ಗಾಜಾ ಪ್ರಜೆಗಳಿಗೆ ಗಾಯದ ಮೇಲೆ ಬರೆ, ಭೀಕರ ಪ್ರವಾಹಕ್ಕೆ ನಲುಗಿದ ನಿರಾಶ್ರಿತರು...
ಗಾಜಾ ಜಗತ್ತಿನ ಗಮನ ಸೆಳೆಯುತ್ತಿದ್ದು, ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿರುವ ಆರೋಪ ನಡುವೆ ಈಗಾಗಲೇ 60,000ಕ್ಕೂ ಜನರು ಜೀವ ಬಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೂಡ ಮಾಡಲಾಗುತ್ತಿದೆ. ಇದು ಸಾಲದು ಎನ್ನುವಂತೆ ಈಗ, ಪ್ರಕೃತಿ ವಿಕೋಪ ಕೂಡ ಗಾಜಾ ಪಟ್ಟಿಯಲ್ಲಿ ಜನರಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಅಂದಹಾಗೆ ಈಗ ದಕ್ಷಿಣ ಗಾಜಾದಲ್ಲಿ ಪ್ರತಿಕೂಲ ಹವಾಮಾನ ಹಿನ್ನೆಲೆ ಭಾರಿ ಜೋರಾಗಿ ಮಳೆ ಬಿದ್ದು, ಪ್ರವಾಹವೂ ಸೃಷ್ಟಿಯಾಗಿದೆ. ಹೀಗೆ ದಿಢೀರ್ ಪ್ರವಾಹ ಹಿನ್ನೆಲೆ ನಿರಾಶ್ರಿತರ ಟೆಂಟ್‌ಗಳು ಕೂಡ ಕೊಚ್ಚಿ ಹೋಗಿವೆ.
ಖಾನ್ ಯೂನಿಸ್ ಪ್ರದೇಶದ ಅಲ್-ಮವಾಸಿ ಸುತ್ತಮುತ್ತ ಭಾರಿ ಮಳೆಯಿಂದ ಈಗಾಗಲೇ ಹಲವು ಟೆಂಟ್‌ಗಳು ನಾಶವಾಗಿವೆ. ಹೀಗೆ ಭಾರಿ ಮಳೆ ಹಿನ್ನೆಲೆ ಹಲವರು ಜೀವ ಕೂಡ ಕಳೆದುಕೊಂಡಿದ್ದು, ಜೀವ ಉಳಿಸಿಕೊಂಡವರ ನರಳಾಟ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಇಸ್ರೇಲ್ ನಡೆಸುತ್ತಿರುವ ಭಾರಿ ಘೋರ ಕಾರ್ಯಾಚರಣೆ ಪರಿಣಾಮ ಹತ್ತಾರು ಸಾವಿರ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಹೀಗೆ ನೆಲಕ್ಕೆ ಉರುಳಿದ ಕಟ್ಟಡಗಳ ಅವಶೇಷಗಳ ಜೊತೆಯಲ್ಲೇ ಜೀವನ ನಡೆಸುತ್ತಿರುವ ಗಾಜಾ ಪಟ್ಟಿ ಜನರಿಗೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಕೂಡ ಈಗ ಎದುರಾಗುತ್ತಿವೆ.

ಗಾಜಾ ಪಟ್ಟಿಯಲ್ಲಿ ಎಲ್ಲವೂ ನಾಶ...
ಅಂದಹಾಗೆ ಇಸ್ರೇಲ್ ದಾಳಿಯಿಂದ ರಸ್ತೆಗಳು, ನೀರು ಸರಬರಾಜು & ಒಳಚರಂಡಿ ವ್ಯವಸ್ಥೆ ಗಾಜಾ ಪಟ್ಟಿಯಲ್ಲಿ ನಾಶವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಇದೇ ಕಾರಣ ಇದೀಗ ಭಾರಿ ಪ್ರಮಾಣದಲ್ಲಿ ಪ್ರವಾಹ ಸೃಷ್ಟಿಯಾಗಿದೆ ಎಂಬುದು ಸ್ಥಳೀಯ ಪಾಲಿಕೆಗಳ ಅಧಿಕಾರಿ ವರ್ಗದ ಆರೋಪ. ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ಮಿಲಿಟರಿ ಈ ರೀತಿ ಭಾರಿ ದೊಡ್ಡ ಹಾನಿ ಮಾಡಿದೆ. ಹೀಗಾಗಿ ದೊಡ್ಡ ಮಟ್ಟದ ಸಮಸ್ಯೆ ಸೃಷ್ಟಿಯಾಗಿದೆ ಎಂಬ ಆರೋಪವನ್ನ ಮಾಡಲಾಗಿದೆ.
ಇಸ್ರೇಲ್ ಸೇನೆಯಿಂದ ನಿರಂತರ ದಾಳಿ...
2023 ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಇಸ್ರೇಲ್ & ಗಾಜಾ ಯುದ್ಧ 2 ವರ್ಷ ಪೂರೈಸಿದೆ. ಗಾಜಾ ಪಟ್ಟಿಯಲ್ಲಿ ಭೀಕರವಾಗಿ ಆರಂಭವಾಗಿರುವ ವಾರ್ ಮತ್ತಷ್ಟು ದೊಡ್ಡ ಹಂತಕ್ಕೆ ತಲುಪಿ, ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಎಲ್ಲಿ ನೋಡಿದರೂ ಕುಸಿದು ಬಿದ್ದ ಕಟ್ಟಡ ಅವಶೇಷ & ಶವಗಳ ನಡುವೆ ಜನ ಜೀವನ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಹಮಾಸ್ ನಾಯಕರನ್ನ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿರುವ ಇಸ್ರೇಲಿ ಸೇನೆ, ಸ್ಥಳೀಯರಿಗೆ ಅಗತ್ಯ ಇರುವ ವಸ್ತುಗಳನ್ನು ಕೂಡ ಪೂರೈಕೆ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ.












Click it and Unblock the Notifications