Earthquake: ಮ್ಯಾನ್ಮಾರ್, ಥೈಲ್ಯಾಂಡ್ ಬಳಿಕ ಜಪಾನ್‌ನಲ್ಲಿ ಪ್ರಬಲ ಭೂಕಂಪ
Earthquake: ಈಗಾಗಲೇ ಹಲವು ದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ್ದು, ಘಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾವನ್ನಪಿದ್ದಾರೆ. ಈ ಆಘಾತದಿಂದ ಚೇತರಿಸಿಕೊಳ್ಳುವ ಬೆನ್ನಲ್ಲೇ ಇದೀಗ ಜಪಾನ್‌ನಲ್ಲೂ ಪ್ರಬಲ ಭೂಕಂಪ ಸಂಭವಿಸಿದ ಘಟನೆ ನಡೆದಿದೆ.
ಮ್ಯಾನ್ಮಾರ್, ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಆಘಾತದಿಂದ ಇಡೀ ಜಗತ್ತೇ ದಂಗಾಗಿ ಹೋಗಿದೆ. ಇದರಿಂದ ಚೇತರಿಸಿಕೊಳ್ಳುವ ಮೊದಲೇ ಜಪಾನ್‌ನಲ್ಲೂ ಪ್ರಬಲ ಭೂಕಂಪನ ಸಂಭವಿಸಿದೆ.

ಭಾರತೀಯ ಕಾಲಮಾನ ಬುಧವಾರ ಸಂಜೆ 7:34ರ ವೇಳೆಗೆ ಜಪಾನ್‌ನ ಕ್ಯುಶುನಲ್ಲಿ 6.O ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿಯಿಂದ 30 ಕಿಲೋ ಮೀಟರ್ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ತಕ್ಷಣಕ್ಕೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಒಂದು ದಿನದ ಹಿಂದೆಯಷ್ಟೇ ಜಪಾನ್‌ನಲ್ಲಿ ಮೆಗಾಕ್ವೇಕ್ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಉಂಟಾಗುವ ಸುನಾಮಿಯಲ್ಲಿ ಸರಿಸುಮಾರು 3,00,000 ಜನರು ಸಾಯಬಹುದು. ಅಲ್ಲದೇ ಈ ಬೃಹತ್ ಪ್ರಾಕೃತಿಕ ವಿಕೋಪದಿಂದ ಜಪಾನ್‌ಗೆ ಸುಮಾರು 1.8 ಟ್ರಿಲಿಯನ್‌ನಷ್ಟು (ಲಕ್ಷ ಕೋಟಿಯಷ್ಟು) ಆರ್ಥಿಕ ನಷ್ಟ ಸಂಭವಿಸಬಹುದು ಎಂದು ವರದಿ ಹೇಳಿತ್ತು.
ಕಳೆದ ಆಗಸ್ಟ್‌ನಲ್ಲಿ ಜಪಾನ್ ಹವಾಮಾನ ಸಂಸ್ಥೆ ಮೊದಲ ಬಾರಿಗೆ ಮೆಗಾಕ್ವೇಕ್ ಸಂಭವಿಸುವ ಆತಂಕವನ್ನು ಹೊರಹಾಕಿತ್ತು. ಅದೇ ರೀತಿ ಹೊಸ ವರ್ಷದ ಮೊದಲ ದಿನವೇ ನೋಟೊ ದ್ವೀಪ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಿ, ಕನಿಷ್ಠ 260 ಜನ ಸಾವನ್ನಪ್ಪಿದರು.
ಕ್ಯುಶುವಿನಲ್ಲಿ ಇಲ್ಲಿ ಫಿಲಿಪ್ಪೀನ್ ಸಮುದ್ರದ ಟೆಕ್ಟಾನಿಕ್ ಪ್ಲೇಟ್, ಜಪಾನ್ ಇರುವ ಖಂಡಾಂತರ ಪ್ಲೇಟ್‌ನ ಕೆಳಗೆ ಸಾಗುತ್ತದೆ. ಈ ಶಿಲಾ ಫಲಕವು ಒಂದಕ್ಕೊಂದು ಬಂಧಿ ಆಗುವುದರಿಂದ ಶಕ್ತಿ ಸಂಗ್ರಹಗೊಂಡು ದೊಡ್ಡ ಭೂಕಂಪಗಳ ರೂಪದಲ್ಲಿ ಬಿಡುಗಡೆ ಆಗುತ್ತದೆ. ಆದ್ದರಿಂದ ಭೂಕಂಪ ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಎಲ್ಲೆಲ್ಲಿ ಭೂಕಂಪ?: ಜಾಗತಿಕ ಮಟ್ಟದಲ್ಲಿ ಜನವರಿಯಿಂದ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಭಾರತದ ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಭೂಕಂಪನದ ಅನುಭವ ಆಗಿದೆ.
ಅಷ್ಟೇ ಅಲ್ಲದೆ ಏಷ್ಯಾ, ಅಮೆರಿಕ ಮತ್ತು ಇತರ ಖಂಡಗಳ ವಿವಿಧ ದೇಶಗಳಲ್ಲಿಯೂ ಭೂಕಂಪಗಳು ಸಂಭವಿಸಿವೆ ಮತ್ತು ಈಗ ಮ್ಯಾನ್ಮಾರ್ ಸೇರಿದಂತೆ ಭಾರತದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಆದ್ದರಿಂದ ಭೂಕಂಪದ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಬಾಬಾ ವೆಂಗಾ ಅವರ ಭವಿಷ್ಯವಾಣಿ ನಿಜವಾಗುತ್ತಿದೆ ಎಂದು ಹಲವರರಲ್ಲಿ ಆತಂಕ ಶುರುವಾಗಿದೆ.
ಡಿಸೆಂಬರ್ 26, 2004ರಂದು ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭೂಕಂಪವು ಭಾರಿ ಸುನಾಮಿ ಅಲೆಗಳನ್ನು ಸೃಷ್ಟಿಸಿತು ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ 200,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭೂಕಂಪದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 9.2 ಮತ್ತು 9.3 ರ ನಡುವೆ ಇತ್ತು ಮತ್ತು ಇದನ್ನು 21ನೇ ಶತಮಾನದ ಅತ್ಯಂತ ವಿನಾಶಕಾರಿ ಭೂಕಂಪವೆಂದು ಪರಿಗಣಿಸಲಾಗಿದೆ.
ಒಂದು ದೊಡ್ಡ ಚಂಡಮಾರುತವು ನಮ್ಮನ್ನು ಅಪ್ಪಳಿಸುತ್ತದೆ ಎಂದು ಭೂವಿಜ್ಞಾನಿಗಳು ಖಚಿತವಾಗಿ ಹೇಳಿದ್ದಾರೆ. ಆದರೆ ಅದು ಯಾವಾಗ ಸಂಭವಿಸುತ್ತದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಕ್ರಿಸ್ ಗೋಲ್ಡ್‌ಫಿಂಗರ್ ಮತ್ತು ಅವರ ಸಹೋದ್ಯೋಗಿಗಳು 2060ರ ವೇಳೆಗೆ ಈ ಅಪಾಯದ ವಲಯದಲ್ಲಿ ವಿನಾಶಕಾರಿ ಭೂಕಂಪ ಸಂಭವಿಸುವ ಸಾಧ್ಯತೆ ಶೇಕಡಾ 37ರಷ್ಟು ಇದೆ ಎಂದು ಹೇಳುತ್ತಾರೆ.












Click it and Unblock the Notifications