ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಜಾವೇದ್ ಬಜ್ವಾ ನೇಮಕ

Posted By:
Subscribe to Oneindia Kannada

ಇಸ್ಲಾಮಾಬಾದ್, ನವೆಂಬರ್, 27: ಪಾಕಿಸ್ತಾನ ಸೇನೆ ಹಾಲಿ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಸೇವಾವಧಿ ಮಂಗಳವಾರ (ನ.29)ಕ್ಕೆ ಕೊನೆಗೊಳ್ಳುವುದರಿಂದ ಆ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಖಮರ್ ಜಾವೇದ್ ಬಜ್ವಾ ಅವರನ್ನು ನೇಮಕ ಮಾಡಲಾಗಿದೆ.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಬಜ್ವಾ ಅವರಿಗೆ ಜನರಲ್ ಹುದ್ದೆಗೆ ಬಡ್ತಿ ನೀಡಿ ಸೇನಾ ಮುಖ್ಯಸ್ಥರ ಹುದ್ದೆಗೆ ನೇಮಿಸಿ ಶನಿವಾರ ಆದೇಶ ಹೊರಡಿಸಿದರು.

General Qamar Javed Bajwa appointed as Pakistan Army chief

ವಿಶ್ವದ 6ನೇ ಅತಿದೊಡ್ಡ ಸೇನೆಯಾಗಿರುವ ಪಾಕಿಸ್ತಾನದ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಜಾವೇದ್ ಬಜ್ವಾ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಡಿ ನಿಯಂತ್ರಣ ರೇಖೆ ಸಮಸ್ಯೆ ನಿಭಾಯಿಸುವ ಕುರಿತು ಹೆಚ್ಚು ಜ್ಞಾನ ಹೊಂದಿದ್ದಾರೆ.

ಹಿರಿತನದ ಆಧಾರದಲ್ಲಿ ಬಜ್ವಾ ಅವರನ್ನು ಸೇನಾ ಮುಖ್ಯಸ್ಥರ ಹುದ್ದೆಗೆ ನೇಮಕಮಾಡಲಾಗಿದೆ. ಸೇವಾವಧಿ ವಿಸ್ತರಣೆ ಕೋರುವುದಿಲ್ಲ ಎಂದು ಕಳೆದ ಜನವರಿಯಲ್ಲೇ ಜನರಲ್ ರಹೀಲ್ ಷರೀಫ್ ಅವರು ಘೋಷಿಸಿದ್ದರು.

ಭಯೋತ್ಪಾದನೆ ವಿರುದ್ಧ ಹೋರಾಡಲು ರಹೀಲ್ ಅವರು ಇನ್ನಷ್ಟು ದಿನ ಸೇನಾ ಮುಖ್ಯಸ್ಥರಾಗಿ ಮುಂದುವರಿಯಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾದರೂ ಅವರ ಸೇವಾವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಬಜ್ವಾ ಅವರು ಗಡಿನಿಯಂತ್ರಣ ರೇಖೆಯ ಜವಾಬ್ದಾರಿ ಹೊತ್ತಿರುವ ಸೇನೆಯ 10 ಕಾರ್ಪ್ ಕಮಾಂಡರ್ ಆಗಿಯೂ ಕೆಲಸ ನಿರ್ವಹಿಸಿದ್ದರು ಪ್ರಸ್ತುತ ಅವರು ತರಬೇತಿ ಮತ್ತು ಮೌಲ್ಯಮಾಪನ ವಿಭಾಗದ ಇನ್ಸ್ ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮಂಗಳವಾರದಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lt Gen Qamar Javed Bajwa, who has extensive experience of handling affairs in PoK and the northern areas, was on Saturday appointed as Pakistan’s new army chief to succeed Gen Raheel Sharif.
Please Wait while comments are loading...