• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆಕ್ಸ್ ಸ್ಕ್ಯಾಂಡಲ್: ಇಮ್ರಾನ್ ಖಾನ್ ಸರ್ಕಾರಕ್ಕೆ ಸಂಕಷ್ಟ ತಂದ ಟಿಕ್ ಟಾಕ್ ಸ್ಟಾರ್

|

ಇಸ್ಲಾಮಾಬಾದ್, ಜನವರಿ 2: ಪಾಕಿಸ್ತಾನದಲ್ಲಿ ಲೈಂಗಿಕ ಹಗರಣವೊಂದು ಒಂದು ಸದ್ದು ಮಾಡುತ್ತಿದ್ದು, ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ಇಮ್ರಾನ್ ಖಾನ್ ಸರ್ಕಾರದ ಸಚಿವರೊಬ್ಬರ ಸರಸ ಸಲ್ಲಾಪದ ಸಂಗತಿ ಬಹಿರಂಗವಾಗಿದೆ. ಸ್ವತಃ ಪ್ರಧಾನಿ ಇಮ್ರಾನ್ ಖಾನ್ ಕೂಡ ಈ ಜಾಲದೊಳಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಗರಣ ಪಾಕಿಸ್ತಾನದ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಇಮ್ರಾನ್ ನೇತೃತ್ವದ ಪಿಟಿಐ ವಿರುದ್ಧ ವಿರೋಧಪಕ್ಷಗಳು ಮುಗಿಬಿದ್ದಿವೆ. ಈ ಕೋಲಾಹಲಕ್ಕೆ ಕಾರಣವಾಗಿರುವುದು ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್.

ಟಿಕ್ ಟಾಕ್ ಸ್ಟಾರ್ ಹರೀಮ್ ಶಾ, ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಜತೆ ನಡೆಸಿದ ರಹಸ್ಯ ವಿಡಿಯೋ ಕರೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಖಾಸಗಿ ವಿಡಿಯೋಗಳನ್ನು ಕೂಡ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಬಳಿಕ ಈ ರೀತಿ ಬರೆದಿದ್ದ ಟ್ವೀಟ್‌ಅನ್ನು ಅಳಿಸಿ ಹಾಕಿದ್ದರು.

ಮಗಳು ಆರತಿ ಎತ್ತಿದ್ದಕ್ಕೆ ಟಿವಿ ಒಡೆದು ಹಾಕಿದ ಪಾಕ್ ಕ್ರಿಕೆಟಿಗ

ತನ್ನ ಸ್ನೇಹಿತನಿಂದ ವಿಡಿಯೋಗಳು ಬಿಡುಗಡೆಯಾಗಿದ್ದು, ಇವು ನಕಲಿಯಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ತಮ್ಮ ಚಿತ್ರಗಳನ್ನು ಫೋಟೊಶಾಪ್ ಮೂಲಕ ವಿರೂಪಗೊಳಿಸಿ ಹರಿಬಿಡಲಾಗುತ್ತಿದ್ದು, ತಮಗೆ ಬೆದರಿಕೆ ಕರೆಗಳು ಕೂಡ ಬರುತ್ತಿವೆ ಎಂದು ಹರೀಮ್ ಶಾ ಹೇಳಿದ್ದಾರೆ.

ಪಿಟಿಐ ಕಾರ್ಯಕರ್ತರ ಆಕ್ರೋಶ

ಪಿಟಿಐ ಕಾರ್ಯಕರ್ತರ ಆಕ್ರೋಶ

ಸಚಿವ ರಶೀದ್ ಅವರು ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡುತ್ತಿದ್ದು, ಅಶ್ಲೀಲ ವಿಡಿಯೋಗಳನ್ನು ತಮಗೆ ಕಳುಹಿಸುತ್ತಿದ್ದರು ಎಂದು ಹರೀಮ್ ಒಮ್ಮೆ ಆರೋಪಿಸಿದ್ದರು. ಇದರ ಕುರಿತಾದ ಸಣ್ಣ ತುಣುಕೊಂದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಬಳಿಕ ಆಕೆಯತ್ತ ಎಲ್ಲರ ಗಮನ ಹರಿದಿತ್ತು. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾದರು. ಈ ಬಗ್ಗೆ ಜನರು ರಶೀದ್ ಅವರನ್ನು ಪ್ರಶ್ನಿಸಲಾರಂಭಿಸಿದ್ದರು. ಇದರಿಂದ ಹರೀಮ್ ವಿರುದ್ಧ ಪಿಟಿಐ ಪಕ್ಷದ ಕಾರ್ಯಕರ್ತರು ಸಿಟ್ಟಿಗೆದ್ದಿದ್ದರು.

ಪಾಕ್‌ ಕ್ರಿಕೆಟ್ ತಂಡದ ಹಿಂದು ಆಟಗಾರನಿಗೆ ಕಿರುಕುಳ: ಶೋಯೆಬ್ ಅಖ್ತರ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಇದಕ್ಕೂ ಮುನ್ನ ರಶೀದ್ ಮತ್ತು ಹರೀಮ್ ಇಬ್ಬರೂ ವಿಡಿಯೋ ಕಾಲ್ ಮೂಲಕ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಹರೀಮ್ ಅವರೇ ಈ ವಿಡಿಯೋಗಳನ್ನು ವೈರಲ್ ಮಾಡಿದ್ದರೇ ಎಂಬುದು ಸ್ಪಷ್ಟವಾಗಿರಲಿಲ್ಲ. ಇದರಲ್ಲಿ ಹರೀಮ್ ಅವರು ಕೋಣೆಯೊಂದರಲ್ಲಿ ಕುಳಿತು ರಶೀದ್ ಜತೆ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಹರಟುತ್ತಿದ್ದದ್ದು ಕಾಣಿಸಿತ್ತು.

ಹರೀಮ್-ಖಟ್ಟಕ್ ಟಿಕ್ ಟಾಕ್ ಗೆಳತಿಯರು

ಹರೀಮ್-ಖಟ್ಟಕ್ ಟಿಕ್ ಟಾಕ್ ಗೆಳತಿಯರು

ಮತ್ತೊಂದು ವಿಡಿಯೋದಲ್ಲಿ ಶೇಕ್ ರಶೀದ್ ಅವರು ಪಾಕಿಸ್ತಾನದ ಮತ್ತೊಬ್ಬ ಟಿಕ್ ಟಾಕ್ ಸ್ಟಾರ್, ಹರೀಮ್ ಅವರ ಸ್ನೇಹಿತೆ ಸುಂದಲ್ ಖಟ್ಟಕ್ ಜತೆ ಮಾತನಾಡುತ್ತಿರುವುದನ್ನು ಚಿತ್ರೀಕರಿಸಲಾಗಿತ್ತು. ಲೈವ್ ವಿಡಿಯೋ ಚಾಟ್‌ ಆಪ್‌ನ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗಳು ನೈಜವಾಗಿದ್ದು, ತನ್ನ ಸ್ನೇಹಿತರಲ್ಲಿ ಒಬ್ಬರು ಸೋರಿಕೆ ಮಾಡಿರುವುದಾಗಿ ಹರೀಮ್ ಹೇಳಿದ್ದಾರೆ. ಹರೀಮ್ ಮತ್ತು ಖಟ್ಟಕ್ ಇಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಾಗಿದ್ದು, ವಿವಿಧ ದೇಶಗಳ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡ, ವಿಮಾನದ ಮೊದಲ ದರ್ಜೆಯಲ್ಲಿ ಪ್ರಯಾಣಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದು, ಜನರ ಹುಬ್ಬೇರಿಸುವಂತೆ ಮಾಡಿತ್ತು. ಖಟ್ಟಕ್ ವಿವಾದಗಳಿಂದಾಗಿ ಟಿಕ್‌ಟಾಕ್‌ನಿಂದ ಕೆಲವು ಸಮಯ ನಿಷೇಧಕ್ಕೆ ಒಳಗಾಗಿದ್ದರು.

ಪಿಟಿಐ ಪಕ್ಷದ ಕಾರ್ಯಕರ್ತರು

ಪಿಟಿಐ ಪಕ್ಷದ ಕಾರ್ಯಕರ್ತರು

'ನಾನು ಇಮ್ರಾನ್ ಖಾನ್ ಅವರ ಅಭಿಮಾನಿಯಾಗಿದ್ದು, ನನ್ನ ಕುಟುಂಬದ ಸದಸ್ಯರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸದಸ್ಯರಾಗಿದ್ದಾರೆ. ನಾವು ಪಿಟಿಐ ಪಕ್ಷದ ಕಾರ್ಯಕರ್ತರು. ಹೀಗಾಗಿ ಅವರೊಂದಿಗಿನ ವಿಡಿಯೋಗಳನ್ನು ಮಾಡಿದ್ದೇವೆ. ಆದರೆ ಇವು ಪಕ್ಷಕ್ಕೆ ಸಂಬಂಧಿಸಿದ್ದಲ್ಲ' ಎಂದು ಹರೀಮ್ ಜಿಯೋ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮತ್ತೊಂದು ಸಂದರ್ಶನದಲ್ಲಿ ಅವರು ಸಚಿವ ಶೇಖ್ ರಶೀದ್ ಅವರು ತಮ್ಮ ಕುಟುಂದವರಿದ್ದಂತೆ ಎಂದಿದ್ದಾರೆ.

ಪಾಕ್ ಗೆ ಭಾರತೀಯ ನೌಕಾಪಡೆಯ 'ಸೂಕ್ಷ್ಮ ಮಾಹಿತಿ' ರವಾನೆ; 7 ಮಂದಿ ಬಂಧನ

ವಿದೇಶಾಂಗ ಸಚಿವರ ಕುರ್ಚಿಯಲ್ಲಿ ಕುಳಿತಿದ್ದರು

ಪಾಕಿಸ್ತಾನದಲ್ಲಿ ಟಿಕ್‌ ಟಾಕ್ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಹರೀಮ್ ಶಾ, ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ಕೂಡ ವಿವಾದಕ್ಕೆ ಸಿಲುಕಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಒಳಗೆ ಅವರು ಟಿಕ್ ಟಾಕ್ ವಿಡಿಯೋ ಚಿತ್ರೀಕಿರಿಸಿದ್ದರು. ಭಾರಿ ಬಿಗಿ ಭದ್ರತೆ ಇರುವ ಕಚೇರಿಯ ಒಳಗೆ ಅವರು ಅಡ್ಡಾಡಿದ್ದರಲ್ಲದೆ, ವಿದೇಶಾಂಗ ಸಚಿವರ ಕುರ್ಚಿಯಲ್ಲಿ ಕುಳಿತಿದ್ದರು. ಆ ವಿಡಿಯೋದ ಹಿನ್ನೆಲೆಯಲ್ಲಿ ಪಂಜಾಬಿ ಮತ್ತು ಹಿಂದಿ ಹಾಡುಗಳು ಕೇಳಿಸಿದ್ದವು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತೀವ್ರ ಟೀಕೆಗೊಳಗಾದ ಬಳಿಕ ಈ ಬಗ್ಗೆ ಸರ್ಕಾರದಿಂದ ವಿಚಾರಣೆ ನಡೆದಿತ್ತು.

ನಿಯಮಕ್ಕೆ ವಿರುದ್ಧವಾಗಿದ್ದರೆ ಬಿಡಬಾರದಿತ್ತು...

ನಿಯಮಕ್ಕೆ ವಿರುದ್ಧವಾಗಿದ್ದರೆ ಬಿಡಬಾರದಿತ್ತು...

ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ್ದ ಹರೀಮ್, 'ಹೌದು, ನಾನು ಅನುಮತಿ ಪಡೆದ ಬಳಿಕ ಕಚೇರಿ ಒಳಗೆ ಹೋಗಿದ್ದೆ. ಅದು ನಿಯಮ ಮತ್ತು ನೀತಿಗಳಿಗೆ ವಿರುದ್ಧವಾಗಿದ್ದರೆ ಅವರು ವಿಡಿಯೋ ಮಾಡಲು ನನಗೆ ಅವಕಾಶ ನೀಡಬಾರದಿತ್ತು. ನಾನು ರಾಷ್ಟ್ರೀಯ ಸಭೆಯೊಳಗೂ ಹೋಗಿದ್ದೆ. ನನಗೆ ಪಾಸ್ ಸಿಕ್ಕಿತ್ತು. ನಿಯಮಬದ್ಧವಾಗಿ ನನ್ನ ಪ್ರವೇಶಾವಕಾಶ ಪಡೆದಿದ್ದೆ. ಯಾವ ಭದ್ರತಾಧಿಕಾರಿಯೂ ನನ್ನನ್ನು ತಡೆದಿರಲಿಲ್ಲ. ನನಗೆ ಯಾವ ಅಡೆತಡೆಯೂ ಇರಲಿಲ್ಲ. ಯಾರೂ ನನಗೆ ಸಹಾಯ ಮಾಡಿರಲಿಲ್ಲ. ನನ್ನಷ್ಟಕ್ಕೆ ನಾನು ಹೋಗಿದ್ದೆ' ಎಂದು ಹೇಳಿದ್ದರು.

ಟಿಕ್ ಟಾಕ್ ತಂದ ಜನಪ್ರಿಯತೆ

ಟ್ವಿಟ್ಟರ್‌ನಲ್ಲಿ 2.1 ಮಿಲಿಯನ್‌ಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ಹರೀಮ್ ಶಾ ಅವರ ವಿಡಿಯೋಗಳು ಲಕ್ಷಾಂತರ ಮಂದಿಯಿಂದ ವೀಕ್ಷಣೆಗೆ ಒಳಗಾಗಿವೆ. ಹರೀಮ್ ಶಾ 2019ರ ಅಕ್ಟೋಬರ್‌ನಲ್ಲಿ ವಿದೇಶಾಂಗ ಇಲಾಖೆಯ ಕಚೇರಿಯೊಳಗೆ ಕುಳಿತ ಟಿಕ್ ಟಾಕ್ ವಿಡಿಯೋ 15 ಮಿಲಿಯನ್‌ಗೂ ಅಧಿಕ ವೀಕ್ಷಣೆಗೆ ಒಳಗಾಗಿತ್ತು. ಸಾಮಾನ್ಯ ಯುವತಿಯೊಬ್ಬಳು ಅತ್ಯಂತ ಭದ್ರತೆಯುಳ್ಳ, ಜನಸಾಮಾನ್ಯರಿಗೆ ಪ್ರವೇಶವೇ ಇಲ್ಲದ ಕಚೇರಿಯೊಳಗೆ ಹೋಗಲು ಹೇಗೆ ಆಕೆಗೆ ಅನುಮತಿ ಸಿಕ್ಕಿತ್ತು? ಎಂದು ಪ್ರಶ್ನಿಸಲಾಗಿತ್ತು. ಆದರೆ ಈ ವಿಡಿಯೋ ಆಕೆಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತ್ತು.

ಯಾರಿದು ಹರೀಮ್ ಶಾ?

ಯಾರಿದು ಹರೀಮ್ ಶಾ?

ಕೈಬರ್ ಪಖ್ತುಂಖ್ವಾ ಪ್ರಾಂತ್ಯದವರಾದ ಹರೀಮ್ ಶಾ, ಇಸ್ಲಾಮಾಬಾದ್‌ನಲ್ಲ ನೆಲೆಸಿದ್ದಾರೆ. ಅವರ ಪೋಷಕರಿಬ್ಬರೂ ಸರ್ಕಾರಿ ನೌಕರರು. ಆಕೆಗೆ ಮೂವರು ಸಹೋದರಿಯರು ಮತ್ತು ಮೂವರು ಸೋದರರು. ಹರೀಮ್ ಕಾಂಪಿಟಿಟಿವ್ ರಿಲಿಜಿಯನ್‌ನ ಎಂಫಿಲ್ ವಿದ್ಯಾರ್ಥಿನಿ. ಹರೀಮ್ ಶಾ, ಪ್ರಧಾನಿ ಇಮ್ರಾನ್ ಖಾನ್ ಜತೆಗೆ ನಿಂತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಗೆ ಹೀಗೆ ಗಣ್ಯರ ಜತೆ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದರು. ಇಮ್ರಾನ್ ಖಾನ್ ಅವರನ್ನು ಅನೇಕ ಬಾರಿ ತಾನು ಭೇಟಿಯಾಗಿದ್ದಾಗಿ ಹರೀಮ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

English summary
Videos of Pakistan Railway minister Sheikh Rasheed went viral on social media who was chatting with TikTok star Hareem Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X