Flydubai Flight: ಹೈಜಾಕ್ ಸಂದೇಶ ರವಾನೆ, ಆದರೆ 'ಫ್ಲೈದುಬೈ' ವಿಮಾನ ತುರ್ತು ಲ್ಯಾಂಡಿಂಗ್‌ಗೆ ಕಾರಣವೇ ಬೇರೆ!
ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ 'ಫ್ಲೈದುಬೈ' (flydubai) ವಿಮಾನದಿಂದ 'ಹೈಜಾಕ್ ಅಲರ್ಟ್' ಸಂದೇಶ ರವಾನೆ ಆಗಿದ್ದು, ಸೌದಿ ಅರೆಬಿಯಾದಲ್ಲಿ ತುರ್ತು ಲ್ಯಾಂಡಿಂಗ್ ಆದ ಘಟನೆ ಇಂದು ಬುಧವಾರ (ಸೆಪ್ಟೆಂಬರ್ 30) ನಡೆದಿದೆ. ಇದಾಗುತ್ತಿದ್ದಂತೆ ಇಸ್ರೇಲ್ ಭದ್ರತಾ ಪಡೆಗಳು ಅಲರ್ಟ್ ಆಗಿವೆ. ಅಷ್ಟಕ್ಕೂ ಆಗಿದ್ದೇನು?
ಇಸ್ರೇಲ್ ಮಾಧ್ಯಮಗಳ ವರದಿ ಪ್ರಕಾರ, 'FZ1073 ಫ್ಲೈದುಬೈ' ವಿಮಾನವು ದುಬೈನಿಂದ ಸುಮಾರು 180 ಪ್ರಯಾಣಿಕರನ್ನು ಹೊತ್ತು ಹಾರಾಟ ಆರಂಭಿಸಿತ್ತು. ಟೇಕ್ ಆಫ್ ಆದ ಸ್ವಲ್ಪ ಹೊತ್ತಿನ ನಂತರ ನಿಗದಿತ ಮಾರ್ಗದ ಬದಲಾಗಿ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ಇದಕ್ಕೆ ವಿಮಾನದಿಂದ ರವಾನೆಯಾದ 'ಫ್ಲೈಟ್ ಹೈಜಾಕ್' ಸಂದೇಶ ಕಾರಣ ಎನ್ನಲಾಗಿದೆ.

'7700' ಬಟನ್ ಒತ್ತಿದ ಸಿಬ್ಬಂದಿ
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಲ್ ಅವೀವ್ ಸಮೀಪದ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಿಮಾನದಲ್ಲಿನ ಇಬ್ಬರು ಪೈಲಟ್‌ಗಳ ಮಧ್ಯ ಜಗಳ ನಡೆದಿದೆ. ಈ ವೇಳೆ ಇಬ್ಬರಲ್ಲಿ ಒಬ್ಬರು ಹೈಜಾಕ್ ವೇಳೆ ಸಂದೇಶ ಕಳುಹಿಸಲು ಇರುವ '7700' ಬಟನ್ ಅನ್ನು ಒತ್ತಿದ್ದಾರೆ. ಹೀಗಾಗಿ ಫ್ಲೈಟ್ ಹೈಜಾಕ್ ಸಂಕೇತ ವಿಮಾನ ಸಂಸ್ಥೆ, ನಿಲ್ದಾಣ ಪ್ರಾಧಿಕಾರಕ್ಕೆ ರವಾನೆ ಆಗಿದೆ. ಇದು ವಿಮಾನ ಹೈಜಾಕ್ ಸಂದೇಶವಾದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಬ್ಬರು ಪೈಲಟ್ ಜಗಳ ಮಧ್ಯೆ ವಿಮಾನವು ತುರ್ತು ಭೂಸ್ಪರ್ಶ ಮಾಡಿತು. ಯಾವುದೇ ಅಪಹರಣ ಪ್ರಯತ್ನ ನಡೆದಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿ ಆಗಿದೆ.
ಕಾರ್ಯಾಚರಣೆಗೆ ಇಳಿದೇ ಬಿಟ್ಟ ಇಸ್ರೇಲ್ ಪಡೆ
ಫ್ಲೈಟ್ ಹೈಜಾಕ್ ಸಂದೇಶ ಬಂದು ವಿಮಾನ ತುರ್ತು ಭೂಸ್ಪರ್ಶ ಮಾಡುತ್ತಿದ್ದಂತೆ ಇಸ್ರೇಲಿ ವಾಯುಪಡೆಯ ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಲಾಯಿತು. ಈ ವಿಮಾನಗಳು ಕೇವಲ ಎರಡು ನಿಮಿಷಗಳಲ್ಲಿ 34,000 ಅಡಿಗಳಿಂದ ಸುಮಾರು 16,600 ಅಡಿಗಳಷ್ಟು ಎತ್ತರಕ್ಕೆ ಹಾರಿ ಕಾರ್ಯಾಚರಣೆಗೆ ಇಳಿದವು ಎಂದು ಇಸ್ರೇಲ್ ಮಾಧ್ಯಮಗಳು ತಿಳಿಸಿವೆ. ಇನ್ನೂ 'ಫ್ಲೈಟ್ ರಾಡಾರ್' ಪ್ರಕಾರ ವಿಮಾನ ಹಾರಾಟ ಆರಂಭಿಸಿದ ಸುಮಾರು 2.5 ಗಂಟೆಗಳಲ್ಲಿ ಈ ಸಂದೇಶ ಮತ್ತು ತುರ್ತು ಲ್ಯಾಂಡಿಂಗ್ ಘಟನೆ ನಡೆದಿದೆ. ವಿಮಾನ ಪೈಲಟ್ ಸೀಟುಗಳ ಹಿಂದೆ ಕೂತಿದ್ದ ಪ್ರಯಾಣಿಕರು ಈ ಇಬ್ಬರ ಜಗಳದ ವಾಗ್ವಾದವನ್ನು ಕೇಳಿಸಿಕೊಂಡಿದ್ದಾರೆ. ಕೂಡಲೇ ಅವರು ಇಸ್ರೇಲ್‌ನ 'ಚಾನೆಲ್ 12' ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಅಂತಲೂ ವರದಿ ಆಗಿದೆ.
ಕೂಡಲೇ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತುರ್ತು ಸಭೆ ಇವತ್ತಿನ ಬೆಳವಣಿಗೆ ಕುರಿತು ಪರಿಶೀಲಿಸಿದರು. ಘಟನೆ ನಿಯಂತ್ರಣದಲ್ಲಿದೆ ಮತ್ತು ಇಸ್ರೇಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಸ್ರೇಲ್‌ಗೆ ಹಿಂದಿರುಗಿಸಲು ಪ್ರಸ್ತುತ ಎಲ್ಲಾ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
WATCH: Terrifying footage of the incident, recorded from a passenger window aboard the aircraft flydubai.
— Open Source Intel (@Osint613) September 30, 2026
- Yedioth Ahronot News. https://t.co/Y4Fp7vUirI pic.twitter.com/ySOKQzuz3l
ಪೈಲಟ್ ಸಿಬ್ಬಂದಿ ಜಗಳದಿಂದ ತುರ್ತು ಲ್ಯಾಂಡಿಂಗ್ ಇದೇನು ಮೊದಲಲ್ಲ. 2022 ರಲ್ಲಿ ಜಿನೀವಾ-ಪ್ಯಾರಿಸ್ ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ಜಗಳವಾಡಿದ ನಂತರ ಇಬ್ಬರು ಏರ್ ಫ್ರಾನ್ಸ್ ಪೈಲಟ್ ಕೂಡಲೇ ಅಮಾನತು ಮಾಡಿ ಆದೇಶಿಸಲಾಗಿತ್ತು. ಅಂದಿನ ಘಟನೆ ಗಮನಿಸಿದರೆ ದುಬೈ ವಿಮಾನವನ್ನು ಬೇರೆ ಮಾರ್ಗಕ್ಕೆ ತಿರುಗಿಸದೇ ಗಮ್ಯ ಸ್ಥಾನಕ್ಕೆ ತಲುಬಹುದಿತ್ತು.


Click it and Unblock the Notifications
