'ಮೊದಲು ದೇಶ ಒಂದಾಗಿತ್ತು, ನಂತರ ಇಬ್ಭಾಗವಾಗಿತ್ತು' ಮೋದಿ
ಬರ್ಲಿನ್ ಮೇ 02: 'ಮೊದಲು ದೇಶ ಒಂದಾಗಿತ್ತು, ನಂತರ ಇಬ್ಭಾಗವಾಗಿತ್ತು' ಎಂದು ಬರ್ಲಿನ್‌ನಲ್ಲಿ ಮೋದಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದ್ದಾರು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಜರ್ಮನಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾದರು. ಬರ್ಲಿನ್‌ನಲ್ಲಿ ಜರ್ಮನ್ ಮತ್ತು ಭಾರತೀಯ ಕಂಪನಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇದಾದ ನಂತರ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಬರ್ಲಿನ್‌ನ ಪಾಟ್ಸ್‌ಡೇಮರ್ ಪ್ಲಾಟ್ಜ್‌ನಲ್ಲಿರುವ ಥಿಯೇಟರ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಅಲ್ಲಿ ಭಾರತೀಯ ಜನರು ಮೋದಿ.. ಮೋದಿ ಮತ್ತು ಭಾರತ್ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗುವ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದರು.
ಜರ್ಮನಿಯಲ್ಲಿ ಭಾರತೀಯ ಮೂಲದ ಎರಡು ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಅವರಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬರ್ಲಿನ್‌ನಲ್ಲಿ ಪ್ರಧಾನಿ ಮೋದಿಯವರು ಭಾರತ್ ಮಾತಾ ಕಿ ಜೈ ಎಂದು ಭಾಷಣ ಆರಂಭಿಸಿದರು. ಇದೇ ವೇಳೆ ಜರ್ಮನಿಯಲ್ಲಿ ನೆಲೆಸಿರುವ ಭಾರತೀಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಬಣ್ಣಿಸಿದರು. ಇವತ್ತು ಬೆಳಿಗ್ಗೆ ಇಲ್ಲಿ ಚಳಿ ಜಾಸ್ತಿ ಅಂತ ಆಶ್ಚರ್ಯ ಆಯ್ತು. ಆದರೆ 4-4.30ಕ್ಕೆ ತುಂಬಾ ಚಿಕ್ಕ ಮಕ್ಕಳೂ ನನ್ನ ಭೇಟಿ ಮಾಡಲು ಬಂದರು. ನಿಮ್ಮ ಪ್ರೀತಿ ಮತ್ತು ನಿಮ್ಮ ಆಶೀರ್ವಾದವೇ ನನ್ನ ದೊಡ್ಡ ಶಕ್ತಿ ಎಂದು ಮೋದಿ ಹೇಳಿದ್ದಾರೆ.

'ದೇಶದಲ್ಲಿ ಸಕಾರಾತ್ಮಕ ಬದಲಾವಣೆ'
ಇಂದು ನಾನು ನಿಮ್ಮೊಂದಿಗೆ ಮೋದಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿಲ್ಲ. ಕೋಟಿಗಟ್ಟಲೆ ಭಾರತೀಯರ ಶಕ್ತಿ ಮತ್ತು ಅವರ ಕೀರ್ತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಅನಿಸುತ್ತಿದೆ ಎಂದರು. ಅಲ್ಲಿನ ಭಾರತೀಯರ ಬಗ್ಗೆ ಅಲ್ಲ ಇಲ್ಲಿನ ಭಾರತೀಯರ ಬಗ್ಗೆಯೂ ಮಾತನಾಡುತ್ತಿದ್ದೇನೆ. ಸಕಾರಾತ್ಮಕ ಬದಲಾವಣೆ ಮತ್ತು ವೇಗದ ಅಭಿವೃದ್ಧಿಯ ಬಯಕೆಯಿಂದಾಗಿ ಭಾರತದ ಜನರು 2014 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ಆಯ್ಕೆ ಮಾಡಿದರು. 2019 ರಲ್ಲಿ ಸರ್ಕಾರ ದೇಶವನ್ನು ಹಿಂದಿಗಿಂತಲೂ ಬಲಗೊಳಿಸಿದೆ ಎಂಬುದು ಭಾರತದ ಮಹಾನ್ ಜನರ ದೂರದೃಷ್ಟಿಯಾಗಿದೆ ಎಂದರು.

'ರಾಜಕೀಯ ಅಸ್ಥಿರತೆ ನಿವಾರಣೆ'
ಇಂದಿನ ಮಹತ್ವಾಕಾಂಕ್ಷೆಯ ಭಾರತ, ಇಂದಿನ ಯುವ ಭಾರತ, ದೇಶದ ತ್ವರಿತ ಅಭಿವೃದ್ಧಿಯನ್ನು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದಕ್ಕೆ ರಾಜಕೀಯ ಸ್ಥಿರತೆ ಮತ್ತು ಇಚ್ಛಾಶಕ್ತಿ ಎಷ್ಟರಮಟ್ಟಿಗೆ ಅವಶ್ಯ ಎಂಬುದು ಅರಿವಿಗೆ ಬಂದಿದೆ. ಹಾಗಾಗಿ ಭಾರತದ ಜನತೆ ಮೂರು ದಶಕಗಳಿಂದ ನಡೆಯುತ್ತಿದ್ದ ರಾಜಕೀಯ ಅಸ್ಥಿರತೆಯ ವಾತಾವರಣವನ್ನು ಗುಂಡಿ(ಮತ ಚಲಾಯಿಸುವುದರಲ್ಲೇ) ಒತ್ತುವುದರಲ್ಲೇ ಕೊನೆಗಾಣಿಸಿದರು. ಈ ವರ್ಷ ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಈ ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ಪ್ರಧಾನಿ ನಾನು. ಸರ್ಕಾರ ಭಾರತ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುವ ಕಡೆಗೆ ಬಲವಾದ ಶಕ್ತಿಯೊಂದಿಗೆ ಒಂದರ ನಂತರ ಒಂದು ಹೆಜ್ಜೆ ಮುಂದಿಡುತ್ತಿದೆ.

ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಹೆಚ್ಚಳ
ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ, 'ಇಂದು ಭಾರತದ ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ರೀತಿ ನವಭಾರತದ ಹೊಸ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಇದು ಪ್ರಜಾಪ್ರಭುತ್ವದ ಸಾಮರ್ಥ್ಯದ ಪುರಾವೆಯಾಗಿದೆ' ಎಂದು ಹೇಳಿದರು. ದೇಶದ ಜನರು ಅದರ ಅಭಿವೃದ್ಧಿಯನ್ನು ಮುನ್ನಡೆಸಿದಾಗ ದೇಶವು ಪ್ರಗತಿ ಹೊಂದುತ್ತದೆ. ದೇಶದ ಜನರು ಅದರ ದಿಕ್ಕನ್ನು ನಿರ್ಧರಿಸಿದಾಗ ದೇಶವು ಪ್ರಗತಿಯಾಗುತ್ತದೆ. ಭಾರತದಲ್ಲಿ ಸರ್ಕಾರವಲ್ಲ ದೇಶದ ಜನರೇ ಪ್ರೇರಕ ಶಕ್ತಿ ಎಂದು ಮೋದಿ ಹೇಳಿದರು. ಬ್ರಿಟಿಷ್ ಸಂಪ್ರದಾಯಗಳಿಂದಾಗಿ ಸರ್ಕಾರ ಮತ್ತು ಜನರ ನಡುವೆ ನಂಬಿಕೆಯ ಅಂತರವಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ವೇಗದ ಕೊರತೆಯಿಂದಾಗಿ ಅನುಮಾನದ ಮೋಡಗಳು ಇದ್ದವು. ಸಾಮಾನ್ಯ ಜನರ ಜೀವನದಲ್ಲಿ ಸರ್ಕಾರದ ಅಸ್ತಿತ್ವವನ್ನು ಕಡಿಮೆ ಮಾಡುವುದು ಅಗತ್ಯವಾಗಿತ್ತು. ಜೊತೆಗೆ 2014 ರ ಸುಮಾರಿಗೆ ನಮ್ಮ ದೇಶದಲ್ಲಿ ಕೇವಲ 200-400 ಸ್ಟಾರ್ಟ್‌ಅಪ್‌ಗಳು ಇದ್ದವು. ಇಂದು 68,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ, ಹತ್ತಾರು ಯುನಿಕಾರ್ನ್‌ಗಳಿವೆ ಎಂದು ಮೋದಿ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.

ಕಾಂಗ್ರೆಸ್ ವಿರುದ್ಧ ಕಿಡಿ
ಭಾರತ ಇಂದು ಈಸ್ ಆಫ್ ಲಿವಿಂಗ್, ಈಸ್ ಆಫ್ ಎಂಪ್ಲಾಯ್ಮೆಂಟ್, ಈಸ್ ಆಫ್ ಮೊಬಿಲಿಟಿ, ಈಸ್ ಆಫ್ ಡೂಯಿಂಗ್... ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಕೆಲಸ ಮಾಡುತ್ತಿದೆ. ಹೊಸ ಆಯಾಮಗಳನ್ನು ಹೊಂದಿಸುತ್ತಿದೆ ಎಂದು ಮೋದಿ ಬರ್ಲಿನ್‌ನಲ್ಲಿ ಹೇಳಿದರು. ನಾವು ಸರಕು ಮತ್ತು ಸೇವೆಗಳನ್ನು ನೋಡಿದರೆ, ಕಳೆದ ವರ್ಷ ಭಾರತವು $ 670 ಬಿಲಿಯನ್ ಅಂದರೆ ಸುಮಾರು 50 ಲಕ್ಷ ಕೋಟಿ ರೂಪಾಯಿಗಳನ್ನು ರಫ್ತು ಮಾಡಿದೆ. 21ನೇ ಶತಮಾನದ ಈ ಮೂರನೇ ದಶಕದ ಅತಿ ದೊಡ್ಡ ವಾಸ್ತವವೆಂದರೆ ಭಾರತವು ಜಾಗತಿಕ ಮಟ್ಟದಲ್ಲಿ ಸಾಗುತ್ತಿದೆ. ಕೊರೋನಾ ಅವಧಿಯಲ್ಲಿ, ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ಕಳುಹಿಸುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಿದೆ. ಮಾತ್ರವಲ್ಲದೆ ಭಾರತ ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದರೆ, ನಾವು ನಮ್ಮ ಲಸಿಕೆಯೊಂದಿಗೆ ಸುಮಾರು 100 ದೇಶಗಳಿಗೆ ಸಹಾಯ ಮಾಡಿದ್ದೇವೆ. ಈ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು ದೇಶ ಒಂದಾಗಿತ್ತು ಆದರೆ ಸಂವಿಧಾನ 2 ಆಗಿತ್ತು ಎಂದ ಮೋದಿ, ಆದರೆ ಅದನ್ನು ಒಗ್ಗೂಡಿಸಲು ಇಷ್ಟು ದಿನ ಬೇಕಾಯಿತು. ಒಂದು ದೇಶ ಒಂದು ಸಂವಿಧಾನವನ್ನು ಜಾರಿಗೆ ತರಲು ಕಷ್ಟವಾಯಿತು. ಆದರೆ ಈಗ ನಾವು ಅದನ್ನು ಜಾರಿಗೆ ತಂದಿದ್ದೇವೆ ಎಂದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications