ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್: ಮುಂದಿನ ವರ್ಷದವರೆಗೂ Work From Home ವಿಸ್ತರಿಸಿದ ಗೂಗಲ್!

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಸಪ್ಟೆಂಬರ್ 1: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಗೂಗಲ್ ಸಂಸ್ಥೆಯು ತಮ್ಮ ಸಿಬ್ಬಂದಿಯ ಮನೆಯಿಂದ ಕಾರ್ಯ ನಿರ್ವಹಿಸುವ(ವರ್ಕ್ ಫ್ರಾಮ್ ಹೋಮ್) ಅವಧಿಯನ್ನು ಮುಂದಿನ ವರ್ಷವರೆಗೂ ವಿಸ್ತರಿಸಿದೆ.

ಮುಂದಿನ ಜನವರಿ 10ರವರೆಗೂ ಗೂಗಲ್ ಕ್ಯಾಂಪಸ್‌ಗೆ ಕಾರ್ಯ ನಿರ್ವಹಿಸಲು ಹಿಂತಿರುಗುವ ಅಗತ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಮುಖ್ಯ ಕಚೇರಿಗಳನ್ನು ಯಾವಾಗ ಪುನಾರಂಭಿಸಬೇಕು ಎಂಬುದನ್ನು ಅವರ ವಿವೇಚನೆಗೆ ಬಿಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಹೇಳಿದ್ದಾರೆ.

Video: ಮದುವೆ ಮಂಟಪದಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ಮದುಮಗ! Video: ಮದುವೆ ಮಂಟಪದಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ಮದುಮಗ!

"ಜಾಗತಿಕ ಮಟ್ಟದಲ್ಲಿ ಈಗಾಗಲೇ ಹಲವು ವಾಣಿಜ್ಯ ಕಂಪನಿಗಳು ಪುನಾರಂಭಗೊಂಡಿವೆ ಎಂಬುದನ್ನು ಹೇಳುವುದಕ್ಕೆ ಸಂತಸವಾಗುತ್ತದೆ. ಅಲ್ಲದೇ ಸ್ವಯಂಪ್ರೇರಿತರಾಗಿ ಆಗಮಿಸಿದ ಹತ್ತಾರು ಗೂಗಲ್ ಸಿಬ್ಬಂದಿಯನ್ನು ಸ್ವಾಗತಿಸುತ್ತೇವೆ. ಮುಂದಿನ ಹಾದಿಯು ನಾವು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಸುದೀರ್ಘವಾಗಿರಬಹುದು. ಆದರೂ ನಾವು ಒಟ್ಟಾಗಿ ಅದನ್ನು ಸಾಧಿಸುವ ಆಶಾವಾದವನ್ನು ಹೊಂದಿದ್ದೇವೆ." ಎಂದು ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ತಿಳಿಸಿದ್ದಾರೆ.

Google extends work from home option due to Coronavirus pandemic

ಸಿಬ್ಬಂದಿಗೆ 30 ದಿನ ಮೊದಲೇ ಸೂಚನೆ:

ಅವರು ಗೂಗಲ್ ಉದ್ಯೋಗಿಗಳು ತಮ್ಮ ಕಛೇರಿಗಳಿಗೆ ಹಿಂದಿರುಗುವ 30 ದಿನಗಳ ಮೊದಲೇ ಸೂಚನೆಯನ್ನು ನೀಡಲಾಗುವುದು. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಪುನರ್ ನಿರ್ಮಾಣದ ದಿನಗಳು ಎಂದು ಘೋಷಿಸಿದರು. ಈ ಹಂತದಲ್ಲಿ ಸಿಬ್ಬಂದಿಯು ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಪುನರ್ ಭರ್ತಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಗೂಗಲ್, ಫೇಸ್‌ಬುಕ್ ಮತ್ತು ಇತರ ತಾಂತ್ರಿಕ ವಲಯದ ದೈತ್ಯ ಸಂಸ್ಥೆಗಳು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡದಂತೆ ನಿಯಂತ್ರಿಸಲು ಕೈಜೋಡಿಸಿದವು. ಅದೇ ನಿಟ್ಟಿನಲ್ಲಿ ಇದೀಗ ಮುಖ್ಯ ಕಚೇರಿಗೆ ಸಿಬ್ಬಂದಿ ಆಗಮಿಸುವ ಅವಧಿಯನ್ನು ಮತ್ತಷ್ಟು ಕಾಲ ವಿಸ್ತರಿಸಿವೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಲ್ಲಿ ಕೊರೊನಾವೈರಸ್ ಸೋಂಕಿನ ಡೆಲ್ಟಾ ರೂಪಾಂತರವು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಟೆಕ್ ಸಂಸ್ಥೆಗಳು ಕಚೇರಿಗಳನ್ನು ಸುರಕ್ಷಿತವಾಗಿಸಲು ಲಸಿಕೆ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದವು.

English summary
Google extends work from home option due to Coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X