ಡೆಲ್ಟಾ ರೂಪಾಂತರ ಪ್ರೇರಣೆ; ವಿಶ್ವಾದ್ಯಂತ 50 ಲಕ್ಷ ಮೀರಿದ ಮರಣ ಸಂಖ್ಯೆ

ನ್ಯೂಯಾರ್ಕ್, ಅಕ್ಟೋಬರ್ 03: ಕೊರೊನಾ ಸೋಂಕಿನಿಂದ ವಿಶ್ವದಾದ್ಯಂತ ಸಾವನ್ನಪ್ಪಿರುವವರ ಸಂಖ್ಯೆ ಐದು ದಶಲಕ್ಷ ಮೀರಿದೆ. ಡೆಲ್ಟಾ ರೂಪಾಂತರ, ಸಾವಿನ ಸಂಖ್ಯೆಯಲ್ಲಿನ ಏರಿಕೆಗೆ ಪ್ರೇರಣೆಯಾಗಿದೆ. ಮುಖ್ಯವಾಗಿ ಲಸಿಕೆ ಹಾಕದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ರಾಯಿಟರ್ಸ್‌ ವಿಶ್ಲೇಷಣೆ ತಿಳಿಸಿದೆ.

ಶ್ರೀಮಂತ ಹಾಗೂ ಬಡ ರಾಷ್ಟ್ರಗಳ ನಡುವಿನ ಲಸಿಕಾ ದರದಲ್ಲಿ ಕೂಡ ಅಸಮಾನತೆ ಕಂಡುಬಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಲಸಿಕೆ ಕುರಿತು ಹಿಂಜರಿಕೆ ಉಳಿದಿದೆ. ಇಡೀ ವಿಶ್ವದಲ್ಲಿ ಅರ್ಧದಷ್ಟು ಜನಸಂಖ್ಯೆ ಇನ್ನೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನೂ ಪಡೆದಿಲ್ಲ ಎಂದು ಅವರ್ ವರ್ಲ್ಡ್ ಡಾಟಾ ಮಾಹಿತಿ ನೀಡಿದೆ.

ರಾಯಿಟರ್ಸ್‌ ವಿಶ್ಲೇಷಣೆ ಪ್ರಕಾರ, ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಒಂದು ವರ್ಷದಲ್ಲಿ 2.5 ಮಿಲಿಯನ್ ಆಗಿದೆ. ನಂತರದ 236 ದಿನಗಳಲ್ಲಿ 2.5 ಮಿಲಿಯನ್ ಜನರು ಸೋಂಕಿಗೆ ಬಲಿಯಾಗಿದ್ದಾರೆ. ಏಳು ದಿನಗಳ ಸರಾಸರಿಯಲ್ಲಿ ವರದಿಯಾದ ಎಲ್ಲಾ ಜಾಗತಿಕ ಮಟ್ಟದ ಮರಣ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳು ಅಮೆರಿಕ, ರಷ್ಯಾ, ಬ್ರೆಜಿಲ್, ಮೆಕ್ಸಿಕೊ ಹಾಗೂ ಭಾರತದಲ್ಲಿ ಸಂಭವಿಸಿವೆ.

Global Coronavirus Deaths Hit 50 Lakhs

ಜಾಗತಿಕವಾಗಿ ಕಳೆದ ವಾರದಲ್ಲಿ ಪ್ರತಿದಿನ ಸರಾಸರಿ 8000 ಸಾವುಗಳು ವರದಿಯಾಗುತ್ತಿದ್ದು, ಪ್ರತಿ ನಿಮಿಷಕ್ಕೆ ಐದು ಸಾವುಗಳು ಸಂಭವಿಸುತ್ತಿವೆ.

ಮರಣ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಜಾಗತಿಕವಾಗಿ ಲಸಿಕೆ ನೀಡಿಕೆಗೆ ವೇಗ ನೀಡಲಾಗಿದೆ. ಅಮೆರಿಕ ಸೇರಿದಂತೆ ಕೆಲವು ಶ್ರೀಮಂತ ದೇಶಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್, ಅಂದರೆ ಮೂರನೇ ಡೋಸ್ ನೀಡಲು ಆರಂಭಿಸಲಾಗಿದೆ. ಹೀಗಾಗಿ ಸದ್ಯ ಕೇವಲ ಒಂದು ಡೋಸ್ ಲಸಿಕೆಯನ್ನೂ ನೀಡಲು ಸಾಧ್ಯವಾಗಿರದ ಬಡರಾಷ್ಟ್ರಗಳಿಗೆ ಕೊರೊನಾ ಲಸಿಕೆಗಳನ್ನು ಪೂರೈಸುವಲ್ಲಿ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಕಡಿಮೆ ಮಟ್ಟದ ಲಸಿಕಾ ವ್ಯಾಪ್ತಿಯನ್ನು ಹೊಂದಿರುವ ದೇಶಗಳಿಗೆ ಮಾತ್ರ ಕೋವ್ಯಾಕ್ಸ್‌ ಜಾಗತಿಕ ಲಸಿಕಾ ಕಾರ್ಯಕ್ರಮದಡಿ ಕೊರೊನಾ ಲಸಿಕೆ ವಿತರಣೆ ಮಾಡುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿ 140ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಜನವರಿಯಿಂದಲೂ ವಿತರಣೆ ಮಾಡುತ್ತಿದೆ.

Global Coronavirus Deaths Hit 50 Lakhs

'ಅಕ್ಟೋಬರ್ ತಿಂಗಳ ಲಸಿಕಾ ಪೂರೈಕೆಗಾಗಿ ನಾವು ವಿಭಿನ್ನ ವಿಧಾನವನ್ನು ಯೋಜಿಸಿದ್ದೇವೆ. ಕಡಿಮೆ ಲಸಿಕೆ ಪೂರೈಕೆಯಾಗಿರುವ ದೇಶಗಳನ್ನು ಮಾತ್ರ ನಾವು ಈಗ ಒಳಗೊಳ್ಳಲಿದ್ದೇವೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹಾಯಕ ಮಹಾನಿರ್ದೇಶಕ ತಿಳಿಸಿದ್ದಾರೆ.

ಅಮೆರಿಕದಲ್ಲಿ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಲಸಿಕೆ ಪಡೆದಿಲ್ಲ. ಶುಕ್ರವಾರದ ಹೊತ್ತಿಗೆ ಅಮೆರಿಕದಲ್ಲಿ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 7,00,000 ಮೀರಿದೆ. ಶ್ರೀಮಂತ ರಾಷ್ಟ್ರವಾಗಿ, ಕೊರೊನಾ ಲಸಿಕೆಯನ್ನು ವ್ಯಾಪಕವಾಗಿ ನೀಡುತ್ತಿದ್ದರೂ ಸೋಂಕು ನಿಯಂತ್ರಣ ಕಷ್ಟವಾಗಿದೆ.

ರಷ್ಯಾ ಅಕ್ಟೋಬರ್ ಮೊದಲಲ್ಲಿ 887 ಕೊರೊನಾ ಸಂಬಂಧಿ ಸಾವುಗಳನ್ನು ವರದಿ ಮಾಡಿದೆ. ಸಾಂಕ್ರಾಮಿಕ ಪ್ರಾರಂಭವಾದ ನಂತರ ದಾಖಲಾದ ಅತಿ ದೊಡ್ಡ ಏಕದಿನ ಸಾವಿನ ಸಂಖ್ಯೆ ಇದಾಗಿದ್ದು, ಸತತ ನಾಲ್ಕನೇ ದಿನ ಈ ದಾಖಲೆ ಸ್ಥಾಪಿಸಿದೆ. ರಷ್ಯಾದ ಅರ್ಹ ಜನಸಂಖ್ಯೆಯ ಕೇವಲ 33% ಮೊದಲ ಡೋಸ್ ಲಸಿಕೆ ಪಡೆದಿದೆ.

ದಕ್ಷಿಣ ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ವರದಿ ಮಾಡಿದೆ. 21% ಮರಣ ಪ್ರಮಾಣ ದಕ್ಷಿಣ ಅಮೆರಿಕದ್ದಾಗಿದೆ. ಇದರ ನಂತರ ಉತ್ತರ ಅಮೆರಿಕ ಅಥವಾ ಪೂರ್ವ ಯುರೋಪ್‌ನಲ್ಲಿ ಮರಣ ಪ್ರಮಾಣ 14% ಆಗಿದೆ ಎಂದು ರಾಯಿಟರ್ಸ್‌ ವಿಶ್ಲೇಷಣೆ ಮಾಡಿದೆ.

ಡೆಲ್ಟಾ ರೂಪಾಂತರದ ಪ್ರಭಾವಕ್ಕೆ ಒಳಗಾದ ದೇಶಗಳಲ್ಲಿ ಭಾರತ ಮೊದಲಿನದಾಗಿದೆ. ದೇಶದಲ್ಲಿ ಲಸಿಕಾ ವೇಗವನ್ನು ಚುರುಕುಗೊಳಿಸಲಾಗಿದೆ. ಭಾರತದ ಅರ್ಹ ಜನಸಂಖ್ಯೆ 47%ನಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ. ಕಳೆದ ಒಂದು ವಾರದಿಂದ ದಿನಕ್ಕೆ 7896950 ಡೋಸ್‌ ಲಸಿಕೆಯನ್ನು ನೀಡಲಾಗುತ್ತಿದೆ.

ಡೆಲ್ಟಾ ರೂಪಾಂತರ ಈ ಸಾವಿನ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಜಗತ್ತಿನಾದ್ಯಂತ ಈ ರೂಪಾಂತರ ಪ್ರಬಲವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ 194 ಸದಸ್ಯ ರಾಷ್ಟ್ರಗಳಲ್ಲಿ 187 ದೇಶಗಳನ್ನು ಡೆಲ್ಟಾ ವ್ಯಾಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+