ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ತಯಾರಿಕೆಗೆ ಭಾರತದ ಸಹಕಾರ ಕೇಳಿದ ರಷ್ಯಾ

|
Google Oneindia Kannada News

ನವದೆಹಲಿ, ಆಗಸ್ಟ್ 21: ಭಾರತದ ಸಹಭಾಗಿತ್ವದೊಂದಿಗೆ ಸ್ಪುಟ್ನಿಕ್ 5 ಕೊರೊನಾ ಲಸಿಕೆ ತಯಾರಿಸಲು ರಷ್ಯಾ ಉತ್ಸುಕವಾಗಿದೆ.

Recommended Video

ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

ಇಷ್ಟು ದಿನ ಈ ಕುರಿತು ಕೇವಲ ಊಹಾಪೋಹಗಳಿತ್ತು, ಭಾರತ ಸರ್ಕಾರ ನಮ್ಮ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಸುದ್ದಿಯನ್ನು ತಳ್ಳಿ ಹಾಕಿತ್ತು.
ಆದರೆ ಈಗ ರಷ್ಯನ್ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್ ಫಂಡ್ ಸಿಇಓ ಕಿರಿಲ್ ಈ ಕುರಿತು ಮಾತನಾಡಿದ್ದಾರೆ.

ವಿಶ್ವದ ಮೊದಲ ಕೊರೊನಾ ಲಸಿಕೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು ವಿಶ್ವದ ಮೊದಲ ಕೊರೊನಾ ಲಸಿಕೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿ, ರಷ್ಯಾವು ವಿಶ್ವದಲ್ಲೇ ಮೊಟ್ಟ ಮೊದಲು ಕೊರೊನಾ ಲಸಿಕೆಯನ್ನು ಸಿದ್ಧಪಡಿಸಿದೆ. ಈ ಲಸಿಕೆಯು ಮನುಷ್ಯನ ದೇಹದಲ್ಲಿ ರೋಗನಿರೋಧಕರ ಶಕ್ತಿಯನ್ನು ಉಂಟು ಮಾಡುತ್ತದೆ ಎಂದು ತಿಳಿಸಿದ್ದರು.

ಗಮಲೇಯದಿಂದ ಲಸಿಕೆ ಸಂಶೋಧನೆ

ಗಮಲೇಯದಿಂದ ಲಸಿಕೆ ಸಂಶೋಧನೆ

ಗಮಲೇಯ ಇನ್‌ಸ್ಟಿಟ್ಯೂಟ್ ಸ್ಪುಟ್ನಿಕ್ 5 ಲಸಿಕೆಯನ್ನು ಸಿದ್ಧಪಡಿಸಿದೆ. ಆರ್‌ಡಿಐಎಫ್ ಜೊತೆ ಗೂಡಿ ಈ ಲಸಿಕೆ ತಯಾರಿಸಿದೆ. ಲ್ಯಾಟಿನ್ ಅಮೇರಿಕ, ಏಷ್ಯಾ, ಮಿಡಲ್ ಈಸ್ಟ್‌ ಲಸಿಕೆ ಬಗ್ಗೆ ಒಲವು ತೋರಿವೆ.

ಲಸಿಕೆ ಉತ್ಪಾದನೆ ದೊಡ್ಡ ಪ್ರಶ್ನೆ

ಲಸಿಕೆ ಉತ್ಪಾದನೆ ದೊಡ್ಡ ಪ್ರಶ್ನೆ

ಲಸಿಕೆ ಉತ್ಪಾದನೆಯೇ ಬಹು ದೊಡ್ಡ ಸವಾಲಾಗಿದೆ. ಹೀಗಾಗಿ ಭಾರತದ ಸಹಭಾಗಿತ್ವಕ್ಕೆ ಎದುರು ನೋಡುತ್ತಿದ್ದೇವೆ ಎಂದು ರಷ್ಯಾ ತಿಳಿಸಿದೆ. ಸಹಭಾಗಿತ್ವ ದೊರೆತರೆ ಬೇಡಿಕೆಗೆ ತಕ್ಕಂತೆ ಲಸಿಕೆಯ ಉತ್ಪಾದನೆ ಮಾಡಬಹುದಾಗಿದೆ.ಹೀಗಾಗಿ ರಷ್ಯಾ ಅಂತಾರಾಷ್ಟ್ರೀಯ ಸಹಕಾರವನ್ನು ಕೇಳಿದೆ.

ಕೇವಲ ರಷ್ಯಾದಲ್ಲಿ ಮಾತ್ರ ಕ್ಲಿನಿಕಲ್ ಟ್ರಯಲ್ ನಡೆಯುವುದಿಲ್ಲ

ಕೇವಲ ರಷ್ಯಾದಲ್ಲಿ ಮಾತ್ರ ಕ್ಲಿನಿಕಲ್ ಟ್ರಯಲ್ ನಡೆಯುವುದಿಲ್ಲ

ಕೇವಲ ರಷ್ಯಾದಲ್ಲಿ ಮಾತ್ರ ಕ್ಲಿನಿಕಲ್ ಟ್ರಯಲ್ ನಡೆಯುವುದಿಲ್ಲ, ಯುಎಇ, ಸೌದಿ ಅರೇಬಿಯಾ, ಬ್ರೆಜಿಲ್ ಹಾಗೂ ಭಾರತದಲ್ಲಿ ನಡೆಯಲಿದೆ. ನಾವು ಲಸಿಕೆಯನ್ನು 5ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ತಯಾರಿಸಲು ಮುಂದಾಗಿದ್ದೇವೆ. ಏಷ್ಯಾ, ಲ್ಯಾಟಿನ್ ಅಮೆರಿಕ, ಇಟಲಿ, ಹಾಗೂ ಇತರೆ ದೇಶಗಳಲ್ಲಿ ಲಸಿಕೆಗೆ ಬೇಡಿಕೆ ಇದೆ.

ಮೂರನೇ ಹಂತದ ಪ್ರಯೋಗ

ಮೂರನೇ ಹಂತದ ಪ್ರಯೋಗ

ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ 5 ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಫಿಲಿಪೈನ್ಸ್‌ನಲ್ಲಿ ನಡೆಯಲಿದೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಟ್ರಯಲ್ ನಡೆಯಲಿದೆ. ಈ ಕುರಿತು ಫಿಲಿಪೈನ್ಸ್ ವಕ್ತಾರ ಹ್ಯಾರಿ ರೋಕ್ ತಿಳಿಸಿದ್ದಾರೆ.ರಷ್ಯಾ ಸರ್ಕಾರವು ಕ್ಲಿನಿಕಲ್ ಟ್ರಯಲ್ ನಡೆಸಲು ಅನುದಾನವನ್ನು ನೀಡುತ್ತಿದೆ ಎಂದು ಯಾವುದೋ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದರು.

2021ರೊಳಗೆ ಫಿಲಿಪೈನ್ಸ್‌ನ ಆಹಾರ ಮತ್ತು ಔಷಧಾಡಳಿತವು ರಷ್ಯಾದ ಲಸಿಕೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.ಈ ಲಸಿಕೆಯನ್ನು ಗಮಲೇಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ್ದು, ಅದಕ್ಕೆ ಸ್ಪುಟ್ನಿಕ್ 5 ಎಂದು ನಾಮಕರಣ ಮಾಡಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತ್ರಿಗೆ ಮೊದಲ ಲಸಿಕೆ ನೀಡಲಾಗುತ್ತಿದ್ದು, ಬಳಿಕ ವೈದ್ಯರು ಮತ್ತು ಶಿಕ್ಷಕರಿಗೆ ಮೊದಲ ಹಂತದ ಲಸಿಕೆ ನೀಡಲಾಗುತ್ತಿದೆ.ದೇಶೀಯ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ದೇಶವು ನಿಯಂತ್ರಿಸುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆರಂಭದಲ್ಲಿ ಡೋಸೇಜ್ ನೀಡಲು ಭಾರತವು ಅಂತಾರಾಷ್ಟ್ರೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

English summary
Russia is looking for a partnership with India for producing COVID-19 vaccine Sputnik V, Kirill Dmitriev, the CEO of the Russian Direct Investment Fund (RDIF), said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X