ಜಗತ್ತಿನ ನಿದ್ದೆಗೆಡಿಸಿರುವ ವಾನ್ನಕ್ರೈ ವೈರಸ್ ಹುಟ್ಟಿದ್ದು ಎಲ್ಲಿ?

Posted By:
Subscribe to Oneindia Kannada

ಲಂಡನ್, ಮೇ 16 : ಭಾರತವೂ ಸೇರಿದಂತೆ ನೂರೈವತ್ತು ದೇಶಗಳಲ್ಲಿ ದಾಂಗುಡಿಯಿಟ್ಟು, ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿ ರಂಪಾಟ ನಡೆಸಿರುವ ರಾನ್ಸಮ್ ವೇರ್ ವೈರಸ್ ಹುಟ್ಟಿದ್ದು ಎಲ್ಲಿ?

ಇಡೀ ಅಂತರ್ಜಾಲವನ್ನು ಜಾಲಾಡಿರುವ ಗೂಗಲ್ ಕಂಪನಿಯ ಭಾರತೀಯ ಮೂಲದ ಕಂಪ್ಯೂಟರ್ ಭದ್ರತಾ ಸಂಶೋಧಕ ನೀಲ್ ಮೆಹ್ತಾ, ಇದು ಹುಟ್ಟಿದ್ದು ಉತ್ತರ ಕೊರಿಯಾದಲ್ಲಿ ಎಂದು ಕಂಡುಹಿಡಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಉತ್ತರ ಕೊರಿಯಾದವರ ಪರವಾಗಿ ಕೆಲಸ ಮಾಡುತ್ತಿರುವ ಲಝಾರಸ್ ಗ್ರೂಪ್ ಈ ಕೃತ್ಯದ ಹಿಂದಿರಬಹುದೆಂದು ಅವರು ಶಂಕಿಸಿದ್ದಾರೆ. ಏಕೆಂದರೆ, ವಾನ್ನಾಕ್ರಿಪ್ಟ್ ಕೋಡಿಂಗ್ ನಲ್ಲಿ ಬಳಸಿದ ಕೋಡನ್ನೇ ಹಲವಾರು ಬಾರಿ ಈ ಕಂಪನಿ ಬಳಸಿದೆ.

Google researcher discovers ransomware originated in North Korea

ನೀಲ್ ಮೆಹ್ತಾ ಅವರು ಕಂಡುಹಿಡಿದಿರುವ ಈ ಸಂಗತಿ ಅತ್ಯಂತ ಮಹತ್ವದ್ದಾಗಿದೆ ಮಾಸ್ಕೋ ಮೂಲದ ಸೈಬರ್ ಭದ್ರತಾ ಕಂಪನಿ ಕಾಸ್ಪರ್ಸ್ಕಿ ಲ್ಯಾಬ್ ಹೇಳಿರುವುದನ್ನು ಬಿಬಿಸಿ ತನ್ನ ವರದಿಯಲ್ಲಿ ಹೇಳಿದೆ.

2014ರಲ್ಲಿ ಚೀನಾದಲ್ಲಿರುವ ಲಝಾರಸ್ ಗ್ರೂಪ್ ಸೋನಿ ಪಿಕ್ಚರ್ಸ್ ಮೇಲೆ ಮತ್ತು 2016ರಲ್ಲಿ ಬಾಂಗ್ಲಾದೇಶದ ಬ್ಯಾಂಕ್ ಮೇಲೆ ದಾಳಿ ನಡೆಸಿತ್ತು ಎಂದು ಮೆಹ್ತಾ ಹೇಳಿದ್ದಾರೆ.

ರಾನ್ಸಮ್ ವೇರ್ ವೈರಸ್ ಇಡೀ ಜಗತ್ತಿನ ನಿದ್ದೆಗೆಡಿಸಿರುವುದಂತೂ ನಿಜ. ಬೆಂಗಳೂರಿನಲ್ಲಿ ಬ್ಯಾಂಕುಗಳ ಎಟಿಎಂಗಳನ್ನೆಲ್ಲ ಬಂದ್ ಮಾಡಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೆ ಆನ್ ಲೈನ್ ಟ್ರಾನ್ಸಾಕ್ಷನ್ ಮಾಡಬೇಡಿ ಎಂದು ಗ್ರಾಹಕರನ್ನು ಕೋರಲಾಗಿದೆ.

ಈ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಬೆಂಗಳೂರು ಪೊಲೀಸ್ ಇಲಾಖೆ ಸೇರಿದಂತೆ ಹಲವರು ಹಲವಾರು ಟಿಪ್ಸ್ ಗಳನ್ನು ನೀಡಿದ್ದಾರೆ. ಯಾವುದೇ ವಿಳಾಸವಿಲ್ಲದೆ ಬರುವ ಈಮೇಲನ್ನು ತೆಗೆದು ಅದರಲ್ಲಿನ ಇಎಕ್ಸ್ಇ ಫೈಲನ್ನು ತೆರೆಯಬೇಡಿ ಎಂದೂ ಸೂಚನೆಗಳು ಬರುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian-origin researcher in Google Nitin Mehta has discovered that ransomware originated in North Korea by Lazarus Group based in China, BBC has reported.
Please Wait while comments are loading...