• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವು

|
Google Oneindia Kannada News

ಇಸ್ಲಾಮಾಬಾದ್, ಜೂನ್ 29: ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದು, ಇದರಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 3 ಜನರು ಗಾಯಗೊಂಡಿದ್ದಾರೆ. ಮಾಹಿತಿಯ ಪ್ರಕಾರ 4 ದಾಳಿಕೋರರು ಗ್ರೆನೇಡ್‌ಗಳಿಂದ ದಾಳಿ ಮಾಡಿದ್ದಾರೆ. ಘಟನೆಯ ನಂತರ ಭದ್ರತಾ ಸಿಬ್ಬಂದಿ ಎಲ್ಲಾ ದಾಳಿಕೋರರನ್ನು ಕೊಂದು ಹಾಕಿದ್ದಾರೆ. ಈ ದಾಳಿ ಹಿನ್ನಲೆಯಲ್ಲಿ ಕರಾಚಿಯ ಎಲ್ಲಾ ಆಸ್ಪತ್ರೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಒಟ್ಟು ನಾಲ್ಕು ಭಯೋತ್ಪಾದಕರು ಷೇರು ವಿನಿಮಯ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಭಯೋತ್ಪಾದಕರು ಪ್ರವೇಶ ದ್ವಾರದ ಮೇಲೆ ಗ್ರೆನೇಡ್‌ನಿಂದ ದಾಳಿ ಮಾಡಿದರು, ನಂತರ Ak 47 ಹಿಡಿದು ಒಳನುಗ್ಗಲು ಪ್ರಯತ್ನಿಸಿದರು. ಇದರ ನಂತರ ಪೊಲೀಸರು ನಾಲ್ವರು ಭಯೋತ್ಪಾದಕರನ್ನು ಸುತ್ತುವರೆದು ಕೊಂದು ಹಾಕಿದ್ದಾರೆ. ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದು, ಹತ್ತು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಈ ಭಯೋತ್ಪಾದಕರು ಪೊಲೀಸ್ ಸಮವಸ್ತ್ರದಲ್ಲಿದ್ದರು ಕಾರಿನಿಂದ ಬಂದಿಳಿದ ಬಳಿಕ ದಾಳಿ ನಡೆಸಿದರು ಎಂದು ಹೇಳಲಾಗಿದೆ. ಆದರೆ ಇದುವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಅತಿ ಹೆಚ್ಚು ಭದ್ರತೆಯನ್ನು ಹೊಂದಿರುವ ಸ್ಟಾಕ್ ಎಕ್ಸೇಂಜ್‌ ಮೇಲೆ ದಾಳಿ ನಡೆದಿರುವುದು ಪಾಕಿಸ್ತಾನದಲ್ಲಿರುವ ಲೋಪವನ್ನು ಪ್ರದರ್ಶಿಸಿದೆ.

ಇನ್ನು ಇದೇ ಸಮಯದಲ್ಲಿ ಭಾರತದಲ್ಲೂ ಪಾಕ್ ಬೆಂಬಲಿತ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆ ಇಂದು ಮತ್ತೊಮ್ಮೆ ಭಯೋತ್ಪಾದಕ ಮುಕ್ತವಾಗಿದೆ. ಸೋಮವಾರ ಬೆಳಿಗ್ಗೆ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ದೋಡಾ ನಿವಾಸಿ ಹಿಜ್ಬುಲ್ ಕಮಾಂಡರ್ ಮಸೂದ್ (ಮಸೂದ್) ಮೃತಪಟ್ಟಿದ್ದಾರೆ.

English summary
Gunmen attacked the Pakistani stock exchange building in the city of Karachi on Monday and four assailants were killed, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X