Earthquake: ಫಿಜಿ ದ್ವೀಪಗಳಲ್ಲಿ ಒಂದು, ನೇಪಾಳದಲ್ಲಿ 2 ಬಾರಿ ಕಂಪಿಸಿದ ಭೂಮಿ!

ಕಠ್ಮಂಡು ಏಪ್ರಿಲ್ 28: ಭಾರತದ ನೆರೆಯ ರಾಷ್ಟ್ರಗಳಲ್ಲಿ ಒಂದಾದ ನೇಪಾಳದಲ್ಲಿ ಮಧ್ಯರಾತ್ರಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಮೊದಲ ಭೂಕಂಪ 4.8 ತೀವ್ರತೆಯನ್ನು ಹೊಂದಿದ್ದು, ಎರಡನೇ ಭೂಕಂಪ 5.9 ತೀವ್ರತೆಯನ್ನು ಹೊಂದಿದೆ. ಇದರ ಕೇಂದ್ರ ಬಾಜುರಾದ ದಹಕೋಟ್‌ನಲ್ಲಿತ್ತು ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಹೇಳಿದೆ.ಜೊತೆಗೆ ಹಾಂಗ್ ಕಾಂಗ್ ನ ಫಿಜಿ ದ್ವೀಪಗಳ ದಕ್ಷಿಣಕ್ಕೆ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11.58ಕ್ಕೆ ಮೊದಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.8 ದಾಖಲಾಗಿದೆ. ಮಧ್ಯರಾತ್ರಿ ಸಂಭವಿಸಿದ ಈ ಸಾಧಾರಣ ಭೂಕಂಪದಿಂದ ಮನೆಗಳು ತುಸು ಅಲುಗಾಡಿವೆ. ಇದರಿಂದ ಜನರು ಕೊಂಚ ಭಯಗೊಂಡಿದ್ದು, ನಂತರದ ಒಂದೂವರೆ ಗಂಟೆಯಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.9 ದಾಖಲಾಗಿದೆ.

People were shocked in the middle of the night.. Nepal was shaken by two earthquakes at the same time..!

ರಾಜಕೀಯ ವಿಮರ್ಶಕ ಬಾಜುರಾ ಜಿಲ್ಲೆಯ ತಹಕೋಟ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಇದರಿಂದ ಗಾಡ ನಿದ್ದೆಗೆ ಜಾರಿದ್ದ ಜನ ತಬ್ಬಿಬ್ಬಾಗಿದ್ದಾರೆ. ಮಧ್ಯರಾತ್ರಿ ಸಂಭವಿಸಿದ ಈ ಸತತ ಭೂಕಂಪಗಳು ಜನರಲ್ಲಿ ಭೀತಿ ಹುಟ್ಟಿಸಿವೆ. ಮನೆಗಳು ಅಲುಗಾಡುತ್ತಿದ್ದಂತೆ, ಸ್ಥಳೀಯರು ಮಧ್ಯರಾತ್ರಿ ಬೀದಿಗಳಲ್ಲಿ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ.

ಭೂಕಂಪದಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ನೇಪಾಳದಲ್ಲಿ 25 ಏಪ್ರಿಲ್ 2015 ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.8 ರಷ್ಟು ದಾಖಲಾಗಿರುವ ಭೂಕಂಪವು ದೇಶದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿತ್ತು. ಸಾವಿರಾರು ಕಟ್ಟಡಗಳು ಕುಸಿದಿದ್ದವು.

ನೇಪಾಳದ ಇತಿಹಾಸದಲ್ಲಿ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಒಂದೆಂದು ಕರೆಯಲ್ಪಡುವ ಈ ಭೂಕಂಪ 8,694 ಜನರನ್ನು ಬಲಿ ತೆಗೆದುಕೊಂಡಿತ್ತು. ಸುಮಾರು 21,000 ಜನರು ಗಾಯಗೊಂಡಿದ್ದಾರೆ. ಈ ಭೂಕಂಪದ ಕುರುಹುಗಳು ಜನಮಾನಸದಲ್ಲಿ ಮಾಯವಾಗದಿದ್ದರೂ ಮತ್ತೆ ಇದೇ ಏಪ್ರಿಲ್ ತಿಂಗಳ ಮಧ್ಯರಾತ್ರಿ ಸಂಭವಿಸಿದ ಈ ಭೂಕಂಪ ಜನರಲ್ಲಿ ಭಯ ಮೂಡಿಸಿದೆ.

ಫಿಜಿ ದ್ವೀಪಗಳ ದಕ್ಷಿಣಕ್ಕೆ 6.2-ತೀವ್ರತೆಯ ಭೂಕಂಪ: USGS

ಹಾಂಗ್ ಕಾಂಗ್ ನ ಫಿಜಿ ದ್ವೀಪಗಳ ದಕ್ಷಿಣಕ್ಕೆ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ. ಯುನಿವರ್ಸಲ್ ಟೈಮ್ ಪ್ರಕಾರ ಏಪ್ರಿಲ್ 28 ಶುಕ್ರವಾರ 03:13:52ಕ್ಕೆ ಭೂಮಿ ಕಂಪಿಸಿದೆ. ಸ್ಥಳೀಯ ಸಮಯ 07:13:52ಕ್ಕೆ ಭೂಕಂಪವಾಗಿದೆ. 576.748 ಕಿಮೀ ಆಳವಿರುವ ಭೂಕಂಪದ ಕೇಂದ್ರ ಆರಂಭದಲ್ಲಿ 25.1106 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 178.4613 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ನಿರ್ಧರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+