ಪ್ಲೂಟೋನ ಚಂದ್ರ ಚಾರೋನ್​ನಲ್ಲಿ ಸಾಗರ ಕಂಡ ನಾಸಾ

Subscribe to Oneindia Kannada

ವಾಷಿಂಗ್ಟನ್, ಫೆಬ್ರವರಿ, 20: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳು ಮತ್ತೊಂದು ಹೊಸ ಸಂಶೋಧನೆಯನ್ನು ಮುಂದಿಟ್ಟಿದ್ದಾರೆ. ಪ್ಲೂಟೋದ ದೊಡ್ಡ ಉಪಗ್ರಹವಾದ (ಚಂದ್ರ) ಚಾರೋನ್​ನಲ್ಲಿ ಒಂದು ಬೃಹತ್ ಸಾಗರ ಇದ್ದಿರಬಹುದು ಎಂಬ ಸಾಧ್ಯತೆಯನ್ನು ಹೇಳಿದ್ದಾರೆ.

ಈ ಸಾಗರ ಹೆಪ್ಪುಗಟ್ಟಿದ್ದು ಭಾರಿ ಪ್ರಮಾಣದಲ್ಲಿ ಹಿಗ್ಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. 2015ರ ಜುಲೈ ವೇಳೆ ಸಾಗರ ಕಂಡುಬಂದಿರುವ ಪ್ರದೇಶದ ಮೇಲೆ ಹಾದು ಹೋಗುವಾಗ ನಾಸಾದ ನ್ಯೂ ಹಾರಿಜನ್ಸ್ ಬಾಹ್ಯಾಕಾಶ ನೌಕೆ ತೆಗೆದ ಚಿತ್ರಗಳ ಆಧಾರದಲ್ಲಿ ವಿಜ್ಞಾನಿಗಳು ಸಿದ್ಧಾಂತ ಮುಂದೆ ಇಟ್ಟಿದ್ದಾರೆ.[ಪ್ಲೂಟೋನಲ್ಲಿ ಕಂಡು ಬಂತು 'ತೇಲುವ ಪರ್ವತ'ಗಳ ಸಾಲು!]

ಚಾರೋನ್​ನ ಹೊರ ಮೇಲ್ಮೈ ಮೂಲತಃ ಹಿಮಗಡ್ಡೆಯಾಗಿತ್ತು. ಈ ಉಪಗ್ರಹದ ಹೊರ ಮೇಲ್ಮೈಯು ವಿಕಿರಣಗಳು ಮತ್ತು ಉಪಗ್ರದೊಳಗಿನ ಶಾಖದ ಪರಿಣಾಮವಾಗಿ ಬಿಸಿಯಾಗಿ ನೀರಾಗಿ ಪರಿವರ್ತನೆಗೊಂಡು ಮೇಲ್ಮೈಯಲ್ಲಿ ಬೃಹತ್ ಸಾಗರ ಸೃಷ್ಟಿಯಾಗಿರಬಹುದು. ಆದರೆ ಕ್ರಮೇಣ ಚಾರೋನ್​ನ ಶಾಖ ಕಡಿಮೆಯಾಗುತ್ತಾ ಹೋದಂತೆ ಸಾಗರ ಹೆಪ್ಪುಗಟ್ಟಿ ಹಿಗ್ಗಿರಬಹುದು ಎಂದು ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ.[ಮಂಗಳನ ವಾತಾವರಣ ನಾಶವಾಗಲು ಏನು ಕಾರಣ?]

ಸಾಗರ ಸುಮಾರು 1,100 ಮೂಲಿಗಳಷ್ಟು ಉದ್ದ ಇರಬಹುದು, 4.5 ಮೈಲಿ ಅಗಲವಾಗಿ ಹರಡಿಕೊಂಡಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 3.6 ಬಿಲಿಯನ್ ಮೈಲು ಕ್ರಮಿಸಿದ ನಂತರ ಸೂರ್ಯನ ಬೆಳಕು ಪ್ಲೂಟೋವನ್ನು ತಲುಪುತ್ತದೆ. ಪ್ಲೂಟೋ 5 ಚಂದ್ರಗಳನ್ನು ಹೊಂದಿದೆ. ಚಾರೋನ್ ಗಾತ್ರದಲ್ಲಿ ಪ್ಲೂಟೋನಷ್ಟೇ ಇದೆ. ಈ ಗ್ರಹಗಳ ಮೇಲೆ ಲಿಕ್ವಿಡ್ ಅಂಶ ಕಂಡುಬಂದಿರುವುದು ಮುಂದಿನ ದಿನಗಳಲ್ಲಿ ಹೊಸ ಸಂಶೋಧನೆಗೆ ನೆರವಾಗುವುದರಲ್ಲಿ ಅನುಮಾನವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pluto's largest moon Charon once had a subsurface ocean which has frozen long ago and expanded, pushing and stretching the natural satellite's surface like 'Hulk' while causing massive fractures, a new NASA image has shown. The new image from NASA's New Horizons spacecraft suggest that Charon's tectonic landscape shows that, somehow, the moon expanded in its past, and like the fictional superhero Bruce Banner tearing his shirt as he becomes the Incredible Hulk Charon's surface fractured as it stretched, researchers said.
Please Wait while comments are loading...