ಬೈಡನ್ ಸಂಪುಟದಲ್ಲಿ ಮತ್ತೊಬ್ಬ ಭಾರತೀಯೆ; ಆರತಿ ಪ್ರಭಾಕರ್ ವಿಜ್ಞಾನ ಸಲಹೆಗಾರ್ತಿ
ವಾಷಿಂಗ್ಟನ್, ಜೂನ್ 22: ಭಾರತ ಮೂಲದ ಡಾ. ಆರತಿ ಪ್ರಭಾಕರ್ ಅವರನ್ನು ಅಮೆರಿಕ ಸರಕಾರದ ವಿಜ್ಞಾನ ಸಲಹೆಗಾರ್ತಿಯಾಗಿ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.
"ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯ (OSTP) ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ಮತ್ತು ಅಧ್ಯಕ್ಷರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯಕಿಯಾಗಿ ಡಾ. ಆರತಿ ಪ್ರಭಾಕರ್ ಅವರನ್ನು ನಾಮನಿರ್ದೇಶನ ಮಾಡುವ ಉದ್ದೇಶವನ್ನು ಅಧ್ಯಕ್ಷ ಬೈಡನ್ ಇಂದು ಪ್ರಕಟಿಸಿದ್ದಾರೆ," ಎಂದು ಶ್ವೇತಭನವದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಭಾರತೀಯ ಅಮೆರಿಕನ್ ಸಮುದಾಯದವರು ಒಎಸ್‌ಟಿಪಿಯನ್ನು ಮುನ್ನಡೆಸಿ ವಿಜ್ಞಾನ, ತಂತ್ರಜ್ಞಾನಕ್ಕೆ ಪುಷ್ಟಿ ಕೊಡುತ್ತಾರೆ. ನಮ್ಮ ಅತ್ಯಂತ ಕಠಿಣ ಸವಾಲುಗಳಿಗೆ ಪರಿಹಾರ ಹುಡುಕುತ್ತಾರೆ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಾರೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ವೇಳೆ ಭಾರತೀಯ ಅಮೆರಿಕನ್ ಸಮುದಾಯದವರ ಗುಣಗಾನ ಮಾಡಿದ್ದಾರೆ.

ಆರತಿ ಪ್ರಭಾಕರ್ ಯಾವ ಊರಿನವರು?
1959, ಫೆಬ್ರವರಿ 2ರಂದು ದೆಹಲಿಯಲ್ಲಿ ಹುಟ್ಟಿದ ಆರತಿ ಪ್ರಭಾಕರ್ ಮೂರು ವರ್ಷದವರಿದ್ದಾಗ ಅಮೆರಿಕಕ್ಕೆ ತಮ್ಮ ಕುಟುಂಬದ ಜೊತೆ ಹೋಗಿ ಅಲ್ಲಿಯೇ ನೆಲಸಿದ್ಧಾರೆ. ಶಿಕಾಗೋದಲ್ಲಿ ಬಾಲ್ಯ ಕಳೆದ ಅವರು ೧೦ನೇ ವಯಸ್ಸಿನಲ್ಲಿ ಟೆಕ್ಸಾಸ್ ರಾಜ್ಯಕ್ಕೆ ಹೋದರು. ಅಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.
ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರತಿ ಪ್ರಭಾಕರ್ ಅನ್ವಯಿಕ ಭೌತಶಾಸ್ತ್ರ (Applied Physics) ದಲ್ಲಿ ಪಿಎಚ್‌ಡಿ ಪಡೆದು ಡಾ. ಆರತಿ ಪ್ರಭಾಕರ್ ಎನಿಸಿದರು. ಇಲ್ಲಿ ಈ ಸಬ್ಜೆಕ್ಟ್‌ನಲ್ಲಿ ಪಿಎಚ್‌ಡಿ ಪಡೆದ ಮೊದಲ ಮಹಿಳೆ ಎಂಬ ಗೌರವವೂ ಅಗದ್ದಾಗಿದೆ. ಅದೇ ಶಿಕ್ಷಣ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಕೂಡ ಮಾಡಿದರು.

ಡಾ. ಆರತಿ ಪ್ರಭಾಕರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪಕ್ವತೆ ಮತ್ತು ಅನುಭವ ಹೊಂದಿದ್ದಾರೆ. ಅಮೆರಿಕದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸ್ಟ್ಯಾಂಡರ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದಾರೆ. ಅಂಥದ್ದೊಂದು ಹುದ್ದೆ ನಿಭಾಯಿಸಿದ ಮೊದಲ ಮಹಿಳೆ ಅವರು. ರಕ್ಷಣಾ ಯೋಜನೆಯ ಡಿಎಆರ್‌ಪಿಎ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಸ್ಟೀಲ್ತ್ ಏರ್‌ಕ್ರಾಫ್ಟ್ (Stealth Aircraft) ಮೊದಲಾದ ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು ಈ ಸಂಸ್ಥೆಯಲ್ಲೇ. ಸ್ಟೀಲ್ತ್ ಏರ್‌ಕ್ರಾಫ್ಟ್ ಎಂದರೆ ರಾಡಾರ್ ಕಣ್ಣಿಗೆ ಬೀಳದಂತೆ ಮುನ್ನುಗ್ಗಿ ಹೋಗಬಲ್ಲ ಯುದ್ಧವಿಮಾನ.
ಕ್ಯಾಬಿನೆಟ್ ಸ್ಥಾನ:
ಜೋ ಬೈಡನ್ ಸರಕಾರದ ಸಂಪುಟದಲ್ಲಿ ಡಾ. ಆರತಿ ಪ್ರಭಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಸಿಕ್ಕಿದೆ. ಬೈಡನ್ ಸಂಪುಟಕ್ಕೆ ಈಗ ಇಬ್ಬರು ಭಾರತೀಯ ಮೂಲದವರು ಸಿಕ್ಕಂತಾಗಿದೆ. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications