ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀಜಿ ಮರಿಮೊಮ್ಮಗಳ ಮೇಲೆ ವಂಚನೆ ಆರೋಪ

By Mahesh
|
Google Oneindia Kannada News

ಜೊಹಾನ್ಸ್‌ಬರ್ಗ್, ಅ.21: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗಳು ಆಶಿಷ್ ಲತಾ ರಾಮ್‌ಗೋಬಿನ್ (45) ಅವರ ಮೇಲೆ ಭಾರಿ ವಂಚನೆ ಆರೋಪ ಕೇಳಿ ಬಂದಿದೆ. ದಕ್ಷಿಣ ಆಫ್ರಿಕದಲ್ಲಿ ಇಬ್ಬರು ಉದ್ಯಮಿಗಳಿಗೆ ಸುಮಾರು 8.30 ಲಕ್ಷ ಡಾಲರ್‌ಗಳಿಗೂ ಅಧಿಕ ಮೊತ್ತದ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.

ಗಾಂಧೀಜಿಯವರ ಮೊಮ್ಮಗಳಾದ ಆಶಿಷ್ ಲತಾ ರಾಮ್‌ಗೋಬಿನ್ ಡರ್ಬನ್ನಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರಾಗಿ ಈ ಸಂಬಂಧ ಹೇಳಿಕೆ ದಾಖಲಿಸಿದ್ದಾರೆ. ಕಳವು, ವಂಚನೆ ಹಾಗೂ ಫೋರ್ಜರಿ ಕುರಿತಾದ ಆರೋಪಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

Gandhi's great-granddaughter facing fraud charge

ದಕ್ಷಿಣ ಆಫ್ರಿಕದಲ್ಲಿ ಸ್ವಂತ ಉದ್ಯೋಗಿಯಾಗಿರುವ ರಾಮ್‌ಗೋಬಿನ್, ನೆಟ್‌ಕೇರ್ ಸಮೂಹದ ಖಾಸಗಿ ಆಸ್ಪತ್ರೆಗಾಗಿ ಭಾರತದಿಂದ ಬೆಡ್ಡಿಂಗ್ ಆಮದಿಗೆ ತಾನು ಟೆಂಡರ್ ಪಡೆದುಕೊಂಡಿರುವುದಾಗಿ ಹೇಳಿಕೊಂಡು ಇಬ್ಬರು ಉದ್ಯಮಿಗಳಿಗೆ 8,31,380 ಡಾಲರ್ (1.10 ಕೋಟಿ ರಾಂಡ್) ವಂಚಿಸಿದ್ದಾರೆ.

ಭಾರತದಿಂದ ಕಂಟೈನರ್ ಲಿನನ್(linen) ರವಾನಿಸಲಾಗಿದೆ ಎಂದು ಹೂಡಿಕೆದಾರರನ್ನು ನಂಬಿಸಲು ರಾಮ್‌ಗೋಬಿನ್ ನಕಲಿ ಇನ್‌ವಾಯ್ಸ್ ಹಾಗೂ ಆಮದು ದಾಖಲೆ ಪತ್ರಗಳನ್ನು ಒದಗಿಸಿದ್ದಾರೆ. ಅದರೆ, ಎಲ್ಲವೂ ನಕಲಿಯಾಗಿದೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ ಎಂದು ಉನ್ನತ ಮಟ್ಟದ ವಂಚನೆ ಪ್ರಕರಣಗಳನ್ನು ಪತ್ತೆ ಮಾಡುವ 'ಹಾಕ್ಸ್' ದಳದ ಮುಖ್ಯಸ್ಥರಾಗಿರುವ ಬ್ರಿಗೇಡಿಯರ್ ಹಂಗ್ವಾನಿ ಮುಲೌಝಿ ವಿವರಿಸಿದ್ದಾರೆ.

ಆಮದು ಆಗದೆಯೇ ಸರಕುಗಳನ್ನು ಬಿಡಿಸಿಕೊಳ್ಳಲು ಕಸ್ಟಮ್ಸ್ ಹಾಗೂ ಆಮದು ಸುಂಕವನ್ನು ಪಾವತಿಸುವುದಕ್ಕಾಗಿ ಓರ್ವ ಉದ್ಯಮಿಯಾಗಿರುವ ಎಸ್.ಆರ್. ಮಹಾರಾಜ್ ಎಂಬವರು ರಾಮ್‌ಗೋಬಿನ್‌ಗೆ 62 ಲಕ್ಷ ರಾಂಡ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಭಾರೀ ಪ್ರಮಾಣದ ಲಾಭಾಂಶವನ್ನು ಕೊಡುವುದಾಗಿ ರಾಮ್‌ಗೋಬಿನ್ ನಂಬಿಸಿದ್ದರೆನ್ನಲಾಗಿದೆ. ಇದೇ ರೀತಿ ಮತ್ತೊಂದು ಉದ್ಯಮಿಯಿಂದ ರಾಮ್‌ಗೋಬಿನ್ 52 ಲಕ್ಷ ರಾಂಡ್ ಪಡೆದುಕೊಂಡು ವಂಚಿಸಿದ್ದರೆ ಎನ್ನಲಾಗಿದೆ.

English summary
One of the great-granddaughters of late global human rights activist Mahatma Gandhi is expected to appear in the Durban Magistrate's Court on Monday on fraud charges, the Hawks said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X