ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಹಜ್ ಪ್ರಾರ್ಥನೆಯಲ್ಲಿ 1,000 ಯಾತ್ರಾರ್ಥಿಗಳಿಗೆ ಅವಕಾಶ

|
Google Oneindia Kannada News

ರಿಯಾದ್, ಜುಲೈ.21: ಕೊರೊನಾವೈರಸ್ ಸೋಂಕಿನ ಹರಡುವಿಕೆ ವಿರುದ್ಧ ದೇಶವು ತನ್ನ ಯುದ್ಧವನ್ನು ಮುಂದುವರಿಸುತ್ತಿದೆ. ಇದರಿಂದ ಈ ವರ್ಷ ಈಗಾಗಲೇ ಸೌದಿ ಅರೇಬಿಯಾಗೆ ತೆರಳಿರುವ ವಿವಿಧ ರಾಷ್ಟ್ರಗಳ ಸುಮಾರು 1,000 ಯಾತ್ರಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸೌದಿ ಅರೇಬಿಯಾ ಪ್ರಕಟಿಸಿದೆ.

ಆಧುನಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದ ಹೊರಗಿನ ಯಾತ್ರಾರ್ಥಿಗಳನ್ನು ಹೊರಗಿಡುವ ನಿರ್ಧಾರಕ್ಕೆ ವಿಶ್ವದಾದ್ಯಂತ ಮುಸ್ಲಿಮರನ್ನು ನಿರಾಶೆಗೊಳಿಸಿದೆ. ಆದರೆ ಆರೋಗ್ಯದ ದೃಷ್ಟಿ ಮತ್ತು ಮುಂದಾಗುವ ಅಪಾಯಗಳಿಂದಾಗಿ ಇದು ಅಗತ್ಯವೆಂದು ಹಲವರು ಒಪ್ಪಿಕೊಂಡಿದ್ದಾರೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.

ಸೌದಿ ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕುಸೌದಿ ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕು

ಕಳೆದ ವರ್ಷ ನಡೆದ ಹಜ್ ನ ಐದು ದಿನಗಳ ವಿಶೇಷ ಪ್ರಾರ್ಥನೆಯ ಸಂದರ್ಭದಲ್ಲಿ ಅತಿಹೆಚ್ಚು ಯಾತ್ರಾರ್ಥಿಗಳು ಭಾಗಿಯಾಗಿದ್ದರು. 2019ರ ಸಾಲಿನಲ್ಲಿ 2.5 ಮಿಲಿಯನ್ ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

Hajj 2020: Saudi Arabia To Allow Around 1,000 Pilgrims To Perform Hajj

ಇದಲ್ಲದೆ, ಜುಲೈ 31 ರಿಂದ ಪ್ರಾರಂಭವಾಗಲಿರುವ ಈ ವರ್ಷದ ಹಜ್ ಗೆ ಆಯ್ಕೆ ಪ್ರಕ್ರಿಯೆ ಏನೆಂಬುದರ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆದರೆ ಈ ಬಾರಿ 1,000 ಯಾತ್ರಾರ್ಥಿಗಳಿಗೆ ಅವಕಾಶ ನೀಡುವುದಕ್ಕೆ ತೀರ್ಮಾನಿಸಲಾಗಿದ್ದು, ಇದರಲ್ಲಿ ಸ್ವಲ್ಪ ಹೆಚ್ಚಾಗಬಹುದು ಇಲ್ಲವೇ ಕಡಿಮೆಯಾಗಬಹುದು ಎಂದು ಹಜ್ ಸಚಿವ ಮೊಹಮ್ಮದ್ ಬೆಂಟೇನ್ ತಿಳಿಸಿದ್ದಾರೆ.

ಮೆಕ್ಕಾಗೆ ಆಗಮಿಸುವುದಕ್ಕೂ ಮೊದಲು ಯಾರ್ತಾರ್ಥಿಗಳು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಟ್ಟಿರಬೇಕು. 65 ವರ್ಷದೊಳಗಿನ ಯಾವುದೇ ರೀತಿ ಆರೋಗ್ಯ ಸಮಸ್ಯೆ ಇಲ್ಲದ ಯಾತ್ರಾರ್ಥಿಗಳಿಗೆ ಮಾತ್ರ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮೆಕ್ಕಾದಲ್ಲಿ ನಡೆದ ಪ್ರಾರ್ಥನೆ ಬಳಿಕೆ ಅದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಹೋಮ್ ಕ್ವಾರೆಂಟೈನ್ ನಲ್ಲಿ ಇರತಕ್ಕದ್ದು ಎಂದು ಆರೋಗ್ಯ ಸಚಿವ ತೌಫಿಕ್-ಅಲ್-ರಬಿಯಹಾ ತಿಳಿಸಿದ್ದಾರೆ.

English summary
Hajj 2020: Saudi Arabia To Allow Around 1,000 Pilgrims To Perform Hajj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X