ವಿಡಿಯೋ: ಪಾಕಿಸ್ತಾನದ ಸದನದಲ್ಲಿ ಶಾಸಕಿಯರ ನಡುವೆ ಕಪಾಳಮೋಕ್ಷ
ಲಾಹೋರ್ ಏಪ್ರಿಲ್ 4: ಪಾಕಿಸ್ತಾನದ ರಾಜಕೀಯ ಗೊಂದಲದ ನಡುವೆಯೇ ಹೈವೋಲ್ಟೇಜ್ ನಾಟಕ ಕಂಡುಬಂದಿದೆ. ಪಾಕಿಸ್ತಾನಿ ಪಂಜಾಬ್ ವಿಧಾನಸಭೆಯ ಶಾಸಕಿಯರ ನಡುವೆ ವಾಗ್ವಾದ ನಡೆದಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಹೆಚ್ಚಾದಾಗ ತೀವ್ರ ಮಾರಾಮಾರಿ ನಡೆದಿದೆ. ಹೆಂಗಸರು ಒಬ್ಬರಿಗೊಬ್ಬರು ಕಪಾಳ ಮೋಕ್ಷ ಮಾಡತೊಡಗಿದ್ದಾರೆ. ಈ ನಾಯಕಿಯರ ಪರಸ್ಪರ ಹೊಡೆದಾಟ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯರ ನಡುವೆ ಇಂತಹ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಈ ಘಟನೆಯ ಹಿಂದೆ ಇಮ್ರಾನ್ ಸರ್ಕಾರ ಪ್ರತಿಪಕ್ಷಗಳ ಜತೆ ವಾಗ್ವಾದ ನಡೆಸಿರುವುದು ಸ್ಪಷ್ಟವಾಗಿದೆ. ಈ ವಾಗ್ವಾದದ ವೇಳೆ ಹಲವು ಪಕ್ಷಗಳ ಮುಖಂಡರು ಸದನದೊಳಗೆ ಇದ್ದರು ಎಂದು ತಿಳಿದುಬಂದಿದೆ. ಸದನದಲ್ಲಿ ಪುರುಷರು ಮತ್ತು ಮಹಿಳೆಯರೂ ಸೇರಿದ್ದರು. ಈ ಸಮಯದಲ್ಲಿ ಮಹಿಳಾ ಶಾಸಕಿಯರ ನಡುವೆ ಕೆಲವು ವಿಷಯದ ಮೇಲೆ ಜಗಳ ಪ್ರಾರಂಭವಾಗಿದೆ. ಜಗಳ ಯಾರೇ ಬಂದು ತಡೆದರು ಅದು ಶಾಂತವಾಗಲಿಲ್ಲ. ಜಗಳ ವಾಗ್ವಾದ ಹೆಚ್ಚಾಗುತ್ತಲೇ ಹತ್ತಾರು ಮಸ್ಲೀಂ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸದನದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಕೆಲವರು ಓಡಲು ಪ್ರಾರಂಭಿಸಿದಾಗ ಹಿಂದೆಯಿದ್ದವರು ಪಂಚ್‌ಗಳನ್ನು ನೀಡಿರುವ ದೃಶ್ಯ ಸೆರೆಯಾಗಿದೆ.
Scenes from the Pakistani Punjab's Assembly as opposition and government lawmakers fight it out with bare hands. The provincial assembly was to vote today to elect the new leader of the house. pic.twitter.com/oVdHBvYLxN
— Sidhant Sibal (@sidhant) April 3, 2022
ಶಾಸಕರ ನಡುವಿನ ವಾಗ್ವಾದವನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ವಾಗ್ವಾದದಿಂದಾಗಿ ಸದನದ ಮೇಲೆ ಪರಿಣಾಮ ಬೀರಿ ಸಭೆಯನ್ನು ಮುಂದೂಡಬೇಕಾಯಿತು. ಜಗಳದ ಸಮಯದಲ್ಲಿ ಅನೇಕ ಪುರುಷರು ಮಹಿಳೆಯರಿಗೆ ಅಡ್ಡಿಪಡಿಸಿದರು. ಆದರೆ ಪ್ರಯೋಜನವಾಗದೇ ಮಹಿಳೆಯರು ಬಡಿದಾಡಿಕೊಂಡಿದ್ದಾರೆ.

ಈ ಘಟನೆಯ ನಂತರ ಪಂಜಾಬ್ ವಿಧಾನಸಭೆಯ (ಪಿಎ) ಅಧಿವೇಶನಕ್ಕೆ ಅಡ್ಡಿಯುಂಟಾಗಿದೆ ಎಂದು ಪಾಕಿಸ್ತಾನಿ ಸುದ್ದಿ ವಾಹಿನಿಯಲ್ಲಿ ವರದಿಯಾಗಿದೆ. ನೂತನ ಸಭಾನಾಯಕ ಹಾಗೂ ಮುಖ್ಯಮಂತ್ರಿ ಆಯ್ಕೆಗೆ ಮತದಾನ ನಡೆಯದೇ ಏಪ್ರಿಲ್ 6ಕ್ಕೆ ಮುಂದೂಡಲಾಗಿದೆ. ವಾಸ್ತವವಾಗಿ ಇಲ್ಲಿ ಪ್ರಾಂತೀಯ ಅಸೆಂಬ್ಲಿ, ಪಿಟಿಐ ಬೆಂಬಲಿತ ಪಿಎಂಎಲ್-ಕ್ಯೂನ ಚೌಧರಿ ಪರ್ವೇಜ್ ಇಲಾಹಿ ಮತ್ತು ಪಿಎಂಎಲ್-ಎನ್‌ನ ಹಮ್ಜಾ ಶಹಬಾಜ್ ಅವರು ಹೊಸ ನಾಯಕನನ್ನು ಆಯ್ಕೆ ಮಾಡಲು ಮತ ಚಲಾಯಿಸಬೇಕಿತ್ತು. ಈ ಮಧ್ಯೆ ವಿವಾದ ಹುಟ್ಟಿಕೊಂಡಿದೆ ಎಂದು ತಿಳಿದುಬಂದಿದೆ.












Click it and Unblock the Notifications