ರೈತರ ಪ್ರತಿಭಟನೆ: ಭಾರತದ ವಿರುದ್ಧ ವಿಶ್ವಸಂಸ್ಥೆ ಮಾನವಹಕ್ಕು ಕಮಿಷನರ್ ಟೀಕೆ
ವಿಶ್ವಸಂಸ್ಥೆ, ಫೆಬ್ರವರಿ 27: ರೈತರ ಪ್ರತಿಭಟನೆ ಕುರಿತು ವರದಿ ಮಾಡಿದ ಅಥವಾ ಹೇಳಿಕೆ ನೀಡಿದ ಪತ್ರಕರ್ತರು ಹಾಗೂ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಂತಹ ಪ್ರಯತ್ನಗಳು ಅಗತ್ಯ ಮಾನವ ಹಕ್ಕುಗಳ ತತ್ವಗಳ ಕಳವಳಕಾರಿ ದಮನನೀತಿಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಮಿಷೆಲ್ ಬ್ಯಾಚೆಲೆಟ್ ಭಾರತವನ್ನು ಟೀಕಿಸಿದ್ದಾರೆ.
ಭಾರತದಲ್ಲಿನ ಮಾನವಹಕ್ಕುಗಳ ಕುರಿತು ಈ ಹಿಂದೆಯೂ ಬ್ಯಾಚೆಲೆಟ್ ಅವರು ವಾಗ್ದಾಳಿ ನಡೆಸಿದ್ದರು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಾನವ ಹಕ್ಕು ಸಮರ್ಥಕರ ಮೇಲೆ ನಡೆದ ದಾಳಿಗಳು ನಾಗರಿಕ ಸಮಾಜದಲ್ಲಿನ ನಿರ್ಬಂಧಗಳ ಮುಂದುವರಿಕೆಗೆ ಉದಾಹರಣೆಯಾಗಿದೆ. ಇದು ಕಾಶ್ಮೀರದ ಜನತೆಯ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಬ್ಯಾಚೆಲೆಟ್ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಅವರಿಗೆ ಸಮರ್ಪಕ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯ ಕೊರತೆ ಇದೆ ಎಂದು ಭಾರತ ಹೇಳಿದೆ.

ಕೃಷಿ ಕಾಯ್ದೆಗಳು ಸಣ್ಣ ರೈತರ ಪ್ರಯೋಜನಕ್ಕಾಗಿದೆ. ಅಲ್ಲದೆ ಅಂತಹ ರೈತರಿಗೆ ಅನೇಕ ಆಯ್ಕೆಯ ಅವಕಾಶಗಳನ್ನು ನೀಡುತ್ತವೆ. ರೈತರ ಪ್ರತಿಭಟನೆಗೆ ಸರ್ಕಾರರ ಅಪಾರ ಗೌರವ ನೀಡಿದೆ. ಅವರ ಕಳವಳಗಳನ್ನು ಪರಿಹರಿಸಲು ಅನೇಕ ಬಾರಿ ಮಾತುಕತೆಗಳನ್ನ ನಡೆಸಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಭಾರತದ ಕಾಯಂ ಪ್ರತಿನಿಧಿ ಇಂದ್ರಾ ಮಣಿ ಪಾಂಡೆ ಹೇಳಿದ್ದಾರೆ.
'ಈ ಬೆಳವಣಿಗೆಗಳಾಚೆ ಕೆಲವು ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ರೈತರ ಹಕ್ಕುಗಳ ಹೆಸರಿನಲ್ಲಿ ಗಣರಾಜ್ಯದಿನದಂದು ನಡೆದ ಅಪ್ರಚೋದಿತ ಹಿಂಸಾಚಾರದ ಬಗ್ಗೆ ಅವರು ಮಾತನಾಡಿಲ್ಲ. ಯಾವುದೇ ಮಾನವಹಕ್ಕು ಮೌಲ್ಯ ಮಾಪನದಲ್ಲಿ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆ ಮುಖ್ಯವಾಗಿರುತ್ತದೆ. ಆದರೆ ಹೈ ಕಮಿಷನರ್‌ಅವರ ಮೌಖಿಕ ಹೇಳಿಕೆಯು ಈ ಎರಡರ ಕೊರತೆಯನ್ನೂ ತೋರಿಸುತ್ತದೆ' ಎಂದು ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications