ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ!

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 10: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ ಪರಿಚ್ಛೇದ 370 ರದ್ದುಗೊಳಿಸಿದ ಬಳಿಕ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಮೇಲೆ ಇನ್ನಷ್ಟು ದುಃಸ್ಥಿತಿ ತಲುಪಿದೆ.

ಭಾರತದಲ್ಲಿ ಚಿನ್ನದ ದರ ಶುಕ್ರವಾರದಂದು ಬರೋಬ್ಬರಿ 38 ಸಾವಿರ ರೂಪಾಯಿಗಳ ಗಡಿ ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 38,470 ರೂಪಾಯಿ ನಂತೆ ವಹಿವಾಟು ನಡೆಸಿತ್ತು.

ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ

ಇದೇ ವೇಳೆ ಪಾಕಿಸ್ತಾನದಲ್ಲಿ ಚಿನ್ನದ ಬೆಲೆ 1,750 ರು ಏರಿಕೆ ಕಂಡು, 10 ಗ್ರಾಂ ಬೆಲೆ 86,250 ರು ಗೆ ಬಂದು ನಿಂತಿದೆ. ಭಾರತದಲ್ಲಿನ ಚಿನ್ನದ ದರ ಡಬ್ಬಲ್ ಎನ್ನಬಹುದು. ಸಾಲದ ಭಾರದಿಂದ ಕುಸಿಯುತ್ತಿರುವ ಪಾಕಿಸ್ತಾನ ಈಗಾಗಲೇ ಪೆಟ್ರೋಲ್ ದರವನ್ನು ಏರಿಕೆ ಮಾಡಿದ್ದು, 117 ರು ಪ್ರತಿ ಲೀಟರ್ ಎಂದು ನಿಗದಿಪಡಿಸಿದೆ.

ಅಮೆರಿಕಾ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬೆಳವಣಿಗೆಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಪಾಕಿಸ್ತಾನದ ಕರೆನ್ಸಿ ಕೂಡಾ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ.

ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ

ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇಮ್ರಾನ್ ಖಾನ್ ಸರ್ಕಾರ ತೆಗೆದುಕೊಂಡ ಕ್ರಮಗಳು ಫಲ ನೀಡಿಲ್ಲ. ಜೊತೆಗೆ ಭಾರತದೊಂದಿಗೆ ಇರುವ ವ್ಯಾಪಾರ, ವಹಿವಾಟು ಸಂಪರ್ಕ ಕಡಿತ, ಆಮದು, ರಫ್ತು ನಿರ್ಬಂಧ ಹೇರುವ ಮೂಲಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಭಾರತದಿಂದ ತರಕಾರಿ ಆಮದು ನಿಲ್ಲಿಸಿದ ಮೇಲೆ ಟೊಮ್ಯಾಟೋ ಬೆಲೆ 300 ರು ಆಗಿದೆ, ಪೆಟ್ರೋಲ್ ಪ್ರತಿ ಲೀಟರ್ ಗೆ 117 ರು ನಷ್ಟಿದೆ.

ಭಾರತದಲ್ಲಿ ಸರಾಸರಿ ಬೆಲೆ 38 ಸಾವಿರ ರು

ಭಾರತದಲ್ಲಿ ಸರಾಸರಿ ಬೆಲೆ 38 ಸಾವಿರ ರು

ದೆಹಲಿಯಲ್ಲಿ ಶುಕ್ರವಾರದಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರು ಏರಿಕೆ ಕಂಡು, 10 ಗ್ರಾಂಗೆ 37,700 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ 630 ರು ಏರಿಕೆಯಾಗಿದ್ದು, 1 ಕೆಜಿಗೆ 44,525 ರೂಪಾಯಿನಂತೆ ವಹಿವಾಟು ಮಾಡಿದೆ. ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಕ್ರಮವಾಗಿ 38,470 ರು ಪ್ರತಿ 10 ಗ್ರಾಂ ಹಾಗೂ 36,300 ರುನಷ್ಟಾಗಿದೆ.

ಭಾರತದಲ್ಲಿ ಬೆಳ್ಳಿ ಬೆಲೆಯೂ ಏರಿಕೆ

ಭಾರತದಲ್ಲಿ ಬೆಳ್ಳಿ ಬೆಲೆಯೂ ಏರಿಕೆ

ಬೆಳ್ಳಿ ಬೆಲೆ ಏರಿಕೆ ಕಂಡು ಪ್ರತಿ 1 ಕೆಜಿಗೆ 43,417 ರುಗೇರಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 87,000 ರು ಖರೀದಿಗೆ ಹಾಗೂ 88,000ರು ಮಾರಾಟದ ಬೆಲೆ ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಲಾಹೋರ್ ಸರಫಾ ಮಾರುಕಟ್ಟೆ ಮಾಹಿತಿಯಂತೆ ಲಿ 10 ಗ್ರಾಂಗೆ 780 ರು ನಷ್ಟಿದ್ದರೆ, 1 ತೋಲಾಗೆ 1,110 ರು ನಷ್ಟಿದೆ,

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಎಷ್ಟಿದೆ?

24ಕೆ: 72,016 ರು
24ಕೆ ತೊಲಾ: 84,000
22ಕೆ: 66015ರು

ಕರಾಚಿ, ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ, ಪೇಷಾವಾರ್, ಕ್ವೆಟ್ಟಾ, ಸಿಯಾಲ್ ಕೋಟ್ ನಲ್ಲಿ ಚಿನಿವಾರ ಪೇಟೆಗಳಲ್ಲಿ ಈ ರೀತಿ ದರಗಳಿವೆ.

ಭಾರತವಿರಲಿ, ಪಾಕಿಸ್ತಾನವಿರಲಿ ಚಿನ್ನದ ಆಮದು ದರ ಒಂದೇ ಇರುತ್ತದೆ. ಪ್ರತಿ ಔನ್ಸ್ ಲೆಕ್ಕದಲ್ಲಿ 1,497 ಯುಎಸ್ ಡಾಲರ್ ನೀಡಿ ಖರೀದಿಸಬೇಕಾಗುತ್ತದೆ, ಆದರೆ, ತಮ್ಮ ದೇಶದಲ್ಲಿ ಮಾರಾಟ ಮಾಡುವಾಗ ಅಲ್ಲಿನ ಆರ್ಥಿಕ ಪರಿಸ್ಥಿತಿ ಕರೆನ್ಸಿ ಮೌಲ್ಯಕ್ಕೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು.

English summary
Gold prices in Pakistan on August 9 surged by Rs 1,750 per 10 gms. In India, gold price for 10 gm is Rs 38,000 while in Pakistan, it has scaled to Rs 86,250 per 10 gms!.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X