• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಟಿ ಕೋಟಿ ಜನರಿಗೆ ‘ಕೊರೊನಾ’ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆ

|

ಡೆಡ್ಲಿ ಕೊರೊನಾ ಲಕ್ಷಾಂತರ ಜನರನ್ನು ಬಲಿಪಡೆದಿದೆ. ಕೋಟ್ಯಂತರ ಜನರಿಗೆ ಈ ಮಹಾಮಾರಿ ವಕ್ಕರಿಸಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ 'ಜೀವ ಉಳಿಸಿಕೊಂಡವನೇ ಮಹಾ ಶೂರ' ಎಂಬಂತಾಗಿದೆ. ಅದರಲ್ಲೂ ಅಭಿವೃದ್ಧಿಯ ಅಮಲಿನಲ್ಲಿ ತೇಲುತ್ತಿದ್ದ ಯುರೋಪ್ ಖಂಡಕ್ಕೆ ಕೊರೊನಾ ಮರ್ಮಾಘಾತ ನೀಡಿದೆ. ಈಗಾಗ್ಲೇ ಲಕ್ಷ ಲಕ್ಷ ಯುರೋಪಿಯನ್ನರು ಕೊರೊನಾಗೆ ಬಲಿಯಾಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ವ್ಯಾಕ್ಸಿನ್ ಒಂದೇ ಜೀವ ಕಾಪಾಡುವ ದೇವರು ಅಂತಾ ಯುರೋಪಿಯನ್ನರು ಜಪ ಮಾಡುತ್ತಿದ್ದರು. ಅವರ ಆಸೆ ಈಡೇರಿಸಲು 'ಯುರೋಪಿಯನ್ ಯೂನಿಯನ್' ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಸುಮಾರು 74 ಕೋಟಿ ಜನರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹೊಸ ಕೊರೊನಾವೈರಸ್ 8 ಯೂರೋಪಿಯನ್ ರಾಷ್ಟ್ರಗಳಲ್ಲಿ ಪತ್ತೆ: ಕಿರಿಯ ವಯಸ್ಸಿನವರಲ್ಲಿ ಹೆಚ್ಚು ಹರಡುತ್ತಿದೆ!

ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 27 ರಾಷ್ಟ್ರಗಳ ಸುಮಾರು 74 ಕೋಟಿ ಜನರಿಗೆ ಸಾಮೂಹಿಕವಾಗಿ ಲಸಿಕೆ ವಿತರಿಸುವ ಕೆಲಸ ಶನಿವಾರದಿಂದ ಆರಂಭವಾಗಿದೆ. ಇದು ಕೊರೊನಾ ಭಯದಲ್ಲಿ ನಲುಗಿರುವ ಯುರೋಪ್ ಜನರಿಗೆ ಒಂದಷ್ಟು ಧೈರ್ಯ ತಂದಿದ್ದು, ಸದ್ಯದ ಸ್ಥಿತಿ ನಿಯಂತ್ರಣಕ್ಕೆ 'ಯುರೋಪಿಯನ್ ಯೂನಿಯನ್' ಪಡಬಾರದಷ್ಟು ಕಷ್ಟ ಪಡುತ್ತಿದೆ.

 ಬ್ರಿಟನ್ ಜನರಿಗೆ ಲಸಿಕೆ ಸಿಕ್ಕಿದೆ

ಬ್ರಿಟನ್ ಜನರಿಗೆ ಲಸಿಕೆ ಸಿಕ್ಕಿದೆ

ಕೊರೊನಾ ಕೂಪದಲ್ಲಿ ನರಳುತ್ತಿರುವ ಬ್ರಿಟನ್‌ನಲ್ಲಿ ಡಿಸೆಂಬರ್ 8ರಿಂದಲೇ ಸಾಮೂಹಿಕ ಲಸಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಹೀಗೆ ಲಸಿಕೆ ವಿತರಣೆ ಕಾರ್ಯ ಆರಂಭವಾಗಿ 10 ದಿನ ಕಳೆಯುವ ಒಳಗೆ ಕೊರೊನಾ ವೈರಸ್ ರೂಪಾಂತರ ಹೊಂದಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಈಗಾಗಲೇ ಬ್ರಿಟನ್ ‘ಯುರೋಪಿಯನ್ ಯೂನಿಯನ್' ಬಿಟ್ಟು ಹೊರಗೆ ಬಂದಿದೆ. ಹೀಗಾಗಿ ತನ್ನ ಪ್ರಜೆಗಳಿಗೆ ಬೇಕಾದ ವ್ಯಾಕ್ಸಿನ್‌ಗಳನ್ನ ಬ್ರಿಟನ್ ಸ್ವಂತ ಹಣದಿಂದ ಖರೀದಿಸಿದೆ. ಆದರೆ ‘ಯುರೋಪಿಯನ್ ಯೂನಿಯನ್' ಒಗ್ಗಟ್ಟಿನಿಂದ ಲಸಿಕೆ ಖರೀದಿ ಮಾಡಿದೆ.

ಒಟ್ಟು 58 ಲಸಿಕೆಗಳ ಪ್ರಯೋಗ..!

ಒಟ್ಟು 58 ಲಸಿಕೆಗಳ ಪ್ರಯೋಗ..!

ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬಾರದು ಎಂಬ ಮಾತಿದೆ. ಕೊರೊನಾ ವೈರಸ್‌ನ ವಿಚಾರದಲ್ಲಿ ಈ ಮಾತು ಅಕ್ಷರಶಃ ಸತ್ಯ. ಕೊರೊನಾ ಸೋಂಕನ್ನ ಅಷ್ಟು ಸುಲಭವಾಗಿ ಭೂಮಿಯಿಂದ ತೊಲಗಿಸಲು ಸಾಧ್ಯವಿಲ್ಲ ಎಂಬುದು ಎಷ್ಟು ಸ್ಪಷ್ಟವೋ, ವ್ಯಾಕ್ಸಿನ್ ಪ್ರಯೋಗದಿಂದ ಎಡವಟ್ಟಾದರೆ ಸೋಂಕಿಗಿಂತ ದೊಡ್ಡ ಗಂಡಾಂತರ ಎದುರಾಗಲಿದೆ ಎಂಬುದು ಅಷ್ಟೇ ಸ್ಪಷ್ಟ. ಈಗ ಬೇಕು ಆಗ ಬೇಡ ಎಂಬಂತಹ ಸ್ಥಿತಿ ಕೂಡ ಎದುರಾಗಬಹುದು. ಭೂಮಿಯಲ್ಲಿ ಕೊರೊನಾ ವಕ್ಕರಿಸಿದ ನಂತರ 58 ಲಸಿಕೆಗಳ ಪ್ರಯೋಗ ನಡೆದಿದೆ. ಒಟ್ಟು 58 ಲಸಿಕೆಗಳ ಪೈಕಿ ಕೊನೇ ಹಂತಕ್ಕೆ ಬಂದಿರುವುದು ಕೇವಲ 13 ಲಸಿಕೆಗಳು. ಏಕೆಂದರೆ ಔಷಧಕ್ಕೂ, ಲಸಿಕೆ (Vaccine)ಗಳಿಗೂ ಭಾರಿ ವ್ಯತ್ಯಾಸವಿದೆ. ಈ ಔಷಧಗಳನ್ನ ಹೇಗಾದರೂ ನಿಭಾಯಿಸಬಹುದು, ಆದರೆ ಲಸಿಕೆಗಳಿಂದ ರಿಯಾಕ್ಷನ್ ಎದುರಾದರೆ ಊಹೆಗೆ ನಿಲುಕದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹೀಗಾಗಿಯೇ ತಜ್ಞರು ಕೊರೊನಾ ವ್ಯಾಕ್ಸಿನ್ ಬಳಕೆಗೂ ಮೊದಲು ಎಚ್ಚರವಾಗಿರಿ ಎಂದು ಸಲಹೆ ನೀಡುತ್ತಿದ್ದಾರೆ.

‘ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?

ರಷ್ಯಾದ ‘ಸ್ಪುಟ್ನಿಕ್-ವಿ’ ಎಷ್ಟು ಸುರಕ್ಷಿತ..?

ರಷ್ಯಾದ ‘ಸ್ಪುಟ್ನಿಕ್-ವಿ’ ಎಷ್ಟು ಸುರಕ್ಷಿತ..?

2019ರ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದಲ್ಲಿ ಪತ್ತೆಯಾದ ಬಳಿಕ, ಈ ವೈರಸ್‌ಗೆ ವಿರುದ್ಧವಾಗಿ ಲಸಿಕೆ ಬಳಸುವುದಕ್ಕೆ ಮೊದಲು ಅನುಮತಿ ನೀಡಿದ ದೇಶ ರಷ್ಯಾ. ‘ಸ್ಪುಟ್ನಿಕ್-ವಿ' ಲಸಿಕೆಯನ್ನ ರಷ್ಯಾ ಅಪ್ರೂವ್ ಮಾಡಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಈ ಲಸಿಕೆಯ ಅಂತಿಮ ಹಂತದ ಪ್ರಯೋಗ ಇನ್ನೂ ಪೂರ್ಣವಾಗಿಲ್ಲ ಎಂದರೆ ನೀವು ನಂಬಲೇಬೇಕು. ಒಂದು ಲಸಿಕೆಯನ್ನು 3 ಹಂತಗಳಲ್ಲಿ ಪ್ರಯೋಗಕ್ಕೆ ಒಳಪಡಿಸಿ, ವಿವಿಧ ರೀತಿಯ ದೇಹಗಳ ಮೇಲೆ ಪರೀಕ್ಷೆ ಮಾಡುತ್ತಾರೆ.

ಏಕೆಂದರೆ ಒಬ್ಬರ ದೇಹ ಪ್ರಕೃತಿಗೂ, ಮತ್ತೊಬ್ಬರ ದೇಹ ಪ್ರಕೃತಿಗೂ ವ್ಯತ್ಯಾಸ ಇರುತ್ತದೆ. ಹೀಗೆ ಕೋಟ್ಯಂತರ ಜನರಿಗೆ ಲಸಿಕೆ ನೀಡುವಾಗ ಒಂದು ಸಮೂಹದ ಮೇಲೆ ಹೊಸ ವ್ಯಾಕ್ಸಿನ್ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಹೀಗೆ 3 ಹಂತಗಳ ಪ್ರಯೋಗದ ನಂತರ ಕೂಡ ಕೆಲವು ಕ್ಲಿನಿಕಲ್ ಟೆಸ್ಟ್ ನಡೆದು, ನಂತರವಷ್ಟೇ ಲಸಿಕೆಯನ್ನ ಬಳಕೆಗೆ ಮುಕ್ತಗೊಳಿಸುತ್ತಾರೆ. ಆದರೆ ರಷ್ಯಾದ ‘ಸ್ಪುಟ್ನಿಕ್-ವಿ' ಲಸಿಕೆಯನ್ನ ತರಾತುರಿಯಲ್ಲಿ, ಪ್ರಾರಂಭಿಕ ಹಂತದಲ್ಲೇ ಅಪ್ರೂವ್ ಮಾಡಿರುವ ಆರೋಪವಿದೆ.

ಇನ್ನೂ ‘ಕೊರೊನಾ’ ಕಂಟಕ ಮುಗಿದಿಲ್ಲ..!

ಇನ್ನೂ ‘ಕೊರೊನಾ’ ಕಂಟಕ ಮುಗಿದಿಲ್ಲ..!

ಒಟ್ಟಾರೆ ಈ ಎಲ್ಲಾ ಅಂಶಗಳನ್ನ ಅಳೆದು, ತೂಗಿ ಹೇಳುವುದಾದರೆ ಕೊರೊನಾ ಎಂಬ ಮಹಾಮಾರಿಗೆ ವ್ಯಾಕ್ಸಿನ್ ಸಿಕ್ಕರೂ ಲಸಿಕೆಗಳ ಸುರಕ್ಷತೆ ಬಗ್ಗೆ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ. ಹೀಗಾಗಿಯೇ ಲಸಿಕೆಗಳ ಮೇಲೆ ನಿರೀಕ್ಷೆ ಭಾರ ಹಾಕುವುದಕ್ಕಿಂತ, ಸೋಂಕು ಹರಡದಂತೆ ತಡೆಯಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿಕೊಂಡು ಬರಬೇಕಿದೆ. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಜಗತ್ತು 2ನೇ ಅಲೆಯ ಆತಂಕದಲ್ಲಿ ಬದುಕು ಸಾಗಿಸುತ್ತಿದ್ದು, ವ್ಯಾಕ್ಸಿನ್ ಕನ್ಫರ್ಮ್ ಆಗಿದ್ದರೂ ಇನ್ನೂ ಕೆಲ ತಿಂಗಳು ಅಲರ್ಟ್ ಆಗಿರುವುದೇ ಒಳ್ಳೆಯದು.

ಲಸಿಕೆ ತುರ್ತು ಬಳಕೆಗೆ ಅಮೆರಿಕ, ಯುರೋಪ್ ಅನುಮತಿ ಕೋರಿದ ಮಾಡೆರ್ನಾ

   ಬೆಂಗಳೂರು: ಯುಕೆಯಿಂದ ಬಂದ 1122ಬೆಂಗಳೂರಿಗರಿಗೆ ಕೋವಿಡ್ ಪರೀಕ್ಷೆ, 15 ಮಂದಿ ವರದಿ ಪಾಸಿಟಿವ್ಕ | Oneindia Kannada

   English summary
   The European Union begins mass vaccination against Coronavirus. Around 74 crore peoples of The European Union will get Pfizer Vaccine.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X