• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಚ್ ರೈತರ ಪ್ರತಿಭಟನೆ: ಟ್ರ್ಯಾಕ್ಟರ್ ಚಾಲಕನ ಮೇಲೆ ಗುಂಡು ಹಾರಿಸಿದ ಪೊಲೀಸರು

|
Google Oneindia Kannada News

ಉತ್ತರ ನೆದರ್‌ಲ್ಯಾಂಡ್ಸ್‌ನಲ್ಲಿ ರೈತರ ಪ್ರತಿಭಟನೆಯ ವೇಳೆ ಟ್ರಾಕ್ಟರ್‌ ಮೇಲಿದ್ದ 16 ವರ್ಷದ ಹುಡುಗನ ಮೇಲೆ ಡಚ್ ಪೊಲೀಸರು ಗುಂಡು ಹಾರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಮೂವರು ಪ್ರತಿಭಟನಾಕಾರರನ್ನು ಈ ವೇಳೆ ಬಂಧಿಸಲಾಗಿದೆ.

ಸಾರಜನಕ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಸರ್ಕಾರದ ಹೊಸ ಯೋಜನೆಗಳ ವಿರುದ್ಧ ಡಚ್‌ ರೈತರು ಪ್ರತಿಭಟಿಸುತ್ತಿದ್ದಾರೆ. ಏಕೆಂದರೆ ಇದು ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಫ್ರೈಸ್‌ಲ್ಯಾಂಡ್‌ನ ಪೊಲೀಸರು ಬುಧವಾರ ಎಚ್ಚರಿಕೆಯ ಹೊರತಾಗಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಈ ಘಟನೆ ನಡೆದಿದ್ದು ಯಾರಿಗೂ ಗಾಯವಾಗಿಲ್ಲ. ಉದ್ರಿಕ್ತ ಪ್ರತಿಭಟನಾಕಾರರ ಗುಂಪು ತಮ್ಮ ಟ್ರಾಕ್ಟರ್ ಅನ್ನು ಪೊಲೀಸ್ ಕಾರುಗಳ ಮೇಲೆ ಓಡಿಸಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಡಚ್ ಪೊಲೀಸರು ಹದಿಹರೆಯದ ಟ್ರ್ಯಾಕ್ಟರ್ ಚಾಲಕನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಅಧಿಕಾರಿಗಳು ತಮ್ಮ ಶಸ್ತ್ರಾಸ್ತ್ರಗಳ ಪ್ರಯೋಗ ಮಾಡಿದ ಪರಿಣಾಮ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಾಷ್ಟ್ರೀಯ ಅಪರಾಧ ತನಿಖಾ ಸೇವೆ (ರಿಜ್ಕ್ರೆಚೆರ್ಚ್) ಹೇಳಿದೆ.


ರೈತರ ಅಶಾಂತಿ

2030ರ ವೇಳೆಗೆ ನೈಟ್ರೋಜನ್ ಆಕ್ಸೈಡ್ ಮತ್ತು ಅಮೋನಿಯದಂತಹ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಸರ್ಕಾರದ ಪ್ರಸ್ತಾಪದಿಂದ ಡಚ್ ರೈತರಲ್ಲಿ ಅಶಾಂತಿ ಉಂಟಾಗಿದೆ. ಗುರಿಯನ್ನು ಸಾಧಿಸಲು ಯೋಜನೆಗಳನ್ನು ರೂಪಿಸಲು ಪ್ರಾಂತೀಯ ಸರ್ಕಾರಗಳಿಗೆ ಒಂದು ವರ್ಷವನ್ನು ನೀಡಲಾಗಿದೆ.

ಸುಧಾರಣೆಗಳು ಜಾನುವಾರುಗಳನ್ನು ಕಡಿಮೆ ಮಾಡುವುದು ಮತ್ತು ಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿ ಅಮೋನಿಯಾವನ್ನು ಉತ್ಪಾದಿಸುವ ಕೆಲವು ಸಾಕಣೆ ಕೇಂದ್ರಗಳನ್ನು ಖರೀದಿಸುವುದನ್ನು ಒಳಗೊಂಡಿರುತ್ತದೆ ಎನ್ನಲಾಗುತ್ತಿದೆ. ಇದರಿಂದ ರೈತರು ಅನ್ಯಾಯವಾಗಿ ಗುರಿಯಾಗುತ್ತಿದ್ದಾರೆ. ಅವರ ಭವಿಷ್ಯಕ್ಕಾಗಿ ಯಾವುದೇ ದೃಷ್ಟಿಕೋನವನ್ನು ನೀಡುತ್ತಿಲ್ಲ ಎಂದು ವಾದಿಸುತ್ತಾರೆ.

ಹೊಸ ಯೋಜನೆ ವಿರುದ್ಧ ಪ್ರತಿಭಟನೆ

ಈ ಯೋಜನೆಗಳು ದೇಶದಾದ್ಯಂತ ರೈತರ ಅಪಾರ ಆಕ್ರೋಶಕ್ಕೆ ಗುರಿ ಮಾಡಿವೆ. ಡಚ್ ರೈತರು ಕಳೆದ ವಾರದಲ್ಲಿ ಪ್ರತಿಭಟನೆಯಲ್ಲಿ ಸೂಪರ್‌ ಮಾರ್ಕೆಟ್‌ಗಳು, ವಿತರಣಾ ಕೇಂದ್ರಗಳು ಮತ್ತು ರಸ್ತೆಗಳನ್ನು ನಿರ್ಬಂಧಿಸಿದ್ದಾರೆ.

ಆಮ್‌ಸ್ಟರ್‌ಡ್ಯಾಮ್‌ನ ಪ್ರಸಿದ್ಧ ಡ್ಯಾಮ್ ಸ್ಕ್ವೇರ್‌ನಲ್ಲಿ ಹತ್ತಾರು ಟ್ರಾಕ್ಟರ್‌ಗಳು "ಯುದ್ಧ ಪ್ರಾರಂಭವಾಗಿದೆ ಮತ್ತು ನಾವು ಗೆಲ್ಲುತ್ತೇವೆ" ಎಂಬ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ. ಅವರ ಹತಾಶೆಯನ್ನು ವ್ಯಕ್ತಪಡಿಸಲು ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ, ಟ್ರಾಕ್ಟರುಗಳು ನಡಿಗೆಯ ವೇಗದಲ್ಲಿ ಚಾಲನೆ ಮಾಡುವುದರಿಂದ ದೊಡ್ಡ ಟ್ರಾಫಿಕ್ ಜಾಮ್ ಉಂಟಾಗಿದೆ.

ಪೂರ್ವದಲ್ಲಿರುವ ಅರ್ನ್ಹೆಮ್ ಎಂಬ ನಗರದಲ್ಲಿ, ರೈತರು ಮತ್ತು ಅವರ ಟ್ರಾಕ್ಟರುಗಳು ಪ್ರಾಂತೀಯ ಸರ್ಕಾರಿ ಕಟ್ಟಡದ ಮುಂದೆ ಜಮಾಯಿಸಿವೆ. ಹೀಗಾಗಿ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ರೈತರು ಪ್ರವೇಶವನ್ನು ನಿರ್ಬಂಧಿಸಿದ್ದರಿಂದ, ಸೂಪರ್‌ಮಾರ್ಕೆಟ್‌ಗಳು ಖಾಲಿಯಾಗಿದ್ದು ಮತ್ತು ಗ್ರಾಹಕರು ಖಾಲಿ ಶಾಪಿಂಗ್ ಟ್ರಾಲಿಗಳೊಂದಿಗೆ ಮರುಳುತ್ತಿದ್ದಾರೆ.

English summary
A case of Dutch police shooting a 16-year-old boy on a tractor during a farmers' protest in northern Netherlands has come to light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X