• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಯುಕೆ ಪ್ರಧಾನಿ ಜಾನ್ಸನ್ ಸರ್ಕಾರದ ಇಬ್ಬರು ಸಚಿವರ ರಾಜೀನಾಮೆ

|
Google Oneindia Kannada News

ಲಂಡನ್, ಜುಲೈ 6: ಯುನೈಟೆಡ್ ಕಿಂಗ್ ಡಮ್ ನಲ್ಲಿ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸರ್ಕಾರಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿದೆ. ಬುಧವಾರ ಸರ್ಕಾರದ ಮತ್ತಿಬ್ಬರು ಸಚಿವರು ರಾಜೀನಾಮೆ ಸಲ್ಲಿಸಿರುವುದು ರಾಜಕೀಯ ಬಿಕ್ಕಟ್ಟು ಸೃಷ್ಟಿಯ ಸುಳಿವು ನೀಡಿದೆ.

ಮಕ್ಕಳು ಮತ್ತು ಕುಟುಂಬಗಳ ಸಚಿವ ವಿಲ್ ಕ್ವಿನ್ಸ್ ಅವರು "ನನ್ನ ರಾಜೀನಾಮೆಯನ್ನು ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಹೇಳಿದ್ದಾರೆ. ಆದರೆ ಕಿರಿಯ ಸಾರಿಗೆ ಸಚಿವ ಲಾರಾ ಟ್ರಾಟ್ ಸರ್ಕಾರದಲ್ಲಿ ನಂಬಿಕೆ ಕಳೆದುಕೊಂಡಿದ್ದಕ್ಕಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಬ್ರಿಟನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ಬ್ರಿಟನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್

ಮಂಗಳವಾರವಷ್ಟೇ ಯುಕೆ ಹಣಕಾಸು ಸಚಿವ ರಿಷಿ ಸುನಕ್ ಮತ್ತು ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರದಿಂದ ಹೊರ ಬಂದಿದ್ದರು. ಇದರ ಬೆನ್ನಲ್ಲೇ ಮತ್ತಿಬ್ಬರು ಸಚಿವರು ರಾಜೀನಾಮೆ ನೀಡಿರುವುದು ಯುಕೆಯಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗುತ್ತಿದೆ.

ಯುಕೆಗೆ ಹೊಸ ಹಣಕಾಸು ಮಂತ್ರಿ ನೇಮಕ:
ಭಾರತದ ಖ್ಯಾತ ಉದ್ಯಮಿ ನಾರಾಯಣಮೂರ್ತಿ ಅಳಿಯ ಹಾಗೂ ಯುಕೆ ಹಣಕಾಸು ಸಚಿವ ರಿಷಿ ಸುನಕ್ ರಾಜೀನಾಮೆ ಬೆನ್ನಲ್ಲೇ ಶಿಕ್ಷಣ ಸಚಿವ ನಾಧಿಮ್ ಜಹಾವಿ ಅನ್ನು ನೂತನ ಹಣಕಾಸು ಸಚಿವರನ್ನಾಗಿ ನೇಮಿಸಿಕೊಳ್ಳಲಾಯಿತು. ಅದೇ ರೀತಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ರಾಜೀನಾಮೆ ಹಿನ್ನೆಲೆ ಸ್ಟೀವ್ ಬಾರ್ಕ್ಲೇ ಅವರಿಗೆ ಆರೋಗ್ಯ ಖಾತೆಯ ಜವಾಬ್ದಾರಿಯನ್ನು ವಹಿಸಲಾಯಿತು.

"ಉಕ್ರೇನ್ ಯುದ್ಧವು ಯುನೈಟೆಡ್ ಕಿಂಗ್ ಡಮ್ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ. ಜೀವನದ ವೆಚ್ಚ ಹೆಚ್ಚುತ್ತಿರುವುದು ಮತ್ತು ಸರ್ಕಾರದ ಮೇಲೆ ಯಾವ ರೀತಿ ಪ್ರಭಾವ ಬೀರಿತು. ರಾಜಕೀಯದಲ್ಲಿ ಸಮಗ್ರತೆ ಮತ್ತು ಕಾನೂನಿನ ನಿಯಮದ ಬಗ್ಗೆ ಸಂಪರ್ಕ ಸಮಿತಿಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

English summary
Fresh blow to UK PM Boris Johnson Govt from 2 more ministers resign. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X