ಡೊನಾಲ್ಡ್ ಟ್ರಂಪ್ ಜೀವಕ್ಕೆ ಈಗಲೂ ಕಂಟಕ? ಅಮೆರಿಕದಲ್ಲಿ ಮತ್ತೆ ಸಂಚಲನ!
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ, ಕ್ಷಣಕ್ಷಣಕ್ಕೂ ಭಯಾನಕ ತಿರುವು ಪಡೆಯುತ್ತಿದೆ ಎಂಬ ಮಾತುಗಳ ನಡುವೆ. ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯೂ ಆಗಿರುವ ಡೊನಾಲ್ಡ್ ಟ್ರಂಪ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಒಂದು ಬಾರಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಕೊಲೆಗೆ ಪ್ರಯತ್ನ ನಡೆದಿತ್ತು, ಹೀಗಿದ್ದಾಗ ಮತ್ತೊಂದು ಭಯಾನಕ ಸುದ್ದಿ ದಿಢೀರ್ ಹೊರಬಿದ್ದಿದ್ದು ಟ್ರಂಪ್ ಜೀವ ಕಂಟಕದಲ್ಲಿದೆ ಎನ್ನಲಾಗಿದೆ. ಈ ವಿಷಯ ಹೇಳಿದ ವ್ಯಕ್ತಿ ಕೂಡ ಅತ್ಯಂತ ಉನ್ನತ ಮಟ್ಟದಲ್ಲಿ ಇದ್ದವರೇ ಆಗಿದ್ದು, ಪರಿಸ್ಥಿತಿ ಸೂಕ್ಷ್ಮವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದು ಹತ್ಯೆಗೆ ಯತ್ನಿಸಿ ಇನ್ನು ಕೆಲವೇ ದಿನಗಳು ಕಳೆದಿವೆ ಅಷ್ಟೇ, ಹೀಗಿದ್ದಾಗಲೇ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದಿದೆ. ಅದು ಏನು ಅಂದ್ರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯುವ ಒಳಗಾಗಿ ಮತ್ತೊಮ್ಮೆ ಟ್ರಂಪ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಆರೋಪ ಮಾಡಲಾಗಿದೆ. ಈ ಆರೋಪವನ್ನ ಯಾರೊ ಸಾಮಾನ್ಯರು ಮಾಡಿದ್ದರೆ ಏನೋ ಹೇಳಬಹುದಾಗಿತ್ತು, ಆದರೆ ಇಂತಹ ಆರೋಪ ಮಾಡಿದ್ದು ಮಾತ್ರ ಮಾಜಿ ಭದ್ರತಾ ಅಧಿಕಾರಿ. ಹಾಗಾದ್ರೆ ಅವರು ಹೇಳಿದ್ದು ಏನು? ಮುಂದೆ ಓದಿ.

ಅಮೆರಿಕ ಮಾಜಿ ಅಧ್ಯಕ್ಷರಿಗೆ ಜೀವ ಭಯ?
ಅಂದಹಾಗೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ಜುಲೈ 13 ರಂದು ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಪ್ರಚಾರ ನಡೆಸುವಾಗ ನಡೆದಿದ್ದ ದಾಳಿ ಕೊನೆ ಅಲ್ಲ, ಯಾಕಂದ್ರೆ ಅವರ ಮೇಲೆ ಮತ್ತಷ್ಟು ಇದೇ ರೀತಿಯ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತಾಗಿ ಮಾಜಿ ಭದ್ರತಾ ಅಧಿಕಾರಿ ನಿಡಿದ ಹೇಳಿಕೆ ಇದೀಗ ಸಂಚಲನ ಸೃಷ್ಟಿ ಮಾಡುತ್ತಿದ್ದು, ಈ ಹಿನ್ನೆಲೆ ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತೆಯನ್ನ ಮತ್ತಷ್ಟು ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ. ಹಾಗೇ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆದು, ಫಲಿತಾಂಶ ಬರುವ ತನಕವು ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗಿದೆ.
ಜೀವ ಉಳಿಸಿದ್ದ ಭದ್ರತಾ ಸಿಬ್ಬಂದಿ
ಮತ್ತೊಂದು ಕಡೆ ಟ್ರಂಪ್ ತಮ್ಮ ಮೇಲೆ ನಡೆದ ದಾಳಿ ಆಧಾರದಲ್ಲೇ ಪ್ರಚಾರ ನಡೆಸಿದ್ದರು. ಅಮೆರಿಕ ಮಾಜಿ ಅಧ್ಯಕ್ಷ & 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆದ ಡೊನಾಲ್ಡ್ ಟ್ರಂಪ್ ಈ ಕುರಿತು ರೊಚ್ಚಿಗೆದ್ದಿದ್ರು. ಇದಕ್ಕೆ ಕಾರಣ ಆಗಿದ್ದು ಅವರ ಮೇಲೆ ಕೆಲ ದಿನಗಳ ಹಿಂದೆ ನಡೆದಿದ್ದ ದಾಳಿ. ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ನಡೆಸುವಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು ಹೀಗಿದ್ದಾಗ ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ, ತಕ್ಷಣವೆ ವೇದಿಕೆ ಸಮೀಪ ಓಡಿ ಬಂದು ಟ್ರಂಪ್ ಅವರನ್ನ ರಕ್ಷಣೆ ಮಾಡಿ ಜೀವ ಉಳಿಸಿದ್ದರು.












Click it and Unblock the Notifications