• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಿನ್ಲೆಂಡ್‌ನ ನೂತನ ಮಹಿಳಾ ಪ್ರಧಾನಿ ವಯಸ್ಸು 34!

|

ಹೆಲ್ಸಿಂಕಿ, ಡಿಸೆಂಬರ್ 10: ಫಿನ್ಲೆಂಡ್‌ನ 34 ಸನ್ನಾ ಮರಿನ್ ಜಗತ್ತಿನ ಅತ್ಯಂತ ಕಿರಿಯ ಹಾಲಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮರಿನ್ ಅವರು ಮಂಗಳವಾರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಫಿನ್ಲೆಂಡ್‌ನ ಪ್ರಬಲ ಸೋಷಿಯಲ್ ಡೆಮಾಕ್ರಾಟ್ಸ್ ಪಕ್ಷದ ಸನ್ನಾ ಮರಿನ್ ಅವರನ್ನು ಭಾನುವಾರ ಏಕೈಕ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಅವರ ನಂತರದ ಹುದ್ದೆ, ಅವರಿಗಿಂತ ಎರಡು ವರ್ಷಗಳಷ್ಟೇ ಕಿರಿಯ ಮಹಿಳೆಗೆ ದೊರಕಿದೆ. ಸೆಂಟರ್ ಪಾರ್ಟಿಯ ಮುಖ್ಯಸ್ಥೆ ಕಟ್ರಿ ಕುಲ್ಮನಿ (32) ಹಣಕಾಸು ಸಚಿವ ಖಾತೆ ಪಡೆದುಕೊಳ್ಳಲಿದ್ದು, ಹೊಸ ಸಂಪುಟವು ಮಹಿಳಾ ಪ್ರಾಬಲ್ಯದ ಸಂಪುಟವಾಗಿ ಬದಲಾಗಲಿದೆ. ಆದರೆ ರಾಜಕೀಯ ಅನುಭವದ ಕೊರತೆಯಿರುವ ಮರಿನ್ ಯಾವ ರೀತಿ ದೇಶವನ್ನು ನಡೆಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಸರ್ಕಾರ ವಿರೋಧಿ ಪ್ರತಿಭಟನೆ: ಪ್ರಧಾನಮಂತ್ರಿಯಿಂದಲೇ ರಾಜೀನಾಮೆ! ಸರ್ಕಾರ ವಿರೋಧಿ ಪ್ರತಿಭಟನೆ: ಪ್ರಧಾನಮಂತ್ರಿಯಿಂದಲೇ ರಾಜೀನಾಮೆ!

ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನಿ ಅಂಟ್ಟಿ ರಿನ್ನೆ ಆಡಳಿತ ನಿರ್ವಹಣೆ ನಿಭಾಯಿಸುತ್ತಿರುವ ರೀತಿಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದಿರುವುದಾಗಿ ಸೆಂಟರ್ ಪಾರ್ಟಿ ಕಳೆದ ವಾರ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಹೀಗಾಗಿ ರಿನ್ನೆ ಪ್ರಧಾನಿ ಪದವಿಯನ್ನು ತ್ಯಜಿಸಿದ್ದರು.

ನಾಲ್ವರು ಮಹಿಳಾ ಮುಖ್ಯಸ್ಥರು

ನಾಲ್ವರು ಮಹಿಳಾ ಮುಖ್ಯಸ್ಥರು

ಐದು ಪಕ್ಷಗಳು ಇಲ್ಲಿ ಅಧಿಕಾರದಲ್ಲಿದ್ದು, ನಾಲ್ಕು ಪಕ್ಷಗಳಿಗೆ ಮಹಿಳೆಯರೇ ನೇತೃತ್ವ ವಹಿಸಿದ್ದಾರೆ. ರಿನ್ನೆ ಅವರ ರಾಜೀನಾಮೆ ಬಳಿಕವೂ ಈ ಪಕ್ಷಗಳು ಸಮ್ಮಿಶ್ರ ಸರ್ಕಾರವನ್ನು ನಡೆಸಲು ಹಾಗೂ ಹಳೆಯ ಯೋಜನೆಗಳನ್ನು ಮುಂದುವರಿಸಲು ನಿರ್ಧರಿಸಿವೆ. ಅದರೆ ಸಂಪುಟದಲ್ಲಿ ಕೆಲವು ಬದಲಾವಣೆಗಳಿಗೆ ಇಚ್ಛೆ ವ್ಯಕ್ತಪಡಿಸಿವೆ.

ಫಿನ್ಲೆಂಡ್‌ನ ಬೃಹತ್ ಕೈಗಾರಿಕೆಗಳು ಉತ್ಪಾದನೆ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದು, ಕಾರ್ಮಿಕರ ಆಕ್ರೋಶ ಮತ್ತು ಪ್ರತಿಭಟನೆಗಳ ನಡುವೆಯೇ ಮರಿನ್ ಪ್ರಧಾನಿ ಹುದ್ದೆಯನ್ನು ಸ್ವೀಕರಿಸಲಿದ್ದಾರೆ.

27ನೆಯ ವಯಸ್ಸಿಗೇ ರಾಜಕೀಯದ ಅನುಭವ

27ನೆಯ ವಯಸ್ಸಿಗೇ ರಾಜಕೀಯದ ಅನುಭವ

27ನೆಯ ವಯಸ್ಸಿಗೇ ಟ್ಯಾಂಪರ್ ಕೈಗಾರಿಕಾ ಪಟ್ಟಣದ ನಗರ ಸಮಿತಿಯ ಮುಖ್ಯಸ್ಥೆಯಾಗುವ ಮೂಲಕ ಮರಿನ್ ರಾಜಕೀಯ ಬೆಳವಣಿಗೆಯನ್ನು ಕಂಡುಕೊಂಡಿದ್ದರು. ಅಂದಹಾಗೆ 34 ವರ್ಷದ ಮರಿನ್, 22 ತಿಂಗಳ ಹೆಣ್ಣುಮಗು ಹೊಂದಿದ್ದಾರೆ.

'ನಾನು ಎಂದಿಗೂ ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ಆಲೋಚಿಸಿದವಳಲ್ಲ. ಆದರೆ ನಾನು ರಾಜಕೀಯಕ್ಕೆ ಬರುವಂತೆ ಮಾಡಿದ ಸಮಸ್ಯೆಗಳು ಹಾಗೂ ನಾವು ಚುನಾವಣೆಯಲ್ಲಿ ನಂಬಿಕೆ ಇರಿಸಿರುವ ಕಾರಣಗಳ ಬಗ್ಗೆ ಚಿಂತಿಸುತ್ತೇನೆ' ಎಂದು ಮರಿನ್ ಹೇಳಿದ್ದಾರೆ. ರಿನ್ನೆ ಅವರ ಸರ್ಕಾರದಲ್ಲಿ ಮರಿನ್ ಸಾರಿಗೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು.

ಶ್ರೀಲಂಕಾದಲ್ಲಿ ಅಣ್ಣ-ತಮ್ಮನ ದರ್ಬಾರ್ಶ್ರೀಲಂಕಾದಲ್ಲಿ ಅಣ್ಣ-ತಮ್ಮನ ದರ್ಬಾರ್

ಮೂರನೇ ಮಹಿಳಾ ಪ್ರಧಾನಿ

ಮೂರನೇ ಮಹಿಳಾ ಪ್ರಧಾನಿ

ಯುರೋಪ್‌ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಮೊದಲ ದೇಶಗಳಲ್ಲಿ ಫಿನ್ಲೆಂಡ್ ಒಂದು. 1906ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. 1907ರಲ್ಲಿಯೇ ಮಹಿಳೆಯರನ್ನು ಸಂಸತ್‌ಗೆ ಆಯ್ಕೆ ಮಾಡುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿತ್ತು. ಮರಿನ್ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಮೂರನೇ ಮಹಿಳಾ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.

ಫಿನ್ಲೆಂಡ್‌ಗೆ ವಿಶೇಷವೇನಲ್ಲ

ಫಿನ್ಲೆಂಡ್‌ಗೆ ವಿಶೇಷವೇನಲ್ಲ

'ಮರಿನ್ ಮತ್ತು ಅವರ ಸಂಪುಟದ ಸಚಿವರು ತೀರಾ ಕಿರಿಯರು ಎಂಬುದು ಜಗತ್ತಿಗೆ ಸೋಜಿಗ ಉಂಟುಮಾಡಿರುವ ಸಂಗತಿ. ಆದರೆ ಫಿನ್ಲೆಂಡ್‌ಗೆ ಇದು ವಿಶೇಷವೇನಲ್ಲ' ಎಂದು ಅಲ್ಲಿನ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಸೋಷಿಯಲ್ ಡೆಮಾಕ್ರಟಿಕ್‌ನ ಮುಖ್ಯಸ್ಥರಾಗಿರುವ ರಿನ್ನೆ, ಜೂನ್‌ನಲ್ಲಿ ನಡೆಯಲಿರುವ ಪಕ್ಷದ ಸಮಾವೇಶದವರೆಗೂ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಯುವ ಮಹಿಳಾ ಸರ್ಕಾರ

ಯುವ ಮಹಿಳಾ ಸರ್ಕಾರ

ಮರಿನ್ ನೇತೃತ್ವದ ಹೊಸ ಸರ್ಕಾರವು 12 ಮಹಿಳಾ ಮತ್ತು 7 ಪುರುಷ ಸಚಿವರನ್ನು ಒಳಗೊಂಡಿರಲಿದೆ. ಸೆಂಟರ್ ಪಾರ್ಟಿಯ 32 ವರ್ಷದ ಕುಲ್ಮುನಿ ಕಳೆದ ಸರ್ಕಾರದಲ್ಲಿ ಆರ್ಥಿಕ ವ್ಯವಹಾರಗಳ ಸಚಿವ ಸ್ಥಾನದ ಕಿರಿಯ ಹುದ್ದೆ ಪಡೆದಿದ್ದರು. ಈಗ ಅವರು 53 ವರ್ಷದ ಹಣಕಾಸು ಸಚಿವ ಮಿಕಾ ಲಿಂಟಿಲಾ ಸ್ಥಾನಕ್ಕೆ ನೇಮಕವಾಗಿದ್ದಾರೆ. ಮಾಜಿ ಪ್ರಧಾನಿ ಜುಹಾ ಸಿಪಿಲಾ ಅವರಿಂದ ಪಕ್ಷದ ನೇತೃತ್ವವನ್ನು ಕುಲ್ಮುನಿ ಸೆಪ್ಟೆಂಬರ್‌ನಲ್ಲಿ ಪಡೆದುಕೊಂಡಿದ್ದರು.

ಗ್ರೀನ್ ಲೀಗ್ ಪಾರ್ಟಿ ನಾಯಕಿ ಮಾರಿಯಾ ಓಹಿಸಾಲೋ (34) ಆಂತರಿಕ ಸಚಿವೆಯಾಗಿ ಈ ಸರ್ಕಾರದಲ್ಲಿಯೂ ಮುಂದುವರಿಯಲಿದ್ದಾರೆ. ಲೆಫ್ಟ್ ಅಲಯನ್ಸ್‌ನ ಅಧ್ಯಕ್ಷೆ ಲಿ ಆಂಡರ್ಸನ್ (32) ಶಿಕ್ಷಣ ಸಚಿವೆಯಾಗಿ ಹಾಗೂ ಸ್ವೀಡಿಷ್ ಪೀಪಲ್ಸ್ ಪಾರ್ಟಿಯ ಅನ್ನಾ-ಮಾಜಾ ಹೆನ್ರಿಕ್‌ಸನ್ (55) ನ್ಯಾಯಾಂಗ ಸಚಿವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಿರಿಯ ಪ್ರಧಾನಿಗಳ ಪಟ್ಟಿ

ಕಿರಿಯ ಪ್ರಧಾನಿಗಳ ಪಟ್ಟಿ

ಉಕ್ರೇನ್‌ನ ಒಲೆಕ್ಸಿ ಹೊಂಚರುಕ್ (35) ಹಾಲಿ ಕಿರಿಯ ಪ್ರಧಾನಿ ಎನಿಸಿದ್ದಾರೆ. ನ್ಯೂಜಿಲೆಂಡ್‌ನ ಜಸಿಂಡಾ ಆಡರ್ನ್ (39), 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತೊಬ್ಬ ಮಹಿಳಾ ಪ್ರಧಾನಿಯಾಗಿದ್ದಾರೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (35) ತಮ್ಮ 27ನೇ ವಯಸ್ಸಿಗೆ ದೇಶದ ಅಧಿಕಾರ ಹಿಡಿದರೂ ಅವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದವರಲ್ಲ. ಇನ್ನು ಐರ್ಲೆಂಡ್ ಪ್ರಧಾನಿ ಲಿಯೋ ವರಾಡ್ಕರ್ (40), ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರಾನ್ (41), ಇಸ್ಟೋನಿಯಾ ಪ್ರಧಾನಿ ಜೂರಿ ರಾಟಾಸ್ (41) ಮತ್ತು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸನ್ (42) ಇತರೆ ಹಾಲಿ ಕಿರಿಯ ಪ್ರಧಾನಿಗಳಾಗಿದ್ದಾರೆ.

ಬ್ರಿಟನ್‌ನ ವಿಲಿಯಮ್ ಪಿಟ್ ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಅವರು 1783ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದರು. ಮಲೇಷ್ಯಾದ ಮಹತಿರ್ ಮೊಹಮದ್ (94) ಅತ್ಯಂತ ಹಿರಿಯ ಹಾಲಿ ಪ್ರಧಾನಿ ಎನಿಸಿದ್ದಾರೆ.

English summary
Finland's Social Demacrats party's young leader Sanna Marin (34) will become tha world's youngest serving Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X