ಐಎಸ್‌ಐಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ

ಇಸ್ಲಾಮಾಬಾದ್, ಅ. 29: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ದೇಶದ ಗುಪ್ತಚರ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.

ರ್‍ಯಾಲಿಯೊಂದರಲ್ಲಿ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್, "ಡಿಜಿ ಐಎಸ್‌ಐ (ಐಎಸ್‌ಐ ಮಹಾನಿರ್ದೇಶಕ ನದೀಮ್ ಅಂಜುಂ) ನಿಮ್ಮ ಕಿವಿಗಳನ್ನು ತೆರೆದು ಆಲಿಸಿ, ನನಗೆ ಬಹಳಷ್ಟು ವಿಷಯಗಳು ತಿಳಿದಿವೆ ಆದರೂ ನಾನು ಮೌನವಾಗಿದ್ದೇನೆ. ನಾನು ನನ್ನ ದೇಶಕ್ಕೆ ಹಾನಿ ಮಾಡಲು ಬಯಸುವುದಿಲ್ಲ. ನಾನು ಸುಧಾರಣೆಗಾಗಿ ರಚನಾತ್ಮಕ ಟೀಕೆಗಳನ್ನು ಮಾಡುತ್ತೇನೆ. ಇಲ್ಲದಿದ್ದರೆ ನಾನು ಹೇಳಲು ಬಹಳಷ್ಟು ಇತ್ತು" ಎಂದು ಹೇಳಿದ್ದಾರೆ.

ANI ವರದಿಗಳ ಪ್ರಕಾರ, ಲಾಹೋರ್‌ನ ಲಿಬರ್ಟಿ ಚೌಕ್‌ನಿಂದ ಇಸ್ಲಾಮಾಬಾದ್‌ಗೆ ಇಮ್ರಾನ್ ಖಾನ್ ಮತ್ತು ಇತರ ಪಕ್ಷದ ಸದಸ್ಯರು ಪ್ರಾರಂಭಿಸಿದ "ಹಖಿ ಆಜಾದಿ ಲಾಂಗ್ ಮಾರ್ಚ್" ಸಮಯದಲ್ಲಿ ಈ ಟೀಕೆಗಳನ್ನು ಮಾಡಲಾಗಿದೆ.

Former Pakistan Prime Minister Imran Khan warns ISI

ಅಚ್ಚರಿ ಏನೆಂದರೆ, ಇಲ್ಲಿಯವರೆಗೂ ಯಾವುದೇ ಐಎಸ್‌ಐ ಚೀಫ್‌ನ ಮುಖವನ್ನು ಸಾರ್ವಜನಿಕರು ಈವರೆಗೆ ಕಂಡಿರಲಿಲ್ಲ. ಯಾವುದೇ ಐಎಸ್‌ಐ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿಲ್ಲ. ಕ್ಯಾಮರಾ ಕಣ್ಣಿಗೆ ಕಂಡಿದ್ದೇ ಇಲ್ಲ. ಆದರೆ ನದೀಮ್ ಅಂಜುಮ್ ಮುಂದೆ ಬಂದಿದ್ದಲ್ಲದೆ, ಇಮ್ರಾನ್ ಖಾನ್‌ ದೊಡ್ಡ ಸುಳ್ಳುಗಾರ ಎಂದು ಕರೆದಿದ್ದಾರೆ. ಐಎಸ್‌ಐನ ಡಿಜಿ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಲ್ಲರ ಅಚ್ಚರಿಗೆ ಕಾರಣವಾಯಿತು. ಅಲ್ಲಿನ ಮಾಧ್ಯಮಗಳೂ ಕೂಡ ಅಚ್ಚರಿಗೊಂಡಿವೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ)ನ ಹಿರಿಯ ಅಧಿಕಾರಿಗಳು ಸಿಡಿದು ಬಿದ್ದಿದ್ದಾರೆ. ಖಾನ್ ಅಧಿಕಾರದಲ್ಲಿ ಇರುವ ವೇಳೆ, ಅವರ ಸರ್ಕಾರಕ್ಕೆ ಕಾನೂನು ಮತ್ತು ಸಂವಿಧಾನ ಬಾಹಿರ ರೀತಿಯಲ್ಲಿ ಬೆಂಬಲ ನೀಡುವ ಬಗ್ಗೆ ಕೋರಿಕೆ ಸಲ್ಲಿಸಿದ್ದರು ಎಂದು ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಲೆ.ಜ.ನದೀಮ್ ಅಂಜುಂ ಆರೋಪ ಮಾಡಿದ್ದಾರೆ.

Former Pakistan Prime Minister Imran Khan warns ISI

ಇದೇ ಮೊದಲ ಬಾರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಸೇನೆಯ ಮಾಧ್ಯಮ ವಿಭಾಗದ ಜೊತೆಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್ ವರೆಗೆ ಕೈಗೊಳ್ಳಲಿರುವ ಪಾದಯಾತ್ರೆಗೆ ಮುನ್ನ ಈ ಬೆಳವಣಿಗೆ ನಡೆದಿದೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಖಾನ್ ಅವರು ಮಂಡಿಸಿದ್ದ ಅಸಾಂವಿಧಾನಿಕ ಕೋರಿಕೆಗಳು ಏನು ಎಂಬ ವಿಚಾರವನ್ನು ಐಎಸ್‌ಐ ಮುಖ್ಯಸ್ಥರು ಬಹಿರಂಗಪಡಿಸಲಿಲ್ಲ. ಗಮನಾರ್ಹ ಅಂಶವೆಂದರೆ ಮಾಧ್ಯಮದವರ ಜೊತೆಗೆ ಮಾತನಾಡುವ ವೇಳೆ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ದೂರ ಉಳಿಯುವ ನಿರ್ಧಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಜೊತೆಗೆ ಕೆಲವೊಂದು ತಪ್ಪುಗಳನ್ನೂ ಮಾಡಿತ್ತು ಎಂದು ಐಎಸ್‌ಐ ಮುಖ್ಯಸ್ಥ ಲೆ.ಜ.ನದೀಮ್ ಅಂಜುಂ ಹೇಳಿದ್ದಾರೆ.

ಸದ್ಯ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ನಾಯಕ ಅಸಾದ್ ಉಮರ್ ಪ್ರತಿಕ್ರಿಯೆ ನೀಡಿ, ದೇಶದ ಗುಪ್ತಚರ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+