ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಮತ್ತೊಂದು ಭೂಕಂಪ: 2 ವಾರಗಳಲ್ಲಿ ನಾಲ್ಕನೇ ಬಾರಿ ಸಂಭವಿಸಿದ ದುರಂತ

|
Google Oneindia Kannada News

ಕಠ್ಮಂಡು, ನವೆಂಬರ್‌ 15: ಮಂಗಳವಾರ ಸಾಯಂಕಾಲ ನೇಪಾಳದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ನೇಪಾಳದಲ್ಲಿರುವ ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರವು ಈ ಕುರಿತು ಮಾಹಿತಿಯನ್ನು ಹೊರಹಾಕಿದೆ.

ನೇಪಾಳದ ಅಚಾಮ್ ಜಿಲ್ಲೆಯ ಬಬಾಲಾದಲ್ಲಿ ಮಂಗಳವಾರ ಸಂಜೆ 6:18ಕ್ಕೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಕೇವಲ ಎರಡು ವಾರಗಳ ಕಾಲಾವಧಿಯಲ್ಲಿ ದೇಶದಲ್ಲಿ ಸಂಭವಿಸಿದ ನಾಲ್ಕನೇ ಭೂಕಂಪ ಇದಾಗಿದೆ.

Breaking News: ಅಮೃತ್‌ಸರದಲ್ಲಿ ಲಘು ಭೂಕಂಪBreaking News: ಅಮೃತ್‌ಸರದಲ್ಲಿ ಲಘು ಭೂಕಂಪ

ಒಂದೇ ವಾರದಲ್ಲಿ ನಾಲ್ಕು ಬಾರಿ ಸಂಭವಿಸಿದ ಭೂಕಂಪವು ನೇಪಾಳದ ಜನರನ್ನು ಆತಂಕಕ್ಕೆ ದೂಡಿದೆ.

ಕಳೆದ ಗುರುವಾರ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಈ ದುರಂತದಲ್ಲಿ 6 ಮಂದಿ ಮೃತಪಟ್ಟಿದ್ದರು. ಹಲವು ಮನೆಗಳು ನೆಲಸಮವಾಗಿದ್ದವು. ನೂರಾರು ಜನರು ಮನೆಗಳನ್ನು ಕಳೆದುಕೊಂಡಿದ್ದರು.

Earthquake tremors jolt Nepal again fourth in a week

ಇದೇ ಸಂದರ್ಭದಲ್ಲಿ, ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿತ್ತು.

ದೆಹಲಿ ಸುತ್ತಲಿನ ನಗರಗಳಾದ ಗಾಜಿಯಾಬಾದ್‌, ಗುರುಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪನದ ಅನುಭವಾಗಿತ್ತು. ಆದರೆ, ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.

2015 ರಲ್ಲಿ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಆ ದುರಂತದಲ್ಲಿ ಸುಮಾರು 9 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು.

Earthquake tremors jolt Nepal again fourth in a week

ಹಿಮಾಲಯ ಪ್ರದೇಶಗಳಲ್ಲಿ ಹೆಚ್ಚು ಸಂಭವಿಸುವ ಭೂಕಂಪ

ನೇಪಾಳದಲ್ಲಿ ಭೂಕಂಪವು ಹೆಚ್ಚು ಸಂಭವಿಸುತ್ತದೆ. ಅದಕ್ಕೆ ಹಿಮಾಲಯವೇ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮತಟ್ಟು ಪ್ರದೇಶಗಳಲ್ಲಿ ಭೂಕಂಪ ಸಂಭವಿಸುವುದು ಕಡಿಮೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಹಿಮಾಲಯ ಪ್ರದೇಶಗಳಲ್ಲಿ ಸಮತಟ್ಟಲ್ಲದ ನೆಲವಿರುವುದರಿಂದ ಆಗಾಗ ಭೂಕಂಪ ಸಂಭವಿಸುತ್ತದೆ. ಹಿಮಾಲಯದ ತೊಟ್ಟಿಲಲ್ಲಿ ಇರುವ ನೇಪಾಳದಂತಹ ದೇಶಗಳು ಭೂಕಂಪನದಂತಹ ದುರಂತಗಳಿಗೆ ಒಳಗಾಗುವುದು ಸಾಮಾನ್ಯವೆಂಬ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

English summary
An earthquake measuring 4.2 on the Richter Scale hit Nepal on Tuesday. According to Nepal's National Earthquake Monitoring & Research Center, the tremors were felt at nearly 6:18 pm today around Babala of Accham district in the country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X