Dubai Airshow 2025: ದುಬೈನಲ್ಲಿ ದಿಢೀರ್ ಪತನಗೊಂಡ ತೇಜಸ್ ಲಘು ಯುದ್ಧ ವಿಮಾನ!, ವೈರಲ್ ವಿಡಿಯೋ
Dubai Airshow 2025: ದೇಶದ ಪ್ರತಿಷ್ಠಿತ ಲಘು ಯುದ್ಧ ವಿಮಾನಗಳಲ್ಲಿ ಒಂದಾಗಿರುವ ತೇಜಸ್ ಯುದ್ಧ ವಿಮಾನ ಪತಗೊಂಡಿದೆ. ವಿಶ್ವದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನಗಳಲ್ಲಿ ಒಂದು ಎಂದೇ ಖ್ಯಾತಿ ಗಳಿಸಿರುವ ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಲಘು ಯುದ್ಧ ವಿಮಾನ ಪ್ರದರ್ಶನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ತೇಜಸ್ ಏಕಾಏಕಿ ಪತನಗೊಂಡಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅತ್ಯಂತ ಹಗುರವಾದ ಮತ್ತು ಚಿಕ್ಕ ಯುದ್ಧ ವಿಮಾನಗಳಲ್ಲಿ ಇದು ಒಂದಾಗಿದೆ.
ದುಬೈನ ಅಲ್ ಮಕ್ತುಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ ಮಧ್ಯಾಹ್ನ 2:9ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಭಾರೀ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು. ಕೂಡಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಮಾನದಲ್ಲಿದ್ದ ಪೈಲಟ್ ಅವರ ಸ್ಥಿತಿ ಹೇಗಿದೆ, ಯಾವ ಕಾರಣಕ್ಕೆ ಈ ಅವಘಡ ಸಂಭವಿಸಿದೆ ಎನ್ನುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇನ್ನು ದೇಶದ ಪ್ರಮುಖ ಹಾಗೂ ಪ್ರತಿಷ್ಠಿತ ಯುದ್ಧ ವಿಮಾನಗಳಲ್ಲಿ ತೇಜಸ್ ಪ್ರಮುಖವಾಗಿದೆ. ಆದರೆ ಈಗ ಸಂಭಸಿರುವ ದುರಂತದ ಹಿನ್ನೆಲೆಯ ಪ್ರಥಮಿಕ ತನಿಖೆ ನಡೆಯುತ್ತಿದೆ. ಪೈಲಟ್‌ಗೆ ಸಂಬಂಧಿಸಿದ ಮಾಹಿತಿಯನ್ನು ಭಾರತೀಯ ವಾಯುಪಡೆಯಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ದೃಢಪಡಿಸಬೇಕಿದೆ ಎಂದು ಹೇಳಲಾಗಿದೆ. ದುಬೈ ಏರ್ ಶೋನಲ್ಲಿ ಎಮಿರೇಟ್ಸ್ ಮತ್ತು ಫ್ಲೈದುಬೈ ನಂತಹ ಕಂಪನಿಗಳ ಜೊತೆ ಕೋಟ್ಯಾಂತರ ರೂಪಾಯಿ ಡಾಲರ್ ಒಪ್ಪಂದಗಳು ನಡೆಯುತ್ತಿದೆ ಇದರ ಬೆನ್ನಲ್ಲೇ ಈ ದುರ್ಘಟನೆ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಸಿಂಗಲ್ ಸೀಟ್ ಇರುವ ತೇಜಸ್ ಫೈಟರ್ ಜೆಟ್ ಈಗ ಪತನಗೊಂಡಿದೆ. ಇನ್ನು ಕೇವ ಎರಡು ವರ್ಷಗಳ ಅವಧಿಯಲ್ಲಿ ತೇಜಸ್ ವಿಮಾನ ಪತನಗೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿರುವ ವಿಚಾರವಾಗಿದೆ. ಇದಕ್ಕೂ ಮುನ್ನ ಮಾರ್ಚ್ 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನವಾಗಿದ್ದು ವರದಿಯಾಗಿತ್ತು. 2001ರಲ್ಲಿ ಈ ವಿಮಾನದ ಮೊದಲ ಹಾರಾಟ ನಡೆಸಿತ್ತು. ಇದಾದ ಸುದೀರ್ಘ ಅವಧಿಗೆ ವಿಮಾನ ಹಾರಾಟದಲ್ಲಿ ಯಾವುದೇ ದೋಷ ಅಥವಾ ಪತನಗೊಂಡಿರುವುದು ವರದಿಯಾಗಿರಲಿಲ್ಲ. ಅಂದು ಸಂಭವಿಸಿದ್ದ ದುರಂತದಲಲಿ ಪೈಲಟ್ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಏನಾಗಿದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ.
Terrible News of India’s Tejas crashing in Dubai Air show. No ejection by pilot spotted. Heartbreaking scene. Via @zone5aviation
— Aditya Raj Kaul (@AdityaRajKaul) November 21, 2025
pic.twitter.com/Uq6paQcIG1
ತೇಜಸ್ ಯುದ್ಧ ವಿಮಾನದ ವಿಶೇಷತೆಗಳೇನು ?
ದೇಶದ ಪ್ರತಿಷ್ಠಿತ ಯುದ್ಧ ವಿಮಾನಗಳಲ್ಲಿ ತೇಜಸ್ ಸಹ ಒಂದಾಗಿದೆ. 4.5 ತಲೆಮಾರಿನ ತಂತ್ರಜ್ಞಾನವನ್ನು ತೇಜಸ್ ಯುದ್ಧ ವಿಮಾನ ಇದಾಗಿದೆ. ಸ್ವದೇಶಿ ನಿರ್ಮಿತ ಉಪಕರಣಗಳು ಹಾಗೂ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯ ಹಾಗೂ ಹಾರಾಟ ಮಾಡುವ ಸಂದರ್ಭದಲ್ಲೇ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಇರುವುದು ಇದರ ವಿಶೇಷವಾಗಿದೆ. ಈ ವಿಮಾನದ ಮತ್ತೊಂದು ವಿಶೇಷವೆಂದರೆ ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಬರುವ ವ್ಯವಸ್ಥೆ ಸಹ ಇದರಲ್ಲಿ ಇದೆ.
ವಿಂಗ್ ಕಮಾಂಡರ್, ಪೈಲಟ್ ಸಾವು
ಇನ್ನು ದುಬೈ ಏರ್ ಶೋನಲ್ಲಿ ತೇಜಸ್ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ (ವಿಂಗ್ ಕಮಾಂಡರ್ ಮತ್ತು ಪೈಲಟ್) ನಿಮಾಂಶ್ ಸ್ಯಾಲ್ ಮೃತಪಟ್ಟಿದ್ದಾರೆ. ದುಬೈ ಏರ್ ಶೋನಲ್ಲಿ ಹಾರಾಟ ನಡೆಸಿ, ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತೀಯ ವಾಯುಸೇನೆಗೆ ತೇಜಸ್ ವಿಮಾನ ಪತನ ಸುದ್ದಿಯು ಆಘಾತವನ್ನುಂಟು ಮಾಡಿದೆ. ತೇಜಸ್ ವಿಮಾನ ಹಾರಾಟ ನಡೆಸುತ್ತಿದ್ದ ನಿಮಾಂಶ್ ಸ್ಯಾಲ್ ಅವರು ಈ ಅಘಡದಲ್ಲಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ.
ಏರ್ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡ ದುರ್ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸುತ್ತು. ಪ್ರದರ್ಶನದ ವೇಳೆ ನಿಯಂತ್ರಣ ತಪ್ಪಿದ ತೇಜಸ್ ನೇರವಾಗಿ ಪತನಗೊಂಡಿದ್ದು, ಕಣಾರ್ಧದಲ್ಲಿ ಬೆಂಕಿ ಜ್ವಾಲೆ ಹರಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ದುರಂತದಲ್ಲಿ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ನಿಮಾಂಶ್ ಸ್ಯಾಲ್ ಸಾವನ್ನಪ್ಪಿದ್ದಾರೆ. ಇನ್ನು ಯುವ ಪೈಲೆಟ್ ವಾಯುಸೇನೆಯ ತೇಜಸ್ ವಿಮಾನದಲ್ಲಿ ಅತೀ ಹೆಚ್ಚು ಪಳಗಿದವರಲ್ಲಿ ಒಬ್ಬರಾಗಿದ್ದಾರೆ.
Indian Air Force ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ದುಬೈ ವಾಯು ಪ್ರದರ್ಶನದಲ್ಲಿ ಶುಕ್ರವಾರ ನಡೆದ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಐಎಎಫ್ ತೇಜಸ್ ವಿಮಾನ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಪೈಲಟ್‌ಗೆ ಮಾರಣಾಂತಿಕ ಗಾಯಗಳಾಗಿವೆ. ಈ ದುರಂತಕ್ಕೆ ಐಎಎಫ್ ತೀವ್ರವಾಗಿ ವಿಷಾದಿಸುತ್ತಿದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ತಂಡವನ್ನು ರಚಿಸಲಾಗುತ್ತಿದೆ ಎಂದು ಹೇಳಲಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications