ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಾದ್ಯಂತ ಕೊರೊನಾದಿಂದ ಮೃತಪಟ್ಟವರು 10 ಲಕ್ಷ: ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ

|
Google Oneindia Kannada News

ಪ್ಯಾರಿಸ್, ಸೆಪ್ಟೆಂಬರ್ 28: ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 10 ಲಕ್ಷ ದಾಟಿದೆ.

ಕೊರೊನಾ ವೈರಸ್ ವಿಶ್ವದ ಆರ್ಥಿಕತೆ, ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಸಾಮಾನ್ಯ ಜನಜೀವನ ಮೇಲೆ ಇನ್ನಿಲ್ಲದಂತ ಪರಿಣಾಮವನ್ನುಂಟುಮಾಡಿದ್ದು, ಭಾರತ, ಬ್ರೆಜಿಲ್ ಮತ್ತು ಅಮೆರಿಕಾ ದೇಶಗಳು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿವೆ.

ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಕೊರೊನಾ ಸೋಂಕಿತರು ಗುಣಮುಖ ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಕೊರೊನಾ ಸೋಂಕಿತರು ಗುಣಮುಖ

ನಿನ್ನೆಯ ಹೊತ್ತಿಗೆ ಕೊರೊನಾಗೆ ವಿಶ್ವಾದ್ಯಂತ 10 ಲಕ್ಷದ 009 ಮಂದಿ ಬಲಿಯಾಗಿದ್ದು 33 ಲಕ್ಷದ 018 ಸಾವಿರದ 877 ಮಂದಿಗೆ ಸೋಂಕು ತಗಲಿದೆ. ಅಮೆರಿಕಾದಲ್ಲಿ ಅತಿ ಹೆಚ್ಚು ಸಾವು 2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ನಂತರದ ಸ್ಥಾನಗಳಲ್ಲಿ ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಬ್ರಿಟನ್ ದೇಶಗಳಿವೆ.

ಲಾಕ್‌ಡೌನ ಸ್ಥಿತಿಗತಿ ಮುಂದುವರಿಕೆ

ಲಾಕ್‌ಡೌನ ಸ್ಥಿತಿಗತಿ ಮುಂದುವರಿಕೆ

ಕೊರೊನಾ ವೈರಸ್ ಕಾರಣದಿಂದ ಇನ್ನೂ ಕೆಲವು ಲಾಕ್ ಡೌನ್ ಸ್ಥಿತಿಗತಿ ಹಾಗೆಯೇ ಮುಂದುವರಿದಿದೆ. ಕ್ರೀಡೆ, ಮನರಂಜನೆ, ಅಂತಾರಾಷ್ಟ್ರೀಯ ಪ್ರವಾಸ ಮೈದಾನ ಅಭಿನಮಾನಿಗಳು, ಪ್ರೇಕ್ಷಕರು ಮತ್ತು ಪ್ರವಾಸಿಗರಿಗೆ ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇತ್ತೀಚೆಗೆ ಬಹುತೇಕ ಲಾಕ್ ಡೌನ್ ಸಡಿಲಿಕೆಯಾಗಿರುವುದರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ.

ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ

ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ

ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಮೆರಿಕ, ಬ್ರೆಜಿಲ್, ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಗುಣಮುಖ

ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಗುಣಮುಖ

ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.ನಿತ್ಯ 90,000ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗುತ್ತಿದ್ದು, ಸಕ್ರಿಯ ಪ್ರಕರಣಗಳಿಗಿಂತಲೂ ಚೇತರಿಕೆ ಪ್ರಮಾಣ 5 ಪಟ್ಟು ಹೆಚ್ಚಾಗಿದೆ. ವೈದ್ಯಕೀಯ ಮೂಲಸೌಕರ್ಯಗಳು ಹೆಚ್ಚಾಗಿರುವುದು, ತ್ವರಿತಗತಿ ಚಿಕಿತ್ಸೆ ವೈದ್ಯರು, ಅರೆವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಸಮರ್ಪಣೆ ಹಾಗೂ ಬದ್ಧತೆಗಳಿಂದಾಗಿ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದೆ.

ಭಾರತದಲ್ಲಿ ಇಂದು 82,170 ಕೊರೊನಾ ಸೋಂಕಿತರು ಪತ್ತೆ

ಭಾರತದಲ್ಲಿ ಇಂದು 82,170 ಕೊರೊನಾ ಸೋಂಕಿತರು ಪತ್ತೆ

ಭಾರತದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ವೇಗವಾಗಿ ಏರಿಕೆ ಕಾಣುತ್ತಿದ್ದು ಕಳೆದ 24 ಗಂಟೆಗಳಲ್ಲಿ 82,170 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಜೊತೆಗೆ 1,039 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು 60 ಲಕ್ಷ ದಾಟಿದೆ.

Recommended Video

UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada

English summary
The global death toll from COVID-19 has surpassed one million-mark. The United States of America has the highest fatalities count with more than 200,000 deaths followed by Brazil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X