ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಇಂಧನ ಸ್ವಾತಂತ್ರ್ಯಕ್ಕಾಗಿ ಯುರೋಪ್ ರಾಷ್ಟ್ರಗಳಿಂದ 195 ಬಿಲಿಯನ್ ಡಾಲರ್ ಖರ್ಚು

|
Google Oneindia Kannada News

ಕೀವ್, ಮೇ 11: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಯುರೋಪಿಯನ್ ರಾಷ್ಟ್ರಗಳು ಕೆರಳಿ ಕೆಂಡವಾಗಿವೆ. ರಷ್ಯಾದ ವಿರುದ್ಧ ತೊಡೆ ತಟ್ಟಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಪರೋಕ್ಷ ಬೆಂಬಲ ನೀಡುವುದಕ್ಕೆ ನಿರ್ಧರಿಸಿವೆ.

ಇಂಧನ ವಲಯಕ್ಕಾಗಿ ರಷ್ಯಾವನ್ನು ಅವಲಂಬಿಸಿರುವ ಯುರೋಪಿಯನ್ ರಾಷ್ಟ್ರಗಳು ಇದೀಗ ಹೊಸ ಮಾರ್ಗದ ಹುಡುಕಾಟದಲ್ಲಿವೆ. ರಷ್ಯಾದಿಂದ ಇಂಧನ ಸ್ವಾತಂತ್ರ್ಯವನ್ನು ಸಂಪಾದಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿವೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಧರಿಸಿದ ಉಣ್ಣೆಯ ಜಾಕೆಟ್ 1,11,000 ಡಾಲರ್‌ಗೆ ಮಾರಾಟ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಧರಿಸಿದ ಉಣ್ಣೆಯ ಜಾಕೆಟ್ 1,11,000 ಡಾಲರ್‌ಗೆ ಮಾರಾಟ

ರಷ್ಯಾದಿಂದ ಇಂಧನ ಸ್ವಾತಂತ್ರ್ಯವನ್ನು ಗಳಿಸುವ ಉದ್ದೇಶದಿಂದ ಯುರೋಪಿಯನ್ ರಾಷ್ಟ್ರಗಳು ಬರೋಬ್ಬರಿ 195 ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡುವುದಕ್ಕೆ ತೀರ್ಮಾನಿಸಿವೆ. ಈ ಕುರಿತು ಯುರೋಪಿಯನ್ ಆಯೋಗದ ಕರಡು ಪ್ರಸ್ತಾವನೆಯ ಪ್ರಕಾರ, ಈ ಮೊತ್ತವನ್ನು ಮುಂದಿನ ಐದು ವರ್ಷಗಳಲ್ಲಿ ಖರ್ಚು ಮಾಡಬಹುದು. ಮುಂದಿನ ವಾರ ಈ ಬಗ್ಗೆ ಪ್ರಸ್ತಾವನೆಯನ್ನು ಪ್ರಕಟಿಸಲಾಗುವುದು ಎಂದು ವರದಿಯಾಗಿದೆ.

EU May Spend 195 Billion Dollars to Gain Energy Independence From Russia

ಉಕ್ರೇನ್‌ಗೆ ಯುಎಸ್ ಶಸ್ತ್ರಾಸ್ತ್ರ ನೆರವು:

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುಎಸ್ ನೆರವು ಮಸೂದೆಯಿಂದ ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಇದರ ಜೊತೆಗೆ ರಷ್ಯಾದಿಂದ ಯುದ್ಧ ಅಪರಾಧಗಳ ತನಿಖೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ಮಸೂದೆಯು ಪ್ರಾದೇಶಿಕ ಮಿತ್ರರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ. ಪೆಂಟಗನ್ ವಿದೇಶಕ್ಕೆ ಸಾಗಿಸಿದ ಶಸ್ತ್ರಾಸ್ತ್ರಗಳನ್ನು ಮರುಪೂರ್ಣಗೊಳಿಸುತ್ತದೆ. ಯುಕ್ರೇನ್‌ನನ್ನು ಸಾಮಾನ್ಯವಾಗಿ ದೃಢವಾದ ಅನೇಕ ಬೆಳೆಗಳ ಉತ್ಪಾದನೆಯನ್ನು ಯುದ್ಧವು ದುರ್ಬಲಗೊಳಿಸಿದೆ. ಇದರಿಂದ ಉಂಟಾಗುವ ಜಾಗತಿಕ ಆಹಾರದ ಕೊರತೆಯನ್ನು ಪರಿಹರಿಸಲು 5 ಶತಕೋಟಿ ಡಾಲರ್ ನೆರವು ಒದಗಿಸುತ್ತದೆ.

ರಷ್ಯಾದ ಆಕ್ರಮಣದಿಂದ ಉಂಟಾದ ಅಡಚಣೆಯ ನಂತರ ಉಕ್ರೇನ್‌ನ ಚೆರ್ನೋಬಿಲ್ ವಿದ್ಯುತ್ ಸ್ಥಾವರದಿಂದ ದೂರದ ಡೇಟಾವನ್ನು ಸ್ವೀಕರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಸಂಸ್ಥೆಯು ಹೇಳಿದೆ. ರಷ್ಯಾ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಏಪ್ರಿಲ್‌ನಲ್ಲಿ ಅದರ ಪರಿಶೀಲನಾ ತಂತ್ರಜ್ಞರು ಭೇಟಿ ನೀಡಿದ್ದರು. ತದನಂತರ ಡೇಟಾ ಪ್ರಸರಣವನ್ನು ಮರುಸ್ಥಾಪಿಸಲಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಬುಧವಾರ ಹೇಳಿದೆ.

EU May Spend 195 Billion Dollars to Gain Energy Independence From Russia

ರಷ್ಯಾ ವಿರುದ್ಧ ದೂಷಿಸಿದ್ದ ಕೆನಡಾ ಪ್ರಧಾನಿ ಟ್ರುಡೋ:

ಉಕ್ರೇನ್ ನೆಲದಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧ ಅಪರಾಧಗಳಿಗೆ ರಷ್ಯಾ ಅಧ್ಯಕ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ನೇರ ಜವಾಬ್ದಾರರು ಎಂದು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ದೂಷಿಸಿದ್ದಾರೆ. ಇತ್ತೀಚಿಗೆ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಭೇಟಿ ನೀಡಿದ ಅವರು, ಅಧ್ಯಕ್ಷ ವೊಲೊಡಿಮಿರ್ ಝೆಲೆೆನ್ಸ್ಕಿ ಜೊತೆಗೆ ಚರ್ಚೆ ನಡೆಸಿದರು. "ಘೋರ ಯುದ್ಧಾಪರಾಧಗಳಿಗೆ ವ್ಲಾಡಿಮಿರ್ ಪುಟಿನ್ ಹೊಣೆಗಾರರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ," ಎಂದು ಉಕ್ರೇನಿಯನ್ ನಾಯಕನೊಂದಿಗಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಹಿಂದಿನ ದಿನ ಕೀವ್‌ನ ಹೊರಗಿನ ಇರ್ಪಿನ್‌ಗೆ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಭೇಟಿ ನೀಡಿದರು. ಮಾರ್ಚ್‌ನಲ್ಲಿ ಮಾಸ್ಕೋದ ಆಕ್ರಮಣಕ್ಕೂ ಮೊದಲು ಉಕ್ರೇನಿಯನ್ ಮತ್ತು ರಷ್ಯಾದ ಪಡೆಗಳ ನಡುವಿನ ಭೀಕರ ಹೋರಾಟದಿಂದ ನಗರವೇ ಧ್ವಂಸಗೊಂಡಿದೆ ಎಂದು ನಗರದ ಮೇಯರ್ ಹೇಳಿದರು.

ಝೆಲೆನ್ಸ್ಕಿಗೆ ಭರವಸೆ ನೀಡಿದ ಜಿ7 ರಾಷ್ಟ್ರಗಳು:

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವೀಡಿಯೊ ಕಾನ್ಫರೆನ್ಸ್ ಮೂಲಕ G7 ವರ್ಷದ ಮೂರನೇ ಸಭೆಯನ್ನು ಇಂದು ಭಾಗವಹಿಸಿದ್ದರು. ಉಕ್ರೇನ್ ತನ್ನ ಮುಕ್ತ ಮತ್ತು ಪ್ರಜಾಸತ್ತಾತ್ಮಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಲು ಮತ್ತಷ್ಟು ಬದ್ಧತೆಗಳನ್ನು ಕೈಗೊಳ್ಳಲು ಗುಂಪಿನ ಮುಂದುವರಿದ ಸಿದ್ಧತೆಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರಿಗೆ ಜಿ7 ರಾಷ್ಟ್ರಗಳು ಭರವಸೆ ನೀಡಿದವು. ಉಕ್ರೇನ್ ಈಗ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಮತ್ತು ಭವಿಷ್ಯದ ಆಕ್ರಮಣಕಾರಿ ಕೃತ್ಯಗಳನ್ನು ತಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಲಾಯಿತು.

Recommended Video

Virat Kohli ಅವರ ದಾಖಲೆ ಮುರಿಯುತ್ತಾರಾ Jos Buttler | Oneindia Kannada

English summary
European Union may spend 195 billion dollars to gain energy independence from Russia. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X