Gaza Peace: ಗಾಜಾ ಶಾಂತಿ ಮಾತುಕತೆ ಜೊತೆಗೇ ನಿಲ್ಲದ ಕಾರ್ಯಾಚರಣೆ, ವಾಯುದಾಳಿಗೆ 27 ಬಲಿ?

ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ರಣಭೀಕರ ಯುದ್ಧವನ್ನು ನಿಲ್ಲಿಸಬೇಕು ಎಂಬುದು ಇಡೀ ಜಗತ್ತಿನ ಆಸೆ. ಇದೇ ಕಾರಣಕ್ಕೆ ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಲು ಏನು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿವೆ ಜಗತ್ತಿನ ಶಕ್ತಿಶಾಲಿ ದೇಶಗಳು. ಆದರೂ ಈ ಯುದ್ಧ ನಿಲ್ಲಿಸುವುದು ಅಷ್ಟು ಸುಲಭದ ವಿಚಾರವಲ್ಲ, ಏಕೆಂದರೆ ಒಂದು ಕಡೆ ಯುದ್ಧ ನಿಲ್ಲಿಸಿ ಇನ್ನೇನು ಎಲ್ಲಾ ತಣ್ಣಗಾಯ್ತು ಅನ್ನುವಷ್ಟರಲ್ಲಿ ಮತ್ತೆ ಬಡಿದಾಟ ಜೋರಾಗುತ್ತಿದೆ. ಹೀಗಿದ್ದಾಗ, ಗಾಜಾ ಶಾಂತಿ ಮಾತುಕತೆ ಜೊತೆಗೇ ಕಾರ್ಯಾಚರಣೆ ಕೂಡ ಮುಂದುವರಿದು ವಾಯುದಾಳಿಗೆ 27 ಜನ ಬಲಿಯಾಗಿರುವ ಆರೋಪ ಕೇಳಿಬಂದಿದೆ.

ಗಾಜಾ ಪಟ್ಟಿಯಲ್ಲಿ ಈಗ ಥೇಟ್ ನಗರಕದ ದೃಶ್ಯ ನೋಡಬಹುದು, ಏಕೆಂದರೆ ಹಮಾಸ್ ಮಾಡಿದ ತಪ್ಪಿಗೆ ಇದೀಗ ಇಡೀ ಗಾಜಾ ಪಟ್ಟಿ ನಗರವೇ ಕುಸಿದು ಹೋಗಿದೆ. ಅರ್ಧ ಲಕ್ಷಕ್ಕೂ ಹೆಚ್ಚು ದೊಡ್ಡ ದೊಡ್ಡ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಇಸ್ರೇಲ್ ನಡೆಸಿರುವ ವಾಯುದಾಳಿ ಅಬ್ಬರಕ್ಕೆ ಇಡೀ ಗಾಜಾ ಪಟ್ಟಿ ಅಲ್ಲಾಡಿ ಹೋಗಿದೆ. ಭವಿಷ್ಯದಲ್ಲಿ ಗಾಜಾ ಪಟ್ಟಿ ಏನಾಗುತ್ತದೋ ಎಂಬುದೇ ಮಧ್ಯಪ್ರಾಚ್ಯ ದೇಶಗಳಿಗೆ ಟೆನ್ಷನ್ ತರಿಸಿದೆ. ಇಂತಹ ಸಮಯದಲ್ಲಿ ಇಂದು ಮತ್ತೆ ವಾಯುದಾಳಿ ನಡೆದಿರುವ ಆರೋಪ ಮಾಡಲಾಗಿದೆ.

Gaza Peace

ಗಾಜಾ ಪಟ್ಟಿಯಲ್ಲಿ ಮತ್ತಷ್ಟು ಸಾವು

ಇಸ್ರೇಲ್ ಸೇನೆ ಮತ್ತೆ ಹಮಾಸ್ ಬಂಡುಕೋರರನ್ನು ಟಾರ್ಗೆಟ್ ಮಾಡಿ ದಾಳಿ ಆರಂಭ ಮಾಡಿದೆ. ಹೀಗಾಗಿ ಗಾಜಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವ ಆರೊಪ ಕೇಳಿಬಂದಿದೆ. ಹೀಗೆ ಇದ್ದಾಗ ಕಳೆದ ಕೆಲವು ದಿನಗಳಲ್ಲೇ ಅತ್ಯಂತ ಭೀಕರ ದಾಳಿಯನ್ನು ಇದೀಗ ಇಸ್ರೇಲ್ ನಡೆಸಿದ್ದು, ಈ ದಾಳಿಯಲ್ಲಿ ಗಾಜಾ ಪಟ್ಟಿಯ 27 ಜನರು ಬಲಿಯಾಗಿರುವ ಆರೋಪ ಮಾಡಲಾಗಿದೆ.

ಈ ಬಗ್ಗೆ ಗಾಜಾ ಆರೋಗ್ಯ ಅಧಿಕಾರಿಗಳು ಆರೋಪವನ್ನು ಮಾಡಿದ್ದು ಪೊಲೀಸ್ ಠಾಣೆ, ಮನೆ & ಟೆಂಟ್‌ಗಳ ಮೇಲೆ ಕೂಡ ದಾಳಿ ನಡೆದಿದೆ ಎಂದಿದ್ದಾರೆ. ಕದನ ವಿರಾಮ ಒಪ್ಪಂದ ಮಾಡಿಕೊಂಡ್ರೂ ಪದೇ ಪದೇ ಈ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಆಗುತ್ತಾ, ಹಿಂಸಾಚಾರ ನಡೆಯುತ್ತಲೇ ಇದೆ ಎಂಬುದು ಜಗತ್ತಿಗೇ ಬೇಸರ ತರಿಸಿದೆ. ಅಲ್ಲದೆ ಈ ಯುದ್ಧ ಶುರುವಾದ ನಂತರ ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿದೆ.

ಯುದ್ಧ ಶುರುವಾಗಿದ್ದು ಯಾವಾಗ?

ಅಕ್ಟೋಬರ್ 7, 2023 ಶನಿವಾರ ಈ ಯುದ್ಧ ಶುರುವಾಗಿತ್ತು, ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಯುದ್ಧ ಆರಂಭ ಆಗಿತ್ತು. ತಕ್ಷಣವೇ ದಾಳಿ ಆರಂಭಿಸಿದ್ದ ಇಸ್ರೇಲ್ ಇಡೀ ಗಾಜಾ ಪಟ್ಟಿಯನ್ನು ಪುಡಿ ಪುಡಿ ಮಾಡಿದೆ. ಅದರಲ್ಲೂ ಹಮಾಸ್ ಸಂಘಟನೆಯ ದೊಡ್ಡ ದೊಡ್ಡ ನಾಯಕರನ್ನ ಕೂಡ ಇಸ್ರೇಲ್ ಸೇನೆ ತನ್ನ ಕಾರ್ಯಾಚರಣೆಯಲ್ಲಿ ಇನ್ನಿಲ್ಲ ಎನಿಸಿದೆ. ಆದರೆ ಈಗಲಾದರೂ ಯುದ್ಧ ಮತ್ತು ಹಿಂಸಾಚಾರ ನಿಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಇರುವ ಸಮಯಕ್ಕೆ ಸರಿಯಾಗಿ, ಮತ್ತೆ ವೈಮಾನಿಕ ದಾಳಿಗಳು ಆರಂಭ ಆಗಿರುವುದು ಸಹಜವಾಗಿ ಜನರ ಚಿಂತೆಯನ್ನು ಹೆಚ್ಚಿಸಿದೆ.

ಶಾಂತಿ ಮಂಡಳಿ ರಚಿಸಿರುವ ಅಮೆರಿಕ

ಗಾಜಾ ಪಟ್ಟಿಯಲ್ಲಿ ಭೀಕರ ಕದನ ನಡೆದು, ಇಡೀ ಗಾಜಾ ಪಟ್ಟಿಯೇ ಹಾಳಾಗಿ ಹೋಗಿದೆ. ಹಮಾಸ್ ಮಾಡಿದ ಕೃತ್ಯಕ್ಕೆ ಇಸ್ರೇಲ್ ನುಗ್ಗಿ ಬಂದು ಯುದ್ಧ ಮಾಡಿ ಇಡೀ ಗಾಜಾ ಪಟ್ಟಿಯನ್ನೇ ಧ್ವಂಸ ಮಾಡಿ ಹಾಕಿದೆ ಎಂದು ಪಾಶ್ಚಿಮಾತ್ಯ ದೇಶಗಳು ಹೇಳುತ್ತಿವೆ. ಆದ್ರೆ ಇಸ್ರೇಲ್ ಮಾಡಿದ್ದು ತಪ್ಪು ಎಂದು ಅತ್ತ ಪಾಶ್ಚಿಮಾತ್ಯ ದೇಶಗಳ ಎದುರಾಳಿ ದೇಶಗಳು ಆರೋಪ ಮಾಡಿವೆ. ಅದೆಲ್ಲಾ ಏನೇ ಇರಲಿ, ಆದರೆ ಗಾಜಾ ಮಾತ್ರ ಹತ್ತಾರು ವರ್ಷಗಳ ಕಾಲ ಮತ್ತೆ ಸರಿ ಹೋಗದ ಪರಿಸ್ಥಿತಿಗೆ ಬಂದು ತಲುಪಿದೆ. ಇಂತಹ ವೇಳೆ ಗಾಜಾ ನೆಲದಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕ ಅಧ್ಯಕ್ಷರ ನೇತೃತ್ವದ ಗಾಜಾ ಶಾಂತಿ ಮಂಡಳಿಯ ರಚನೆ ಆಗಿದೆ. ಶೀಘ್ರದಲ್ಲೇ ಈ ಮಂಡಳಿ ಮೂಲಕ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+