ಹಫೀಜ್ ಸಯೀದ್ ಪಾಕಿಸ್ತಾನದ 'ನಿಜವಾದ ಪ್ರಧಾನಮಂತ್ರಿ'

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 3: ಜಮಾತ್-ಉದ್-ದವಾ ಮುಖ್ಯಸ್ಥ, ಲಷ್ಕರ್-ಇ-ತೈಬಾ ಸ್ಥಾಪಕ ಹಫೀಜ್ ಸಯೀದ್ 'ಪಾಕಿಸ್ತಾನದ ನಿಜವಾದ ಪ್ರಧಾನಮಂತ್ರಿ' ಎಂದಿದ್ದಾರೆ ಪಾಕಿಸ್ತಾನ ಮೂಲದ ಕೆನಡಾ ಲೇಖಕ ತಾರೀಕ್ ಫತಾ. ಸದ್ಯಕ್ಕಿರುವ ಭೌಗೋಳಿಕ ಪ್ರದೇಶ ಪಾಕಿಸ್ತಾನ ದೇಶವನ್ನು ರೂಪಿಸಲು ಆಯ್ಕೆ ಮಾಡಿಕೊಂಡಿದ್ದಲ್ಲ ಎಂದು ಅವರು ಹೇಳಿದ್ದಾರೆ.

ನಂಗೊತ್ತಿಲ್ಲ, ನೀವು ಭಾರತೀಯರು ಯಾಕಿಷ್ಟು ತತ್ವಗಳನ್ನು ಇರಿಸಿಕೊಂಡಿದ್ದೀರೋ, ನಿಮಗೆ ಆ ದೇಶವನ್ನು ನಡೆಸುತ್ತಿರುವವರು ಯಾರು ಅಂತಲೇ ಗೊತ್ತಾಗ್ತಿಲ್ಲ. ಆ (ಜಮಾತ್- ಉದ್-ದವಾ) ಉಗ್ರರು ಹತ್ತು ತಿಂಗಳಲ್ಲಿ ಮೂವತ್ತು ಲಕ್ಷ ಬಂಗಾಲಿಗಳನ್ನು ಕೊಂದವರು. ಏರೋಪ್ಲೇನ್ ನಿಂದ ಬಲೂಚಿ ಯುವಕನನ್ನು ಎಸೆದವರು, ಯುವತಿಯರ ಮೇಲೆ ಅತ್ಯಾಚಾರ ಮಾಡಿದವರು ಎಂದು ಖಾಸಗಿ ವಾಹಿಸಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.[ಸರ್ಜಿಕಲ್ ಸ್ಟ್ರೈಕ್ ಅಂದ್ರೇನು ಭಾರತಕ್ಕೆ ತೋರಿಸುತ್ತೇವೆ-ಹಫೀಜ್!]

Hafeez saeed Pakistan 'real prime minister'

1971ರ ಯುದ್ಧದ ನಂತರ ತೊಂಬತ್ತು ಸಾವಿರ ಪಾಕಿಸ್ತಾನಿ ಯುದ್ಧ ಕೈದಿಗಳನ್ನು ಇಂದಿರಾಗಾಂಧಿ ಬಿಡುಗಡೆ ಮಾಡಿದರು. 1973ರಿಂದ 1975ರ ವರೆಗೆ ಬಲೂಚಿಸ್ತಾನದಲ್ಲಿ ಸಾಮೂಹಿಕ ಹತ್ಯೆಗಳನ್ನು ಮಾಡುವುದಕ್ಕೆ ಪಾಕಿಸ್ತಾನಿ ಸೇನೆಯು ಆ ಕೈದಿಗಳನ್ನು ನಿಯೋಜಿಸಿತು. ಪಾಕಿಸ್ತಾನ ಒಮ್ದು ಸಂಕ್ಷಿಪ್ತ ರೂಪ. ಸ್ವತಃ ಒಂದು ದೇಶವಲ್ಲ. ಪಾಕಿಸ್ತಾನ ಅನ್ನೋದು ನಮ್ಮ ಮೇಲೆ ಮಾಡಿದ ಜೋಕ್ ಎಂದಿದ್ದಾರೆ ಫತಾ.

ಪ್ರಜಾಪ್ರಭುತ್ವದ ಬಗ್ಗೆ ಹೆದರಿಕೆ ಇದ್ದ ಬಿಹಾರ, ಉತ್ತರ ಪ್ರದೇಶದ ನವಾಬರು ರೂಪಿಸಿದ ದೇಶ ಪಾಕಿಸ್ತಾನ. ಅವರು ನೇಪಾಳದ ಗಡಿಯಲ್ಲಿ ಪಾಕಿಸ್ತಾನ ಸ್ಥಾಪನೆ ಮಾಡಬೇಕಿತ್ತು. ಅದರ ಬದಲು ಮುಸ್ಲಿಂ ಲೀಗ್ ಸೋಲು ಅನುಭವಿಸಿದ್ದ ಪಂಜಾಬಿನ ಆಚೆಗೆ ಹೋದರು.[ನಿವೃತ್ತಿಗೂ ಮುನ್ನ ಭಾರತದ ವಿರುದ್ದ ರಕ್ತಾಕ್ಷರ: ಪಾಕ್ ಸೇನಾ ಮುಖ್ಯಸ್ಥನ ಚಿಂತನೆ?]

ಬಲೂಚಿಸ್ತಾನ ಸ್ವತಂತ್ರವಾಗಿತ್ತು. ಆದರೆ 1947ರಲ್ಲಿ ಪಾಕಿಸ್ತಾನ ಸೇನೆ ಬಲವಂತವಾಗಿ ಆಕ್ರಮಿಸಿತು ಎಂದಿರುವ ಫತಾ, ಪ್ರಧಾನಿ ನವಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ. ಅಂದಹಾಗೆ, ಹಫೀಜ್ ಸಯೀದ್ ಪಾಕಿಸ್ತಾನದ "ನಿಜವಾದ ರಕ್ಷಣಾ ಸಚಿವನೂ ಹೌದು' ಎಂದಿದ್ದಾರೆ ಮುಸ್ಲಿಂ ಕೆನಡಿಯನ್ ಕಾಂಗ್ರೆಸ್ ನ ಅಧ್ಯಕ್ಷರೂ ಆಗಿರುವ ತಾರೀಕ್ ಫತಾ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Terrorist Hafiz Saeed, founder of Lashkar-e-Taiba, is the 'real Prime Minister of Pakistan', said by Pakistan born Canadian author Tarek Fatah on Saturday.
Please Wait while comments are loading...