ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 'ಎ' ರಕ್ತದ ಗುಂಪಿನ ಮೇಲೆ ಕೊರೊನಾ ಹೆಚ್ಚು ಪರಿಣಾಮ ಬೀರಲಿದೆಯೇ?

|
Google Oneindia Kannada News

ಬೆಂಗಳೂರು, ಮಾರ್ಚ್ 27: ಕೊರೊನಾ ವೈರಸ್ ಎ ರಕ್ತದ ಗುಂಪಿನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು.

ನೀವು ಎ ರಕ್ತದ ಗುಂಪಿನವರಾಗಿದ್ದರೆ ನಿಮಗೆ ಕೊರೊನಾ ತಗುಲುವ ಸಂಭವ ಹೆಚ್ಚು , ಉಳಿದ ಬ್ಲಡ್ ಗ್ರೂಪಿಗೆ ಹೋಲಿಸಿದರೆ ಎ ಬ್ಲಡ್ ಗ್ರೂಪಿನವರಿಗೆ ಸೋಂಕು ಬೇಗ ತಗುಲುತ್ತದೆ ಎಂದು ಚೀನಿ ಸಂಶೋಧಕರೊಬ್ಬರು ಹೇಳಿದ್ದಾರೆ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡಿತ್ತು.

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಕೊರೊನಾ ತವರು ಚೀನಾದ ವುಹಾನ್ ಎಂಬುದು ಎಲ್ಲರಿಗೂ ತಿಳಿದಿದೆ. ವುಹಾನ್ ವಿಶ್ವವಿದ್ಯಾಲಯದಲ್ಲಿರುವ ಝೋಂಗನಾನ್ ಆಸ್ಪತ್ರೆ ಒಳಗೊಂಡಂತೆ ಸಂಶೋಧಕರು ಇತ್ತೀಚೆಗೆ ಅಧ್ಯಯನವನ್ನು ನಡೆಸಿದ್ದಾರೆ. 'ಎ' ಮಾತ್ರವಲ್ಲ 'ಒ' ಗುಂಪಿನವರ ಮೇಲೂ ಕೊರೊನಾ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚೀನಾದಲ್ಲಿರುವ ಮೂವರು ಆಸ್ಪತ್ರೆಗಳ ರೋಗಿಗಳ ರಕ್ತದ ಗುಂಪನ್ನು ವಿಶ್ಲೇಷಿಸಲಾಗಿದೆ. ವುಹಾನ್‌ನ ಎರಡು ಮತ್ತು ಶೆಂಜಾಹೆನ್‌ ಒಂದು ಆಸ್ಪತ್ರೆಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಹಾಗಾದರೆ ನಿಜವಾಗಿಯೂ ಕೊರೊನಾ ವೈರಸ್ ಎ ರಕ್ತದ ಗುಂಪಿನವರ ಮೇಲೆಯೇ ಪರಿಣಾಮ ಬೀರಲಿದೆಯೇ ಎಂಬುದರ ಬಗ್ಗೆ ನಿಜವಾದ ಮಾಹಿತಿ ಇಲ್ಲಿದೆ.

ಅಧ್ಯಯನ ಇನ್ನೂ ದೃಢಪಟ್ಟಿಲ್ಲ

ಅಧ್ಯಯನ ಇನ್ನೂ ದೃಢಪಟ್ಟಿಲ್ಲ

ಗಮನಿಸಬೇಕಾದ ಅಂಶವೆಂದರೆ ರಕ್ತದ ಮಾದರಿಗೂ ಕೊವಿಡ್ 19 ರೋಗಕ್ಕೂ ಸಂಬಂಧವಿದೆ ಎಂಬುದನ್ನು ನಿರೂಪಿಸಲು ಯಾವುದೇ ಬಲವಾದ ಸಾಕ್ಷಿ ಇಲ್ಲ. ವಿಶೇಷವಾಗಿ ಕೊರೊನಾ ಸೋಂಕು ಪ್ರತಿರೋಧಕ ವ್ಯವಸ್ಥೆ ಮತ್ತು ಉಸಿರಾಟದ ತೊಂದರೆಗೆ ಸಂಬಂಧಿಸಿದ ಕಾಯಿಲೆ ಆಗಿರುವುದರಿಂದ ಅದರ ಫಲಿತಾಂಶವೂ ಕೂಡ ವಿಭಿನ್ನವಾಗಿರಲಿದೆ. ಎರಡರ ನಡುವೆ ಸಂಬಂಧವಿದೆ ಎಂದು ಸಾಬೀತುಪಡಿಸಲು ಇನ್ನೂ ಹೆಚ್ಚಿನ ಅಧ್ಯಯದ ಅಗತ್ಯವಿದೆ. ಹೀಗಾಗಿ ಈಗಲೇ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಶೆಂಜಾಹನ್ ಪೀಪಲ್ ಆಸ್ಪತ್ರೆ ಡಾಟಾ ಹೀಗಿದೆ

ಶೆಂಜಾಹನ್ ಪೀಪಲ್ ಆಸ್ಪತ್ರೆ ಡಾಟಾ ಹೀಗಿದೆ

ಶೆಂಜಾಹನ್ ಪೀಪಲ್ ಆಸ್ಪತ್ರೆಯ ಡಾಟಾ ಪ್ರಕಾರ ಸೋಂಕು ತಗುಲಿರದ 23,386ಮಂದಿಯಲ್ಲಿ 29 ರಷ್ಟು ಎ ಮತ್ತು 39ರಷ್ಟು ಒ ಗುಂಪಿನವರಿದ್ದರು. 285 ಕೊವಿಡ್ 19 ರೋಗಿಗಳಲ್ಲಿ 28.8 ರಷ್ಟು ಎ ಮತ್ತು 28.4 ರಷ್ಟು ಒ ಗುಂಪಿನವರು ಕಂಡು ಬಂದಿದ್ದಾರೆ.

Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?

ಒ ರಕ್ತದ ಗುಂಪಿನವರು ಉಳಿದವರಿಗಿಂತ ಹೆಚ್ಚಿದ್ದಾರೆ

ಒ ರಕ್ತದ ಗುಂಪಿನವರು ಉಳಿದವರಿಗಿಂತ ಹೆಚ್ಚಿದ್ದಾರೆ

ಸಾಮಾನ್ಯವಾಗಿ ಒ ರಕ್ತದ ಗುಂಪಿನವರು ಉಳಿದವರಿಗಿಂತ ಹೆಚ್ಚಿದ್ದಾರೆ. ಉದಾಹರಣೆಗೆ ಯುನೈಟೆಡ್ ಕಿಂಗ್‌ಡಮ್ ನಲ್ಲಿ ಶೇ.48 ರಷ್ಟು ಮಂದಿ ಒ ಗುಂಪಿನವರಿದ್ದರೆ , ಶೇ.38, ಶೇ10, ಶೇ.3 ಕ್ರಮವಾಗಿ ಎ,ಬಿ ಮತ್ತು ಎಬಿ ಗುಂಪಿನವರಾಗಿದ್ದಾರೆ. ರಕ್ತದಾನ ಮಾಡುವಾಗಲಂತೂ ರಕ್ತದ ಗುಂಪು ತುಂಬಾ ಪ್ರಮುಖ ಪಾತ್ರವಹಿಸುತ್ತದೆ.

ವುಹಾನ್‌ನ ಜಿನಿಂಟಲ್ ಆಸ್ಪತ್ರೆಯ ಮಾಹಿತಿ

ವುಹಾನ್‌ನ ಜಿನಿಂಟಲ್ ಆಸ್ಪತ್ರೆಯ ಮಾಹಿತಿ

ವುಹಾನ್‌ನ ಜಿನಿಂಟಲ್ ಆಸ್ಪತ್ರೆಯಲ್ಲಿ ಕೊವಿಡ್ 19 ತಗುಲಿರದ 3694 ಮಂದಿಯ ರಕ್ತದ ಮಾದರಿಯನ್ನು ಮೊದಲಿಗೆ ಪರೀಕ್ಷಸಲಾಯಿತು. ಇದರಲ್ಲಿ 32 ರಷ್ಟು ಎಗ್ರೂಪ್ ಹಾಗೂ 34 ರಷ್ಟು ಒ ಗ್ರೂಪ್ ನವರಿದ್ದರು. ಸೋಂಕಿತ 1775 ಮಂದಿಯ ರಕ್ತದ ಗುಂಪಿನಲ್ಲಿ ಶೇ.32 ರಷ್ಟು ಎ ಗ್ರೂಪ್ ಮತ್ತು 26 ರಷ್ಟು ಒ ಗ್ರೂಪ್ ರೋಗಿಗಳು ಕಂಡು ಬಂದಿದ್ದಾರೆ. ವುಹಾನ್‌ನ ಮತ್ತೊಂದು ಆಸ್ಪತ್ರೆಯಲ್ಲಿ 113 ಸೋಂಕಿತರಲ್ಲಿ 40 ರಷ್ಟು ಎ ಮತ್ತು 25 ರಷ್ಟು ಒ ಗ್ರೂಪ್ ರೋಗಿಗಳಿದ್ದರು.

ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!

English summary
Fact Check: Not only 'A' but the study also showed that the proportion of people with blood type O who were hospitalized with the virus was significantly lower than the people with blood type O among the general population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X