ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಪತ್ನಿ, 60 ಮಕ್ಕಳಿರುವ ಈತನಿಗೆ ನಾಲ್ಕನೇ ಮದುವೆ ಬೇಕಂತೆ

|
Google Oneindia Kannada News

ಈಗ ಅವಿಭಕ್ತ ಕುಟುಂಬಗಳಲ್ಲಿ ವಾಸಿಸುತ್ತಿರುವವರು ಬಹಳ ಕಡಿಮೆ. ಪ್ರಪಂಚವು ಈಗ ಒಂದು ಸಣ್ಣ ಘಟಕದಲ್ಲಿ ಅಂದರೆ ವಿಭಕ್ತ ಕುಟುಂಬದಲ್ಲಿ ವಾಸಿಸುವತ್ತ ಹೆಚ್ಚು ಗಮನಹರಿಸುತ್ತಿದೆ. ಅಲ್ಲಿ ಪೋಷಕರು ಮತ್ತು ಮಕ್ಕಳು ಮಾತ್ರ. ದಿನನಿತ್ಯದ ಕೆಲಸದ ಜಂಜಾಟದಿಂದಾಗಿ ಜನರು ತಮ್ಮ ಅವಿಭಕ್ತ ಕುಟುಂಬಗಳನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ಇದನ್ನು ಎಲ್ಲರೂ ಮಾಡುತ್ತಿಲ್ಲ. ಬಲೂಚಿಸ್ತಾನದಲ್ಲಿ ಒಬ್ಬ ವ್ಯಕ್ತಿಯು ಸಾಕಷ್ಟು ದೊಡ್ಡ ಕುಟುಂಬವನ್ನು ಹೊಂದಿದ್ದಾನೆ. ಅಂದರೆ ಆತ ಇತ್ತೀಚೆಗೆ 60 ನೇ ಮಗುವಿಗೆ ತಂದೆಯಾದನು. ಆಶ್ಚರ್ಯ ಎನಿಸಿದರೂ ಇದು ನಿಜಾನೇ.

50 ವರ್ಷದ ಸರ್ದಾರ್ ಜಾನ್ ಮೊಹಮ್ಮದ್ ಖಾನ್ ಖಿಲ್ಜಿಗೆ ಮೂವರು ಪತ್ನಿಯರಿದ್ದಾರೆ ಮತ್ತು ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಅವರ 59 ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರು ಬುಧವಾರ ತಮ್ಮ 60 ನೇ ಮಗುವನ್ನು ಸ್ವಾಗತಿಸಿದರು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಮಕ್ಕಳನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದರು. ಮೇಲಾಗಿ ಗಂಡುಮಕ್ಕಳಿಗಿಂತ ಹೆಚ್ಚು ಹೆಣ್ಣುಮಕ್ಕಳು ಅವರಿಗಿದೆ.

ವಾಸ್ತವವಾಗಿ ಸರ್ದಾರ್ ಜಾನ್ ಅವರು ನಾಲ್ಕನೇ ಹೆಂಡತಿಯನ್ನು ಹುಡುಕಲು ಬಯಸಿದ್ದಾರೆ. ಇದರಿಂದ ಅವರು ಭವಿಷ್ಯದಲ್ಲಿ ಹೆಚ್ಚಿನ ಮಕ್ಕಳನ್ನು ಹೊಂದಬಹುದು ಎನ್ನುವ ಆಸೆ ಅವರದ್ದು. ಅವರ ಇಚ್ಛೆಗಳು ಅನೇಕರ ಗಮನವನ್ನು ಸೆಳೆದಿವೆ ಮತ್ತು ಸರ್ದಾರ್ ಅವರು ತಮ್ಮ ಮನೆಗೆ ಹೆಚ್ಚಿನ ಮಕ್ಕಳನ್ನು ಹೊಂದಲು ನಾಲ್ಕನೇ ಹೆಂಡತಿಯನ್ನು ಹುಡುಕಲು ಅವರ ಸ್ನೇಹಿತರನ್ನು ಕೇಳಿದ್ದಾರೆ.

Fourth marriage for Pakistani father of 60 children

ಸರ್ದಾರ್ ಸ್ಥಳೀಯ ಕುಟುಂಬ ವೈದ್ಯರಾಗಿದ್ದು, ಅವರ ನಿವಾಸದಲ್ಲಿ ಕ್ಲಿನಿಕ್ ಕೂಡ ಇದೆ. ಅಸಾಧಾರಣವಾದ ದೊಡ್ಡ ಕುಟುಂಬವನ್ನು ಹೊಂದಲು ಅವರು ತಮ್ಮ ಪ್ರದೇಶದಲ್ಲಿ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ತಮ್ಮ ಇಡೀ ಕುಟುಂಬವನ್ನು ಪ್ರವಾಸಕ್ಕೆ ಕರೆದೊಯ್ಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಗಮನಿಸಿದರೆ ಅದು ಅಡ್ಡಿಯಾಗಿದೆ. "ಸರ್ಕಾರ ನನಗೆ ಬಸ್ ಮಂಜೂರು ಮಾಡಿದರೆ, ನಾನು ನನ್ನ ಎಲ್ಲಾ ಮಕ್ಕಳನ್ನು ಸುಲಭವಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಬಹುದು" ಎಂದು ಸರ್ದಾರ್ ಹೇಳಿದ್ದಾರೆ.

ಇಲ್ಲದಿದ್ದರೆ, ಅವನು ತನ್ನ ಕುಟುಂಬವನ್ನು ಎಲ್ಲಿಯಾದರೂ ಕರೆದೊಯ್ಯಲು ಬಹು ಸಾರಿಗೆ ಆಯ್ಕೆಗಳನ್ನು ಹುಡುಕಬೇಕಾಗಿರುವುದರಿಂದ ಅವನು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ.

English summary
50-year-old Sardar John Mohammad Khan Khilji of Pakistan has 60 children and is ready for his fourth marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X