ದುಬೈ ವಿಮಾನ ಪತನ: ಇಬ್ಬರು ಭಾರತೀಯರು ಸೇರಿ 62 ಸಾವು

Subscribe to Oneindia Kannada

ಮಾಸ್ಕೋ, ಮಾರ್ಚ್, 19: ಮತ್ತೊಂದು ವಿಮಾನ ಅವಘಡ ಸಂಭವಿಸಿದೆ. 62 ಜನರನ್ನು ಹೊತ್ತೊಯ್ಯುತ್ತಿದ್ದ ದುಬೈ ಮೂಲದ ವಿಮಾನ ರಷ್ಯಾದಲ್ಲಿ ಪತನವಾಗಿದೆ.

ದುಬೈನ ವಿಮಾನ ಶನಿವಾರ ಬೆಳಿಗ್ಗೆ ರಷ್ಯಾದ ದಕ್ಷಿಣ ಭಾಗದಲ್ಲಿರುವ ರಾಸ್ಟೋವ್-ಆನ್-ಡಾನ್ ಪ್ರದೇಶಕ್ಕೆ ತೆರಳುತ್ತಿರಬೇಕಾದರೆ ಈ ದುರಂತ ಸಂಭವಿಸಿದೆ. ಆಕಸ್ಮಿಕ ಬೆಂಕಿ ತಗುಲಿ ಈ ದುರಂತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವಿಮಾನದಲ್ಲಿ 7 ಸಿಬ್ಬಂದಿ ಸೇರಿದಂತೆ ಒಟ್ಟು 62 ಜನರಿದ್ದರು.[100 ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದ್ದ ರಷ್ಯಾ ವಿಮಾನ ದುರಂತ]

Russia

ವಿಮಾನದಲ್ಲಿದ್ದ ಇಬ್ಬರು ಭಾರತೀಯರು ಸೇರಿ 62 ಮಂದಿ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ದುಬೈನಿಂದ ಆಗಮಿಸಿದ್ದ ಫ್ಲೈದುಬೈ ಎಫ್ ರೆಡ್ -981 ಬೋಯಿಂಗ್ ವಿಮಾನ ರೊಸ್ಟೋವ್ ಆನ್-ಡಾನ್ ನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿರಬೇಕಾದರೆ ಈ ದುರಂತ ಸಂಭವಿಸಿದೆ.

ಹವಾಮಾನದ ವೈಪರೀತ್ಯದಿಂದಾಗಿ ಈ ಘಟನೆ ನಡೆದಿದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸಾವಿಗೀಡಾದ ಭಾರತೀಯರ ಹೆಸರು ತಿಳಿದು ಬಂದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least 62 passengers and crew have died after a FlyDubai plane crashed during an attempted landing in the Russian city of Rostov-on-Don, Russian officials said. A Russian investigative committee confirmed in a statement that all 62 people on board the plane, travelling from Dubai, were killed in the crash on Saturday morning.
Please Wait while comments are loading...