗಳಿಗೆ ತಮ್ಮ ದೇಶ ಬೆಳೆಸಬೇಕು ಎಂಬ ಯಾವುದೇ ಗುರಿ ಇದ್ದಂತೆ ಕಾಣುತ್ತಿಲ್ಲ. ಬದಲಾಗಿ ತಮ್ಮ ಜೇಬು ತುಂಬಿಸಿಕೊಳ್ಳಲು ಅವರು ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುತ್ತಾರೆ. ಹೀಗೆ ಪಾಕ್ ನೆಲ ಅರಾಜಕತೆಗೆ ತವರಾಗಿದ್ದು, ಇಂತಹ ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದ ಅಫ್ಘಾನಿಸ್ತಾನ ಪ್ರಜೆಗಳಿಗೆ ಈಗ ಕುತ್ತು ಎದುರಾಗಿದೆ.

ಕುಣಿಯಲಾರದವ ನೆಲ ಡೊಂಕು ಅಂದನಂತೆ!
ಮೊದಲೇ ಹೇಳಿದಂತೆ ಪಾಕಿಸ್ತಾನ ರಾಜಕಾರಣಿಗಳ ಕಥೆಯೇ ಇಷ್ಟು, ತಮ್ಮ ದೇಶದಲ್ಲಿರುವ ಸಮಸ್ಯೆಗಳನ್ನು ಸರಿ ಮಾಡುವ ಬದಲು ಅಮಾಯಕರನ್ನೇ ಟಾರ್ಗೆಟ್ ಮಾಡುತ್ತಾರೆ. ಅದು ಉಗ್ರರ ವಿಚಾರದಲ್ಲಿ ಪಾಕ್ ರಾಜಕಾರಣಿಗಳು ಮಾಡುವುದೆಲ್ಲಾ ಮೋಸ ಬರೀ ಮೋಸ. ಈ ಮೋಸದ ಆಟ ಮತ್ತೆ ಮುಂದುವರಿದಿದೆ. ಹೇಗೆಂದರೆ ಅಸಲಿ ಉಗ್ರರಿಗೆ ಸದಾ ಪರೋಕ್ಷವಾಗಿ ಬೆಂಬಲ ನೀಡುವ ಪಾಕ್ ನೆಲದ ಪೊಲಿಟಿಷಿಯನ್ಸ್, ಇದೀಗ ಕೂಡ ಉಗ್ರವಾದದ ನೆಪದಲ್ಲಿ ಅಫ್ಘಾನ್ ಮೂಲದ ಸಾಮಾನ್ಯ ಜನರನ್ನು ಹೊರಗೆ ಹಾಕುತ್ತಿದ್ದಾರೆ.
ಅಫ್ಘಾನಿಸ್ತಾನದ ಜನರು ಟಾರ್ಗೆಟ್ ಏಕೆ?
ಅಷ್ಟಕ್ಕೂ ಪಾಕಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ ಸಾಲು ಸಾಲು ಬಾಂಬ್ ಸ್ಫೋಟಗಳು ಸಂಭವಿಸಿವೆ. ಆದರೆ ಈ ಸ್ಫೋಟಕ್ಕೆಲ್ಲಾ ಅಫ್ಘಾನಿಸ್ತಾನ ವಲಸಿಗರೇ ಕಾರಣ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ. ಹೀಗೆ ಆರೋಪ ಮಾಡುವಾಗ ಅದಕ್ಕೆ ಸೂಕ್ತ ಸಾಕ್ಷ್ಯ ಒದಗಿಸಿ, ಆರೋಪ ಸಾಬೀತು ಮಾಡಲು ಆಗದ ಪಾಕಿಸ್ತಾನದ ರಾಜಕಾರಣಿಗಳು ಅಫ್ಘಾನಿಸ್ತಾನದ ಲಕ್ಷ ಲಕ್ಷ ಜನರನ್ನ ಪಾಕ್ ನೆಲದಿಂದ ಹೊರಗೆ ಹಾಕುತ್ತಿದ್ದಾರೆ. ಒಟ್ಟಾರೆ 40 ಲಕ್ಷ ಅಫ್ಘಾನಿಸ್ತಾನಿ ಪ್ರಜೆಗಳು ಪಾಕಿಸ್ತಾನ ನೆಲದಲ್ಲಿ ವಲಸಿಗರಾಗಿ ವಾಸ ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ಹೆಚ್ಚಾಗಿ ಅಫ್ಘಾನ್ ವಲಸಿಗರು ಜೀವನ ಕಟ್ಟಿಕೊಂಡಿದ್ದರು. ಇವರಿಗೆ ಹೊರ ಹೋಗುವಂತೆ ಅಕ್ಟೋಬರ್ 31ರ ಡೆಡ್‌ಲೈನ್ ಕೊಟ್ಟಿತ್ತು ಪಾಕಿಸ್ತಾನ ಹಂಗಾಮಿ ಸರ್ಕಾರ. ಈ ಮೂಲಕ ಟಾರ್ಗೆಟ್ ಮಾಡಿ ಬಡ ಅಫ್ಘಾನಿ ಪ್ರಜೆಗಳ ಹೊರಹಾಕಿದೆ ಪಾಕ್ ಸರ್ಕಾರ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ಇಲ್ಲಿಯವರೆಗೂ ಎಷ್ಟು ಜನರನ್ನು ಹೊರಗೆ ಹಾಕಿದೆ ಪಾಕ್ ಗೊತ್ತಾ? ಇವರೆಲ್ಲಾ ಎಲ್ಲಿಗೆ ಹೋಗುತ್ತಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
17 ಲಕ್ಷ ಜನರ ಜೀವನ ಅತಂತ್ರ!
ನಿಮಗೆ ತಾಲಿಬಾನ್ ಉಗ್ರರ ಆಡಳಿತ ಏನು? ಅನ್ನೋದು ಗೊತ್ತಿರಬಹುದು. ಹಿಂಸಾಚಾರದ ಮೂಲಕ ಮರಳಿ ಅಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಉಗ್ರರಿಗೆ ದೇಶದ ಜನರ ಮೇಲೆ ಒತ್ತಡ ಹಾಕುವುದು ಮಾತ್ರ ಗೊತ್ತಿದೆ. ಆದರೆ ಪರಿಸ್ಥಿತಿ ನಿಭಾಯಿಸಿ, ಜನರ ಬದುಕು ಸುಲಭ ಮಾಡುವುದು ಗೊತ್ತಿಲ್ಲ ಎಂಬ ಆರೋಪ ಇದೆ. ಹೀಗಾಗಿ ಅಫ್ಘಾನ್ ಬಡ ಜನರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಅಫ್ಘಾನಿಸ್ತಾನ ಬಿಟ್ಟು, ಪಾಕಿಸ್ತಾನಕ್ಕೆ ಬಂದು ನೆಲೆಸಿದ್ದರು. ಈ ಪೈಕಿ ಈಗ 17 ಲಕ್ಷ ಜನರನ್ನು ಪಾಕಿಸ್ತಾನದ ಸರ್ಕಾರವು ಹೊರಗೆ ಹಾಕಿದೆ ಎಂಬ ಮಾಹಿತಿ ಸಿಕ್ಕಿದೆ.

ಚುನಾವಣೆ ಸಮಯಕ್ಕೆ ಹೈಡ್ರಾಮಾ ಶುರು?
ಪಾಕಿಸ್ತಾನ ಈಗ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿದ್ದು, ಮುಂದಿನ ವರ್ಷ ಅಂದರೆ 2024ರ ಜನವರಿ ವೇಳೆಗೆ ಚುನಾವಣೆ ಎದುರಿಸಲಿದೆ. ಆದರೆ ಈ ಸಮಯದಲ್ಲಿ, ಅಫ್ಘಾನಿಸ್ತಾನ ಜನರ ಟಾರ್ಗೆಟ್ ಮಾಡಿ ಕ್ರಮ ಕೈಗೊಂಡಿದ್ದು ಸಹಜವಾಗಿಯೇ ಅನುಮಾನ ಮೂಡಿಸಿದೆ. ಅಸಲಿ ಸಮಾಚಾರ ಇದಲ್ಲ, ಪಾಕಿಸ್ತಾನ ಸರ್ಕಾರದ ಒತ್ತಡ ಕಾರಣಕ್ಕೆ ಸಣ್ಣ ಸಣ್ಣ ಮಕ್ಕಳ ಜೊತೆ ಪಾಕಿಸ್ತಾನಲ್ಲಿರುವ ತಮ್ಮ ಮನೆ ತೊರೆಯುತ್ತಿರುವ ಅಫ್ಘಾನ್ ಜನರು ಈಗ ಎಲ್ಲಿಗೆ ಹೋಗ್ತಾ ಇದ್ದಾರೆ? ಎಂಬ ಪ್ರಶ್ನೆ ಕಾಡುತ್ತಿದೆ.
ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡುತ್ತಾ?
ಅಫ್ಘಾನಿಸ್ತಾನ ಜನಕ್ಕೆ ಮರಳಿ ತಮ್ಮ ದೇಶಕ್ಕೆ ತೆರಳಲು ಆತಂಕವು ಕಾಡುತ್ತಿದೆ. ಯಾಕಂದ್ರೆ ಉಗ್ರರ ಆಡಳಿತದ ಅಫ್ಘಾನ್ ನೆಲದಲ್ಲಿ ಬಡತನ ರುದ್ರನರ್ತನ ಮಾಡುತ್ತಿದೆ. ಹಾಗೇ ಪಾಕ್ ಮೂಲಕ ಅಫ್ಘಾನ್‌ಗೆ ಮರಳಿ ಬರುತ್ತಿರುವ ತಮ್ಮ ಪ್ರಜೆಗಳ ವಿರುದ್ಧ, ತಾಲಿಬಾನ್ ಆಡಳಿತ ಕ್ರಮ ಕೈಗೊಳ್ಳುವ ಭಯ ಕೂಡ ಆವರಿಸಿದೆ. ಇದಕ್ಕೇ ಹೇಳಿದ್ದು ಅಫ್ಘಾನ್ ಜನರು ಇದೀಗ ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದಾರೆ ಅಂತಾ. ಅವರ ನೆರವಿಗೆ ವಿಶ್ವಸಂಸ್ಥೆ ಬರುತ್ತಾ? ಈಗ ಸೂರು ಕಳೆದುಕೊಂಡವರಿಗೆ ನೆಲೆ ಸಿಗುತ್ತಾ? ಕಾದು ನೋಡಬೇಕಿದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications