ಇಮ್ರಾನ್ ಖಾನ್ ಗುಟ್ಟಾಗಿ ಮತ್ತೆ ಮದುವೆಯಾದರಂತೆ, ಹೌದಾ..?!

Posted By:
Subscribe to Oneindia Kannada

ಇಸ್ಲಾಮಾಬಾದ್, ಜನವರಿ 06: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ತೆಹ್ರಿಕ್ ಇ ಇನ್ಸಾಫ್ (ಪಿಟಿಐ)ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಅವರ ಆಪ್ತ ಮೂಲಗಳೇ ಈ ವಿಷಯ ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ತಮಗೆ ಅಧ್ಯಾತ್ಮ ಮಾರ್ಗದರ್ಶಿಯಾಗಿದ್ದ ಮಹಿಳೆಯನ್ನು ಹೊಸ ವರ್ಷದ ಮೊದಲ ದಿನದಂದೇ ಇಮ್ರಾನ್ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ವರದಿ ಹೇಳಿದೆ.

ಇಮ್ರಾನ್ ಖಾನ್ 10 ತಿಂಗಳ ದಾಂಪತ್ಯಕ್ಕೆ ಬ್ರೇಕ್

ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಿಟಿಐ ನಾಯಕ ಮುಫ್ತಿ ಸಯೀದ್ ಉತ್ತರಿಸಲು ನಿರಾಕರಿಸಿದ್ದು, ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಇಮ್ರಾನ್ ಖಾನ್ ಆಪ್ತ ವಲಯ ಈ ಸುದ್ದಿಯನ್ನು ತಳ್ಳಿಹಾಕಿದ್ದು, ಇಂಥ ವಂದತಿಗಳನ್ನು ಹಬ್ಬಿಸುವ ಮಾಧ್ಯಮಗಳು ತಮ್ಮ ಮಿತಿಯನ್ನು ದಾಟಬಾರದು, ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದಿದೆ.

'ಇಮ್ರಾನ್ ಖಾನ್ ನಿಂದ ನನಗೆ ಆಗಿದ್ದು, ಪಾಕಿಸ್ತಾನಕ್ಕೆ ಆಗದಿರಲಿ

Has Imran Khan secretly married again?

ಖಾನ್ ಮದುವೆ ಸುದ್ದಿ ನಿಜವೇ ಆದರೆ, ಇದು ಅವರಿಗೆ ಮೂರನೇ ಮದುವೆ! 2004 ರ ಜೂನ್ 22 ರಂದು ತಮ್ಮ ಮೊದಲ ಪತ್ನಿ ಜೆಮಿಮಾ ಖಾನ್ ಅವರೊಂದಿಗೆ ಸಂಬಂಧ ಕಡಿದುಕೊಂಡು, ವಿಚ್ಛೇದನ ನೀಡಿದ್ದ ಇಮ್ರಾನ್ ಖಾನ್, 2015 ರಲ್ಲಿ ಪತ್ರಕರ್ತೆ ರೆಹಾಮ್ ಖಾನ್ ಎಂಬುವವರನ್ನು ಮದುವೆಯಾಗಿ ಕೇವಲ 10 ತಿಂಗಳಷ್ಟೇ ದಾಂಪತ್ಯ ನಡೆಸಿದ್ದರು. ಇದೀಗ ಮತ್ತೊಂದು ಮದುವೆಯ ಸುದ್ದಿ ಕೇಳಿಬರುತ್ತಿದ್ದು ಇದರ ಸತಾಸತ್ಯತೆ ಇನ್ನೂ ಹೊರಬರಬೇಕಷ್ಟೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan Tehreek-e-Insaf (PTI) chief Imran Khan is believed to have got married once again on New Year's Day in Lahore. According to The News' report, Imran Khan has tied the knot with a woman he used to visit for spiritual guidance.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ