Get Updates
Get notified of breaking news, exclusive insights, and must-see stories!

Breaking: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ನಾಪತ್ತೆ

ಆಂಟಿಗಾ, ಮೇ 25: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ಭಾರತದ ನಂ.1 ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ವಜ್ರ ವ್ಯಾಪಾರಿ, ಗೀತಾಂಜಲಿ ಸಮೂಹದ ಮೆಹುಲ್ ಚೋಕ್ಸಿ ನಾಪತ್ತೆ. ಭಾರತ ತೊರೆದು ಅಂಟಿಗಾ ದ್ವೀಪ ರಾಷ್ಟ್ರದಲ್ಲಿ ನೆಲೆ ಕಂಡುಕೊಂಡಿದ್ದ ಉದ್ಯಮಿ ಈಗ ಅಲ್ಲಿಂದಲೂ ಕಾಲ್ಕಿತ್ತಿದ್ದಾನೆ ಎಂಬ ವರದಿ ಬಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 13,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಜತೆಗೆ ಮೆಹುಲ್ ಚೊಕ್ಸಿ ಕೂಡಾ ಆರೋಪಿಯಾಗಿದ್ದು, ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗಾ ಹಾಗೂ ಬರ್ಬುಡಾದಲ್ಲಿ 2017ರಿಂದಲೇ ಪೌರತ್ವ ಪಡೆದುಕೊಂಡಿದ್ದಾರೆ.

Antiguanewsroom ಎಂಬ ಸ್ಥಳೀಯ ಮಾಧ್ಯಮ ಸಂಸ್ಥೆ ವರದಿ ಪ್ರಕಾರ, ಭಾನುವಾರದಿಂದ ಚೋಕ್ಸಿಗಾಗಿ ತೀವ್ರ ಹುಡುಕಾಟ ಜಾರಿಯಲ್ಲಿದೆ. ಈ ಸುದ್ದಿಯನ್ನು ಪೊಲೀಸ್ ಆಯುಕ್ತ ಅಟ್ಲಿ ರೊಡ್ನಿ ಖಚಿತಪಡಿಸಿದ್ದಾರೆ.

Fugitive jeweller Mehul Choksi has gone missing in Antigua

ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ 5,492 ಕೋಟಿ ರು ಸಾಲವನ್ನು ರಿಟನ್ ಆಫ್ ಮಾಡಲಾಗಿದೆ. ಚೋಕ್ಸಿ ಅವರು ಒಟ್ಟಾರೆ 70, 000 ಕೋಟಿ ರುಗೂ ಅಧಿಕ ಸಾಲ ಹೊಂದಿದ್ದು, ಅತಿದೊಡ್ಡ ಸಾಲಗಾರ ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿದ್ದಾರೆ ಎಂದು ಆರ್‌ಬಿಐ ಹೇಳಿದೆ.

ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಪಡೆದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಅವರು ಭಾರತದ ಪೌರತ್ವವನ್ನು ತೊರೆದಿದ್ದಾರೆ. ರಾಯಭಾರ ಕಚೇರಿಗೆ ಭಾರತದ ಪಾಸ್ ಪೋರ್ಟ್ ನೀಡಿದ್ದಾರೆ. ಜೊತೆಗೆ ಜಾಲಿ ಹಾರ್ಬರ್ ಮಾರ್ಕ್ಸ್ ನಲ್ಲಿ ವಾಸವಾಗಿದ್ದೇನೆ ಎಂದು ಹೊಸ ವಿಳಾಸವನ್ನು ನೀಡಿದ್ದಾರೆ.

ಮೆಹುಲ್ ಚೋಕ್ಸಿ ಅವರ ಪಾಸ್ ಪೋರ್ಟ್ (Z-3396732) ಈಗ ಅಂಟಿಗುವಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿದೆ. ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐ ತಂಡಗಳು, ಚೋಕ್ಸಿ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಿದ್ದು, ಭಾರತಕ್ಕೆ ಕರೆತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ. ಆದರೆ, ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕಾಗಿ ಯಾವುದೇ ಒಪ್ಪಂದವನ್ನು ಆಂಟಿಗುವಾ ಹಾಗೂ ಭಾರತ ಹೊಂದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+