ದುಬೈ-ಇಸ್ರೇಲ್ ವಿಮಾನದಲ್ಲಿ ಘೋರ ದುರಂತ ತಪ್ಪಿಸಿದ ಭಾರತೀಯ ಪೈಲಟ್, 180 ಪ್ರಯಾಣಿಕರ ಜೀವ ಉಳಿಸಿದ ಸ್ಮಿತ್ ಯಾರು?

Flydubai Flight: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದು ಜಗತ್ತನ್ನೇ ಬೆಚ್ಚಿಬೀಳಿಸಿದೆ. 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ ಒಮಾನ್ ಮೂಲದ ಸಹ-ಪೈಲಟ್ ವಿಮಾನವನ್ನು ದುರಂತಕ್ಕೀಡುಮಾಡಲು ಸಂಚು ರೂಪಿಸಿದ್ದನು. ಆದರೆ ಭಾರತೀಯ ಮೂಲದ ಮುಖ್ಯ ಪೈಲಟ್ ತನ್ನ ಜೀವವನ್ನು ಲೆಕ್ಕಿಸದೆ ಪವಾಡಸದೃಶ ರೀತಿಯಲ್ಲಿ ಹೋರಾಡಿ ಭಾರಿ ದುರಂತವನ್ನು ತಪ್ಪಿಸಿ ಗಮನ ಸೆಳೆದಿದ್ದಾರೆ.

ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಒಮಾನ್ ಮೂಲದ ಸಹ-ಪೈಲಟ್ ವಿಮಾನವನ್ನು ಕೆಳಕ್ಕೆ ಕೆಡವಲಯ ಯತ್ನಿಸಿದನು. ಈ ವೇಳೆ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಪೈಲಟ್‌ನ ಮೇಲೆ ಚಾಕುವಿನಿಂದ ದಾಳಿ ನಡೆಸಲಾಯಿತು. ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ, ಭಾರತೀಯ ಪೈಲಟ್ ಎದೆಗುಂದದೆ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನೊಂದಿಗೆ ಹೋರಾಡಿದರು. ವಿಮಾನವು ಕೇವಲ 2 ನಿಮಿಷಗಳಲ್ಲಿ 17,400 ಅಡಿಗಳಷ್ಟು ವೇಗವಾಗಿ ಕೆಳಕ್ಕೆ ಕುಸಿತ ಆಗಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾದರು.

Flydubai Flight Horror Indian Pilot Smit Machchhar Saves 180 Passengers Know Complete details

ತಕ್ಷಣ ತುರ್ತು ಮುನ್ನೆಚ್ಚರಿಕಾ ಸೂಚನೆಗಳ ರವಾನೆ

ಸಹ-ಪೈಲಟ್‌ನ ನಿಯಂತ್ರಣ ತಪ್ಪಿಸಲು ಯತ್ನಿಸಿದ ಭಾರತೀಯ ಪೈಲಟ್, ತಕ್ಷಣವೇ ತುರ್ತು ಮುನ್ನೆಚ್ಚರಿಕಾ ಸೂಚನೆಗಳನ್ನು ರವಾನಿಸಿ, ಕಾಕ್‌ಪಿಟ್ ಬಾಗಿಲನ್ನು ತೆರೆದರು. ಇದೇ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಇತರ ಸಿಬ್ಬಂದಿ ಕಾಕ್‌ಪಿಟ್‌ಗೆ ಧಾವಿಸಿ, ಗಲಾಟೆ ಮಾಡುತ್ತಿದ್ದ ಒಮಾನ್ ಪೈಲಟ್‌ನನ್ನು ಕಟ್ಟಿಹಾಕಲು ನೆರವಾದರು.

ಅಮೆರಿಕದಲ್ಲಿ ನಡೆದ 9/11 ಉಗ್ರರ ದಾಳಿಯ ಮಾದರಿಯಲ್ಲೇ ಇಸ್ರೇಲ್ ನೆಲದ ಮೇಲೆ ಈ ವಿಮಾನವನ್ನು ಅಪ್ಪಳಿಸುವ ಸಂಚು ಇದಾಗಿತ್ತು ಎನ್ನಲಾಗಿದೆ. ಭಾರತೀಯ ಪೈಲಟ್‌ನ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಇಸ್ರೇಲ್‌ನಲ್ಲಿ ಸಂಭವಿಸಬಹುದಾಗಿದ್ದ ಬೃಹತ್ ಅನಾಹುತವೊಂದು ತಪ್ಪಿದೆ.

ಸೌದಿ ಅರೇಬಿಯಾದಲ್ಲಿ ಸುರಕ್ಷಿತ ಲ್ಯಾಂಡಿಂಗ್

ಘಟನೆಯ ನಂತರ ವಿಮಾನವನ್ನು ತಕ್ಷಣವೇ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ, ಅಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಗಾಯಗೊಂಡಿದ್ದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರ ಪ್ರಸ್ತುತ ಸ್ಥಿತಿ ಸುಧಾರಿಸಿದೆ. ಇನ್ನೂ ದಾಳಿ ನಡೆಸಿದ ಒಮಾನ್ ಪೈಲಟ್‌ನನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಸ್ರೇಲ್ ಪ್ರಧಾನಿಯಿಂದ ಶ್ಲಾಘನೆ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ತಮ್ಮ ಜೀವವನ್ನು ಲೆಕ್ಕಿಸದೆ 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ನಿಜವಾದ ಹೀರೊ,' ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಹಾಗೂ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಯಾಣಿಕರನ್ನು ನಂತರ ಬೇರೆ ವಿಮಾನದ ಮೂಲಕ ಇಸ್ರೇಲ್‌ಗೆ ಸುರಕ್ಷಿತವಾಗಿ ಕರೆತರಲಾಯಿತು ಎಂದು ತಿಳಿದುಬಂದಿದೆ.

ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಯಾರು?

ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರು ಭಾರತೀಯ ಪ್ರಜೆಯಾಗಿದ್ದು, ಯುಎಇ ಸರ್ಕಾರದ ಒಡೆತನದ ಬಜೆಟ್ ವಿಮಾನಯಾನ ಸಂಸ್ಥೆಯಾದ 'ಫ್ಲೈದುಬೈ' ಸಂಸ್ಥೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಭಾರತದ 'ಸ್ಪೈಸ್‌ಜೆಟ್' ವಿಮಾನಯಾನ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಕ್ಯಾಪ್ಟನ್ ಮಚ್ಛಾರ್ ಅವರು ಬೋಯಿಂಗ್ 737 ವಿಮಾನಗಳನ್ನು ಹಾರಿಸುವಲ್ಲಿ 13ಕ್ಕೂ ಹೆಚ್ಚು ವರ್ಷಗಳ ವಾಣಿಜ್ಯ ವಿಮಾನ ಚಾಲನೆಯ ಅನುಭವವನ್ನು ಹೊಂದಿದ್ದಾರೆ. ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸುದೀರ್ಘ ಸೇವೆ ಸಲ್ಲಿಸಿದ್ದು, ಒಟ್ಟು 9,750ಕ್ಕೂ ಹೆಚ್ಚು ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ಕ್ಯಾಪ್ಟನ್ ಮಚ್ಛಾರ್ ಅವರು 2011ರಲ್ಲಿ ಸ್ಪೈಸ್‌ ಜೆಟ್‌ಗೆ ಸೇರ್ಪಡೆಯಾಗಿದ್ದರು. ಅಲ್ಲಿ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಮತ್ತು ಸೀನಿಯರ್ ಕಮಾಂಡರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಜೂನ್ 2022ರಲ್ಲಿ ಅವರು ಸ್ಪೈಸ್‌ಜೆಟ್ ತೊರೆದು, ಡೈರೆಕ್ಟ್ ಎಂಟ್ರಿ ಕ್ಯಾಪ್ಟನ್ ಆಗಿ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಯಾದರು. ಅವರ ಸಹೋದರ ಕೂಡ ಇತ್ತೀಚೆಗಷ್ಟೇ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಗೊಂಡಿದ್ದಾರೆ.

ಟ್ರಂಪ್ ಹೇಳಿದ್ದೇನು?

ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಟ್ರಂಪ್ ಅವರು, ಈ ಭೀಕರ ಘಟನೆಯ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು ಮತ್ತು ತುರ್ತು ಸಂದರ್ಭದಲ್ಲಿ ಸಾಹಸ ಮೆರೆದ ಪೈಲಟ್ ಮಚ್ಛಾರ್ ಅವರ ಧೈರ್ಯವನ್ನು ಶ್ಲಾಘಿಸಿದರು.

ಟ್ರಂಪ್ ಮಾತನಾಡಿ, 'ಆ ಸಹ-ಪೈಲಟ್ ಬಹುಶಃ ಒಬ್ಬ ಉಗ್ರನಾಗಿದ್ದ... ಆತ ಕ್ಯಾಪ್ಟನ್ ಪೈಲಟ್ ಮಚ್ಛಾರ್ ಅವರಿಗೆ ಚಾಕುವಿನಿಂದ ಇರಿದಿದ್ದು, ಅವರ ಸ್ಥಿತಿ ಪ್ರಸ್ತುತ ಗಂಭೀರವಾಗಿದೆ. ಆದರೆ ಅಷ್ಟು ತೀವ್ರ ಗಾಯಗಳ ನಡುವೆಯೂ ಕಾಕ್‌ಪಿಟ್ ಬಾಗಿಲನ್ನು ತೆರೆದ ಅವರ ಸಮಯಪ್ರಜ್ಞೆ ಮತ್ತು ಧೈರ್ಯ ನಿಜಕ್ಕೂ ಅದ್ಭುತ,' ಎಂದು ಶ್ಲಾಘಿಸಿದರು.

ದಾಳಿ ನಡೆಸಿದ ಸಹ-ಪೈಲಟ್‌ನನ್ನು ಮಟ್ಟಹಾಕಲು ನೆರವಾದ ಇಸ್ರೇಲ್ ಪ್ರಜೆಯನ್ನೂ ಅಮೆರಿಕ ಅಧ್ಯಕ್ಷರು ಕೊಂಡಾಡಿದರು. 'ವಿಮಾನವು ತೀವ್ರವಾಗಿ ಕೆಳಕ್ಕೆ ಕುಸಿಯುತ್ತಿದ್ದಾಗ, ಪೈಲಟ್‌ನ ಕೂಗನ್ನು ಕೇಳಿದ ಇಸ್ರೇಲ್ ಪ್ರಜೆಯೊಬ್ಬರು ಮತ್ತೊಬ್ಬ ಸಿಬ್ಬಂದಿಯೊಂದಿಗೆ ಕಾಕ್‌ಪಿಟ್‌ಗೆ ನುಗ್ಗಿದರು. ಈ ವಿಷಯವನ್ನು ನೆತನ್ಯಾಹು ಅವರಿಂದ ಕೇಳಿದೆ. ಆ ನಿಜವಾದ ಹೀರೊಗಳು ತಕ್ಷಣವೇ ರಕ್ಷಣೆಗೆ ಧಾವಿಸದಿದ್ದರೆ ಆ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪುತ್ತಿದ್ದರು,' ಎಂದು ಟ್ರಂಪ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+