• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ದಾಖಲೆ: ಜರ್ಮನಿಯಲ್ಲಿ ಒಂದೇ ದಿನ 50,196 ಮಂದಿಗೆ ಕೊವಿಡ್-19

|
Google Oneindia Kannada News

ಜರ್ಮನಿ, ನವೆಂಬರ್ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ರೂಪಾಂತರ ಅಲೆಗಳಿಂದ ದೊಡ್ಡ ದೊಡ್ಡ ರಾಷ್ಟ್ರಗಳೇ ನಲುಗುವಂತಾ ಸ್ಥಿತಿ ನಿರ್ಮಾಣವಾಗುತ್ತಿದೆ. ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲೇ ಕೊವಿಡ್-19 ಮತ್ತೊಂದು ಹೊಸ ದಾಖಲೆ ಬರೆದಿದೆ.

ಜರ್ಮನಿಯಲ್ಲಿ ಒಂದೇ ದಿನ 50,196 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆ ಮೂಲಕ ನಿರಂತರವಾಗಿ ನಾಲ್ಕನೇ ದಿನವೂ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

 ಕೋವಿಡ್ ಲಸಿಕೆ ಬಗ್ಗೆ ಜರ್ಮನಿಗರ ಆತಂಕ: ಅಡ್ಡಪರಿಣಾಮದ ಬಗ್ಗೆ Fact-Check ಕೋವಿಡ್ ಲಸಿಕೆ ಬಗ್ಗೆ ಜರ್ಮನಿಗರ ಆತಂಕ: ಅಡ್ಡಪರಿಣಾಮದ ಬಗ್ಗೆ Fact-Check

ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 4,887,922ಕ್ಕೆ ಏರಿಕೆಯಾಗಿದ್ದು, ಈವರೆಗೂ 97,638 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ 4,432,600 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಅಥಾರಿಟಿ ತಿಳಿಸಿದೆ.

ಒಂದು ಲಕ್ಷದಲ್ಲಿ 249 ಮಂದಿಗೆ ಸೋಂಕು:

ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಅಥಾರಿಟಿ ಪ್ರಕಾರ, ಜರ್ಮನಿಯಲ್ಲಿ 1,00,000 ಜನಸಂಖ್ಯೆಯಲ್ಲಿ ಪ್ರತಿ 249 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಕಳೆದ ವಾರದ ಹಿಂದೆ ಈ ಸಂಖ್ಯೆ 239ರಷ್ಟಿತ್ತು. ಆದರೆ ಏಳು ದಿನಗಳಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆಯ ಹೊರತಾಗಿಯೂ, ಡಿಸೆಂಬರ್ ಆರಂಭದ ವೇಳೆಗೆ ಜರ್ಮನಿಯ ಸರ್ಕಾರವು ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ವಿಸ್ತರಣೆ ಮಾಡದಿರಲು ಒಪ್ಪಿಕೊಂಡಿದ್ದವು. ಆದರೆ ಪರಿಸ್ಥಿತಿ ಬದಲಾದ ಹಿನ್ನೆಲೆ ಸೋಮವಾರ ಕರಡು ಕಾನೂನನ್ನು ಮಂಡಿಸಲಾಗಿದೆ. ಆ ಪ್ರಕಾರ, ಮಾಸ್ಕ್ ಅನ್ನು ಧರಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮುಂದಿನ ಮಾರ್ಚ್‌ವರೆಗೆ ಈ ನಿಯಮಗಳು ಜಾರಿಗೊಳಿಸುವುದನ್ನು ಮುಂದುವರಿಸಲು ಕಾನೂನು ತಿದ್ದುಪಡಿ ಮಾಡಲಾಗಿದೆ.

ಜಗತ್ತಿನಲ್ಲಿ ಕೊವಿಡ್-19 ಅಪಾಯ:

ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ದೊಡ್ಡ ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿನ ಅಪಾಯ ಹೆಚ್ಚಾಗಿ ಕಾಣಿಸಿಕೊಂಡಿದೆ. ಅಮೆರಿಕಾ, ಇಂಗ್ಲೆಂಡ್, ರಷ್ಯಾ, ಬ್ರೆಜಿಲ್, ಫ್ರಾನ್ಸ್ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪ್ರತಿನಿತ್ಯ ಹೊಸ ದಾಖಲೆಗಳನ್ನು ಬರೆಯುತ್ತಿವೆ.

ಜಗತ್ತಿನಲ್ಲಿ ಕಳೆದ 24 ಗಂಟೆಗಳಲ್ಲೇ 5,52,047 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 8,334 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ವಿಶ್ವದಲ್ಲಿ ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 25,21,21,721ಕ್ಕೆ ಏರಿಕೆಯಾಗಿದ್ದು, 50,88,328 ಮಂದಿ ಸೋಂಕಿನಿಂದ ಉಸಿರು ಚೆಲ್ಲಿದ್ದಾರೆ. ಇದರ ಹೊರತಾಗಿ 2,28,85,412 ಸೋಂಕಿತರು ಗುಣಮುಖರಾಗಿದ್ದಾರೆ.

English summary
Germany reports another Coronavirus Record: 50,196 New cases in Last 24 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion