ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 28 ಭೂಮಿ ಮೇಲೆ ನಮ್ಮೆಲ್ಲರದ್ದು ಕೊನೆ ದಿನ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 22: ಭೂಮಿ ಮೇಲೆ ಬಾಕಿ ಇರುವ ಕೆಲಸಗಳನ್ನು ಬೇಗ ಬೇಗ ಮುಗಿಸಿಕೊಳ್ಳಿ. ನಿಮಗೆ ಭೂಮಿಯ ಮೇಲೆ ಇರುವುದು ಬೆರಳಣಿಕೆಯ ದಿನಗಳ ಅವಕಾಶ ಮಾತ್ರ. ಸೆಪ್ಟೆಂಬರ್ 28ಕ್ಕೆ ಜಗತ್ ಪ್ರಳಯವಾಗಲಿದೆ!

ನಿಮ್ಮ ಪ್ರೀತಿ ಪಾತ್ರರ ಯಾವೂದಾದರೂ ಬೇಡಿಕೆ ಪೂರೈಸುವುದಿದೆಯೇ? ಬಹಳ ದಿನದಿಂದ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡ ಭಾವನೆ ವ್ಯಕ್ತಪಡಿಸುವುದಿದೆಯೇ? ಎಲ್ಲದಕ್ಕೂ ಈಗ ಕಾಲ ಕೂಡಿ ಬಂದಿದೆ. ಖಗ್ರಾಸ ಚಂದ್ರ ಗ್ರಹಣದೊಂದಿಗೆ ನಮ್ಮನ್ನು ಹೊತ್ತ ಧರಣಿಯೂ ಅಂತ್ಯವಾಗಲಿದೆ![ಸೆ.28ರ ಕೆಂಪುಚಂದ್ರನ ಕುರಿತು ನಾಸಾ ಹೇಳುವುದೇನು?]

ಹೌದು... ಮತ್ತೆ ಭೂಮಿಯ ಅಂತ್ಯವಾಗುತ್ತದೆ, ಪ್ರಳಯವಾಗುತ್ತದೆ, ಜಗತ್ತು ವಿನಾಶವಾಗುತ್ತದೆ ಎಂಬ ಗುಲ್ಲು ಎದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಬಹುಚರ್ಚಿತ ವಿಷಯವಾಗಿ ಮಾರ್ಪಟ್ಟಿದೆ. 2012ರಲ್ಲಿ ವಿಶ್ವದ ಅಂತ್ಯವಾಗಲಿದೆ ಎಂದು ಬಹುತೇಕರು ನಂಬಿದ್ದರು. ಅಂಥ ವರದಿಗಳು ಹೊರಬಂದಿದ್ದವು. ಜ್ಯೋತಿಷಿಗಳು ಹೌದೌದು ಎಂದಿದ್ದರು.

ಸೆಪ್ಟೆಂಬರ್ 28ರಂದು ಬ್ಲಡ್ ಮೂನ್ ಚಂದ್ರಗ್ರಹಣ ಸಂಭವಿಸಲಿದ್ದು, ಈ ವೇಳೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿ ಜಗತ್ತು ನಾಶವಾಗಲಿದೆ ಎಂಬ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಸಾಮಾಜಿಕ ತಾಣ ಟ್ವಿಟ್ಟರ್, ಫೆಸ್ ಬುಕ್ ಅದಕ್ಕೊಂದು ಉತ್ತಮ ವೇದಿಕೆಯನ್ನು ಒದಗಿಸಿದೆ. ಆದರೆ ಈ ವಾದವನ್ನು ಅಲ್ಲಗಳೆದಿರುವ ವಿಜ್ಞಾನಿಗಳು ಚಂದ್ರ ಕೆಂಪು ಬಣ್ಣಕ್ಕೆ ತಿರುಗುವುದು ಸ್ವಾಭಾವಿಕ ಪ್ರಕ್ರಿಯೆ ಭೂಮಿಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದ್ದಾರೆ.[2012ರಲ್ಲೇ ಜಗತ್ತು ಅಂತ್ಯವಾಗಿದ್ದರೆ?]

ಹಾಗಾದರೆ ಜನರು ಪ್ರಳಯದ ಬಗ್ಗೆ ಯಾವ ಬಗೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ? ನಿಜಕ್ಕೂ ಭೂಮಿಗೆ ಆತಂಕವಿದೆಯೇ? ವಿಜ್ಞಾನಿಗಳೂ ಇದಕ್ಕೆ ನೀಡುವ ವಿವರಣೆ ಏನು? ಎಲ್ಲವನ್ನು ನೋಡಿಕೊಂಡು ಬರೋಣ...

ಕಲಾವಿದನ ಕಲ್ಪನೆಯಲ್ಲಿ ಪ್ರಳಯ ವಿಡಿಯೋ

ಬೈಬಲ್ ಏನು ಹೇಳುತ್ತದೆ?

ಬೈಬಲ್ ಏನು ಹೇಳುತ್ತದೆ?

ಚಂದ್ರ ಕೆಂಪಾಗುತ್ತಾನೆ, ಸೂರ್ಯ ಕಪ್ಪಾಗುತ್ತಾನೆ, ಭೂಮಿಯ ಮೇಲೆ ಹೊಗೆ, ಬೆಂಕಿ ಆವರಿಸಿಕೊಳ್ಳುತ್ತದೆ ನಂತರ ಜಗತ್ತಿನ ಅಂತ್ಯವಾಗುತ್ತದೆ ಎಂದು ಬೈಬಲ್ ನಲ್ಲಿ ಒಂದು ಕಡೆ ಉಲ್ಲೇಖವಿದೆ.

ಅಪಾಯವಿಲ್ಲ ಎಂದ ನಾಸಾ

ಅಪಾಯವಿಲ್ಲ ಎಂದ ನಾಸಾ

ಗ್ರಹಣಗಳು ಸ್ವಾಭಾವಿಕ ಪ್ರಕ್ರಿಯೆ, ಈ ಬಗೆಯ ಘಟನಾವಳಿಗಳು ಇತಿಹಾಸದಲ್ಲಿ ಅನೇಕ ಸಾರಿ ಸಂಭವಿಸಿವೆ. ಚಂದ್ರ ಕೆಂಪಾಗುತ್ತಾನೆ ಎಂದ ಮಾತ್ರಕ್ಕೆ ಭೂಮಿ ಅಂತ್ಯವಾಗಲ್ಲ.

 ಬ್ಲಡ್ ಮೂನ್ ಎಂದರೇನು?

ಬ್ಲಡ್ ಮೂನ್ ಎಂದರೇನು?

ಸಂಪೂರ್ಣ ಚಂದ್ರ ಗ್ರಹಣದ ಸಂದರ್ಭ ಭೂಮಿಯ ಸಮೀಪಕ್ಕೆ ಚಂದ್ರ ಬಂದಾಗ ನೆರಳು ಬೆಳಕಿನ ಪರಿಣಾಮದಿಂದ ಚಂದ್ರ ನಮಗೆ ಕೆಂಪು ಬಣ್ಣದಲ್ಲಿ ಗೋಚರವಾಗುತ್ತಾನೆ. ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗಿದೆ.

ಇದೇ ಮೊದಲಲ್ಲ

ಇದೇ ಮೊದಲಲ್ಲ

ಭೂಮಿಯ ಅಂತ್ಯ, ಪ್ರಳಯ ಎಂಬ ಮಾತುಗಳು ಇದೇ ಮೊದಲಲ್ಲ. 1999ರಲ್ಲಿ, 2012ರಲ್ಲಿ ಸಹ ಪ್ರಳಯದ ಕುರಿತಾಗಿ ಊಹಾಪೋಹಗಳು ಎದ್ದಿದ್ದವು.

ಸೆಪ್ಟೆಂಬರ್ 28ರ ವಿಶೇಷವೇನು?

ಸೆಪ್ಟೆಂಬರ್ 28ರ ವಿಶೇಷವೇನು?

ಸೆಪ್ಟೆಂಬರ್ 28 ಅನಂತನ ಹುಣ್ಣಿಮೆ. ಅಂದು ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ. ಮಧ್ಯರಾತ್ರಿ 12.13ಕ್ಕೆ ಆರಂಭವಾಗುವ ಗ್ರಹಣ 05.22ಕ್ಕೆ ಮುಕ್ತಾಯಗೊಳ್ಳಲಿದೆ. ಅಲ್ಲದೇ ಪಿತೃಪಕ್ಷ ಸಹ ಅಂದೇ ಆರಂಭವಾಗಲಿದೆ.

English summary
After many predictions about world's apocalypse, another date has been predicted for world's doomsday and it is Sept 28, 2015! Yes, if this is to be believed, then, only 17 days are left for the world to get doomed! According to reports, some bibilical theorists have speculated that during blood moon, the earth will be destroyed on Monday, Sept 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X