ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವರ್ಣ ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿಗೆ 10 ವರ್ಷ ಜೈಲು

|
Google Oneindia Kannada News

ಲಾಹೋರ್, ಜನವರಿ, 28: ಪಾಕಿಸ್ತಾನದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ 10 ವರ್ಷ ಜೈಲು ಶಿಕ್ಷೆ , ಇದು ಪಾಕಿಸ್ತಾನದ ಕೋರ್ಟ್ ನ ತೀರ್ಮಾನ . ಜನವರಿ 26 ರಂದು ಬಾವುಟ ಹಾರಿಸಿದ್ದ ಉಮರ್ ಡ್ರಾಜ್ ಗೆ ಲಾಹೋರ್ ನ್ಯಾಯಾಲಯ ಜನವರಿ 28 ಅಂದರೆ ಎರಡೇ ದಿನದ ಅವಧಿಯಲ್ಲಿ ಶಿಕ್ಷೆಯನ್ನು ಪ್ರಕಟ ಮಾಡಿ ನೀಡಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕೊಹ್ಲಿ ಅಭಿಮಾನಿ ಉಮರ್ ಡ್ರಾಜ್ ಭಾರತದ ಧ್ವಜ ಹಾರಿಸಿದ್ದ. ಕೊಹ್ಲಿಯ ಕಟ್ಟಾ ಅಭಿಮಾನಿ ತನ್ನ ಪ್ರೀತಿಯನ್ನು ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವ್ಯಕ್ತಪಡಿಸಿದ್ದ. ಲಾಹೋರ್ ನಿಂದ 200ಕಿಲೋ ಮೀಟರ್ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಓಕಾರಾ ಜಿಲ್ಲೆಯಲ್ಲಿ ಧ್ವಜ ಹಾರಿಸಿದ್ದು ವರದಿಯಾಗಿತ್ತು.[ಪಾಕಿಸ್ತಾನದಲ್ಲಿ ಹಾರಾಡಿತು ಭಾರತದ ತ್ರಿವರ್ಣ ಧ್ವಜ]

Flying Indian Flag: Virat Kohli's Pakistani Fan Jailed For 10 Years

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಡೆದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 90 ರನ್ ಗಳಿಸಿ ಮಿಂಚಿದ್ದರು. ಪಂದ್ಯದಲ್ಲಿ ಭಾರತ ಆಸೀಸ್ ಗೆ ಸೋಲುಣಿಸಿತ್ತು. ಇದಾದ ಮೇಲೆ ಅಭಿಮಾನಿ ಬಾವುಟ ಹಾರಿಸಿದ್ದ.

ನ್ಯಾಯಾಲಯ ರಾಷ್ಟ್ರದ್ರೋಹದ ಆರೋಪದ ಮೇಲೆ ಉಮರ್‌ಗೆ 10ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈರೀತಿ ಮಾಡುವುದು ತಪ್ಪು ಎಂಬುದು ನನಗೆ ತಿಳಿದಿರಲಿಲ್ಲ ಎಂದು ಉಮರ್ ಹೇಳಿಕೆ ನೀಡಿದ್ದ. ನನಗೆ ದೇಶದ್ರೋಹ ಮಾಡುವ ಉದ್ದೇಶ ಇಲ್ಲ ಎಂದು ಹೇಳಿದ್ದ. ಆದರೆ ಇದ್ಯಾವುದಕ್ಕೂ ಪಾಕಿಸ್ತಾನದ ನ್ಯಾಯಾಲಯ ತಲೆ ಕೆಡಿಸಿಕೊಂಡಿಲ್ಲ.

English summary
Lahore: A Pakistani fan of Indian batsman Virat Kohli has been jailed for 10 years for flying the Indian tri-colour atop his home in Punjab Province Umar Draz, a tailor by profession from Okara district of Punjab province, was produced before a district court yesterday who sent him to jail on judicial remand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X