ಜರ್ಮನಿ: ರೋಗಿಗಳ ಪ್ರಾಣ ಹರಣ ಮಾಡುತ್ತಿದ್ದ ಶುಶ್ರೂಷಕನಿಗೆ ಜೈಲು

Posted By:
Subscribe to Oneindia Kannada

ಬರ್ಲಿನ್ (ಜರ್ಮನಿ), ಆಗಸ್ಟ್ 29: ತನ್ನ ಸೇವಾವಧಿಯಲ್ಲಿ ತನ್ನ ಉಸ್ತುವಾರಿಯಲ್ಲಿದ್ದ 90 ರೋಗಿಗಳ ಪ್ರಾಣಹರಣಕ್ಕೆ ಕಾರಣವಾಗಲು ಕಾರಣವಾಗಿದ್ದ ನೀಲ್ಸ್ ಹೋಜೆಲ್ ಎಂಬ 40 ವರ್ಷ ವಯಸ್ಸಿನ ಶುಶ್ರೂಷಕನೊಬ್ಬನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಜರ್ಮನಿಯ ನೈಟ್ ಕ್ಲಬ್ ನಲ್ಲಿ ಶೂಟೌಟ್, ಇಬ್ಬರು ಸ್ಥಳದಲ್ಲೇ ಸಾವು

1999ರಿಂದ 2005ರವರೆಗಿನ ಅವಧಿಯಲ್ಲಿ ಎರಡು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಈತ ತನಗೆ ನೋಡಿಕೊಳ್ಳಲು ವಹಿಸಲಾಗಿದ್ದ ರೋಗಿಗಳಿಗೆ ಅತಿಯಾದ ಔಷಧ ನೀಡುವಿಕೆ (ಓವರ್ ಡೋಸ್), ಬೇಜವಾಬ್ದಾರಿಯ ಶುಶ್ರೂಷೆ ಅಥವಾ ರೋಗಿಗಳ ಮೇಲೆ ಹಲ್ಲೆಯಂಥ ಕುಕೃತ್ಯಗಳನ್ನು ಮಾಡುವ ಮೂಲಕ ಅವರ ಸಾವಿಗೆ ಕಾರಣವಾಗಿದ್ದಾನೆಂದು ಈತನ ಮೇಲೆ ಆರೋಪಗಳಿದ್ದವು. ಅದರ ಆಧಾರದ ಮೇಲೆ 2015ರಲ್ಲಿ ಆತನ ಬಂಧನವಾಗಿತ್ತು.

German nurse killed at least 90 patients with lethal drug overdoses

ಈತನ ವಿರುದ್ಧ ನಾಲ್ಕು ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಉತ್ತರ ಬ್ರೆಮೆನ್ ನಗರದಲ್ಲಿರುವ ಡೆಲ್ಮೆನ್ ಹೋರ್ಸ್ಟ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಈ ಇಬ್ಬರು ರೋಗಿಗಳು ಸಾವನ್ನಪ್ಪಿದ್ದರು. ಇದೀಗ ಆ ಪ್ರಕರಣಗಳಿಗೆ ಶಿಕ್ಷೆ ಪ್ರಕಟವಾಗಿದೆ.

ಆತ ಹತ್ಯೆಗೈಯುವ ಮುನ್ನ ಕೂಗಿದ್ದು 'ಅಲ್ಲಾಹು ಅಕ್ಬರ್'!

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಪ್ರಕಾರ, 1999ರಿಂದ 2005ರ ಅವಧಿಯಲ್ಲಿ ಹೋಜೆಲ್, ಎರಡು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದಾನೆ. ಈ ಸೇವಾವಧಿಯಲ್ಲಿ ಈತನ ಸುಪರ್ದಿಯಲ್ಲಿದ್ದ ಸುಮಾರು 130ಕ್ಕೂ ಹೆಚ್ಚು ರೋಗಿಗಳು ಪ್ರಾಣ ತೆತ್ತಿದ್ದಾರೆ. ಆ ಎಲ್ಲಾ ಮೃತ ವ್ಯಕ್ತಿಗಳ ದೇಹವನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಶುಶ್ರೂಷಕರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ದುರದೃಷ್ಟವಶಾತ್ ಈತ ಕೆಲಸ ಮಾಡಿರುವ ಎರಡೂ ಆಸ್ಪತ್ರೆಗಳಲ್ಲಿ ಈತನನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಸೇವೆಗೆ ನಿಯೋಜಿಸಲಾಗುತ್ತಿತ್ತು. ಮೊದಲಿನಿಂದಲೂ ಕೆಲಸದಲ್ಲಿ ಮೈಗಳ್ಳನಾಗಿದ್ದ ಈತ ತನ್ನ ಬೇಜವಾಬ್ದಾರಿತನದಿಂದ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿದ್ದ ರೋಗಿಗಳ ಪಾಲಿಗೆ ಈ ಶುಶ್ರೂಷಕನೇ ಯಮನಾಗುತ್ತಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A male nurse jailed for life two years ago, for killing two hospital patients with lethal drug overdoses, murdered at least 90 patients in total and possibly twice as many, police said on Monday, calling it post-war Germany’s worst killing spree.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ